SIR : ರಾಜ್ಯದಲ್ಲಿ ಶೇ. 19ರಷ್ಟು ಮತದಾರರ ಹೆಸರು ಡಿಲಿಟ್‌ : ಅನ್ಬು ಕುಮಾರ್‌

ಬೆಂಗಳೂರು ಆ.12 : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ  ಕೈಬಿಡುವವರ ಪಟ್ಟಿಯಲ್ಲಿ 1.08 ಕೋಟಿ ಮತದಾರರು ಇದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1.08 ಕೋಟಿಗಿಂತಲೂ ಅಧಿಕ (ಸುಮಾರು ಶೇ. 19ರಷ್ಟು) ಮತದಾರರನ್ನು ಎಎಸ್‌ಡಿಡಿಒ ಅಂದರೆ ಗೈರುಹಾಜರು, ಸ್ಥಳಾಂತರ, ಮೃತ, ನಕಲಿ ಹಾಗೂ ಇತರೆ ವರ್ಗಕ್ಕೆ ಸೇರಿಸಲಾಗಿದೆ. ಇವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಹೇಳಿದ್ದಾರೆ.

ಬೂತ್ ಮಟ್ಟದ ಸಿಬ್ಬಂದಿ  ಪ್ರತಿಯೊಂದು ಮನೆಗೂ ತೆರಳಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಿಗದವರನ್ನು ಗೈರುಹಾಜರು, ವಾಸಸ್ಥಳ ಬದಲಾಯಿಸಿದವರನ್ನು ಸ್ಥಳಾಂತರ  ಮತ್ತು ಮರಣ ಹೊಂದಿದವರನ್ನು ಮೃ’   ಎಂಬುದಾಗಿ ದಾಖಲಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

65 ಲಕ್ಷಕ್ಕೂ ಹೆಚ್ಚು ಮತದಾರರ ವಲಸೆ :

ರಾಜ್ಯದಲ್ಲಿ ನೋಂದಾಯಿತವಾಗಿರುವ ಒಟ್ಟು 5.54 ಕೋಟಿ ಮತದಾರರ ಪೈಕಿ 1,08,75,304 ಜನರನ್ನು ಎಎಸ್‌ಡಿಡಿಒ ವ್ಯಾಪ್ತಿಗೆ ಗುರುತಿಸಲಾಗಿದೆ. ಈ ಪೈಕಿ ಸಿಂಹಪಾಲು ಅಂದರೆ ಅಂದಾಜು  65,73,976 ಜನರು ಕಾಯಂ ಆಗಿ ಬೇರೆಡೆಗೆ ವಲಸೆ ಹೋಗಿರುವುದು ಕಂಡುಬಂದಿದೆ. ಇದಲ್ಲದೆ, 16,36,673 ಮೃತಪಟ್ಟ ಮತದಾರರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿದ್ದ 7,01,412 ನಕಲಿ ಮತದಾರರನ್ನು ಪತ್ತೆ ಹಚ್ಚಲಾಗಿದೆ. ಉಳಿದಂತೆ 4,14,486 ಜನರನ್ನು ಇತರೆ ವಿಭಾಗಗಳಲ್ಲಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಡಿಜಿಟಲೀಕರಣ:
ರಾಜ್ಯಾದ್ಯಂತ ಒಟ್ಟು 5,54,32,314 ಗಣತಿ ಅರ್ಜಿಗಳನ್ನು ವಿತರಿಸಲಾಗಿದ್ದು, ಶೇ. 100 ರಷ್ಟು ವಿತರಣೆ ಪೂರ್ಣಗೊಂಡಿದೆ. ಇವುಗಳಲ್ಲಿ ಈಗಾಗಲೇ 4.45 ಕೋಟಿಗೂ ಹೆಚ್ಚಿನ ಅರ್ಜಿಗಳನ್ನು ಕಂಪ್ಯೂಟರ್‌ಗೆ ಅಳವಡಿಸಲಾಗಿದ್ದು, ಒಟ್ಟು ಶೇ. 80.38 ರಷ್ಟು ಡಿಜಿಟಲೀಕರಣ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಜೂನ್ 16, 2026ರ ವರದಿಯ ಆಧಾರದ ಮೇಲೆ ವಾಸವಿಲ್ಲದವರ ವಿವರಗಳನ್ನು ಗೈರುಹಾಜರಿ ಮತ್ತು ವರ್ಗಾವಣೆ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ಲೋಪದೋಷಗಳಿದ್ದರೆ ಸಾರ್ವಜನಿಕರು ತಕ್ಷಣವೇ ಸಂಬಂಧಪಟ್ಟ ಬಿಎಲ್‌ಒಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು. ಹೆಸರು ಸೇರ್ಪಡೆಗೆ ಫಾರಂ-6 ಸಲ್ಲಿಸಲು ಅವಕಾಶ ನೀಡಲಾಗಿದೆ.

ಮುಂದಿನ ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು. ಹೊಸದಾಗಿ ಮತದಾನದ ಹಕ್ಕು ಪಡೆಯಬಯಸುವವರು ಜಾಲತಾಣದ ಮೂಲಕವೂ ಫಾರಂ-6 ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಇವುಗಳ ಪರಿಶೀಲನೆಯನ್ನು ಆಗಸ್ಟ್ 24ರ ನಂತರ ನಡೆಸಲಾಗುತ್ತದೆ. ಮುಖ್ಯವಾಗಿ ಅಕ್ಟೋಬರ್ 1, 2026 ರ ವೇಳೆಗೆ 18 ವರ್ಷ ಪೂರೈಸುವ ಎಲ್ಲಾ ಯುವಕ-ಯುವತಿಯರು ಕಡ್ಡಾಯವಾಗಿ ನಮೂನೆ-6 ರ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಅನ್ಬುಕುಮಾರ್ ವಿನಂತಿಸಿದ್ದಾರೆ.

More articles

Latest article

Most read