ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ *ತ

ಕೋಲಾರ : ತೋಟದ ಕೆಲಸಕ್ಕೆಂದು ಕೂಲಿ ಆಳುಗಳನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ನ ಟ್ರ್ಯಾಲಿಗೆ ಬೋರ್ವೆಲ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ.

ಉಳಿದ ಕೂಲಿ ಆಳುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪಾರ್ಶ್ವಗಾನಹಳ್ಳಿ ಸಮೀಪ ಇಂದು ಮುಂಜಾನೆ ನಡೆದಿದೆ.

ಮೃತ ದುರ್ದೈವಿಯನ್ನು 45 ವರ್ಷದ ವಸಂತ ಎಂದು ಗುರುತಿಸಲಾಗಿದೆ. ಪಾರ್ಶ್ವಗಾನಹಳ್ಳಿಯ ವೆಂಕಟೇಶಪ್ಪ ಇಂದು ಬೆಳಿಗ್ಗೆ ತನ್ನ ಟ್ರ್ಯಾಕ್ಟರ್ ನಲ್ಲಿ ತೋಟದ ಕೆಲಸಕ್ಕೆ ಎಂದು ಆಳುಗಳನ್ನು ಕಳೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಉಳಿದ 6 ಮಂದಿ ಕೂಲಿ ಆಳುಗಳು ನಗರದ ಎಸ್ ಎನ್ ಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಆಗುತ್ತಿದ್ದಂತೆಯೇ ಬೋರ್ವೆಲ್ ಲಾರಿ ಚಾಲಕ ಅಲ್ಲಿಂದ ನಾಪತ್ತೆ ಆಗಿದ್ದಾನೆ.

More articles

Latest article

Most read