ಕೋಲಾರದಲ್ಲಿ ಭೀಮನ ಅಮಾವಾಸ್ಯೆಯಂದು ಪತಿಯನ್ನು ಮುಗಿಸಿದ ಪತ್ನಿ, ಮಗ

ಕೋಲಾರ :  ಭೀಮನ ಅಮಾವಾಸ್ಯೆ ದಿನದಂದು ಗಂಡನ ಪೂಜೆಯನ್ನು ಮಾಡಬೇಕಾದ ಪತ್ನಿ ತನ್ನ ಮಗನೊಂದಿಗೆ ಸೇರಿ ಗಂಡನನ್ನು  ಕೊಲೆ ಮಾಡಿರುವ ಘಟನೆ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಸಂದ್ರ ಗ್ರಾಮದಲ್ಲಿ ನಡೆದಿದೆ. 

ಮೃತ ಪತಿಯನ್ನು ನಾರಾಯಣಸ್ವಾಮಿ  (68 ) , ಹಂತಕಿ ಪತ್ನಿಯನ್ನು ಜಗದಾಂಬ ಎಂದೂ ಆಕೆಯ ಮಗನನ್ನು ಪ್ರಮೋದ್ ಎಂದು ಗುರುತಿಸಲಾಗಿದೆ. 

ಆಗಾಗ ಆಸ್ತಿಗಾಗಿ  ಮನಸ್ತಾಪಗಳು ಉಂಟಾಗುತ್ತಿದ್ದ ಕಾರಣ,   ತಾಯಿ ಮಗ ಇಬ್ಬರೂ ಕಳೆದ 15 ವರ್ಷಗಳಿಂದ ಬೀಜಗೊಂಡನಹಳ್ಳಿ ಟೋಲ್ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆಸ್ತಿ ಪಾಲಿನ ವಿಚಾರದಲ್ಲಿ ಕಳೆದೊಂದು ವಾರದ ಹಿಂದೆ ಊರಿನವರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಸಹ ನಡೆದಿತ್ತು.  ನಿನ್ನೆ ಸಂಜೆ   ನಾರಾಯಣಸ್ವಾಮಿಯ ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ನಂತರ ಪ್ರಮೋದ್ ತನ್ನ ತಂದೆಯ ಮೃತ ದೇಹವನ್ನು ನಗರದ ಎಸ್ಎನ್ಆರ್ ಆಸ್ಪತ್ರೆಗೆ ಸಾಗಿಸಿದ್ದಾನೆ ಎನ್ನಲಾಗಿದೆ.

ವೇಮಗಲ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಕಳೆದ ರಾತ್ರಿಯ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿ ಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು  ಇನ್ಸ್ಪೆಕ್ಟರ್ ಬಿ ಪಿ ಮಂಜು ತಾಯಿ ಹಾಗೂ ಮಗನನ್ನು ಬಂಧಿಸಿದ್ದಾರೆ.

More articles

Latest article

Most read