ಮಹಾರಾಷ್ಟ್ರ : ಇಲ್ಲಿನ ಭಿವಂಡಿಯಲ್ಲಿ ನಾಲ್ಕು ಅಂತಸ್ತಿನ ವಸತಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, ಏಳರಿಂದ ಎಂಟು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ 11.30ರ ಸುಮಾರಿಗೆ ಬಾಲಾಜಿ ನಗರದ ‘ಕೋಹಿನೂರ್ ಕಟ್ಟಡ’ದ ಒಂದು ಭಾಗ ಕುಸಿದು ಬಿದ್ದಾಗ ಈ ಘಟನೆ ಸಂಭವಿಸಿದೆ.
“ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಒಬ್ಬರನ್ನು ಹೊರತುಪಡಿಸಿ ಉಳಿದವರ ಗುರುತು ಇನ್ನೂ ಪತ್ತೆಯಾಗಬೇಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ,” ಎಂದು ರೆಸಿಡೆಂಟ್ ಡೆಪ್ಯುಟಿ ಕಲೆಕ್ಟರ್ ಸಂದೀಪ್ ಮಾನೆ ತಿಳಿಸಿದ್ದಾರೆ.
ಆರು-ಏಳು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿಕೊಂಡಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಲ್ಲದೆ, ಗಾಯಗೊಂಡಿದ್ದ ಬಾಲಕನೊಬ್ಬನನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕಟ್ಟಡವು ಒಟ್ಟು 48 ಕೊಠಡಿಗಳನ್ನು (ಪ್ರತಿ ಅಂತಸ್ತಿನಲ್ಲಿ 12 ಕೊಠಡಿಗಳು) ಹೊಂದಿದ್ದು, ಇದನ್ನು ಸ್ಥಳೀಯ ಆಡಳಿತವು ‘ಅಪಾಯಕಾರಿ’ ಎಂದು ಘೋಷಿಸಿತ್ತು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ದುರಸ್ತಿ ಕಾರ್ಯ ನಡೆಯುತ್ತಿದ್ದಾಗಲೇ ಈ ಕಟ್ಟಡ ಕುಸಿದು ಬಿದ್ದಿದೆ.
ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ, ಕಟ್ಟಡದಿಂದ “ಜೋರಾದ ಬಿರುಕು ಬಿಡುವ ಶಬ್ದಗಳು” ಕೇಳಿಬಂದಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಈ ಶಬ್ದಗಳಿಂದ ಆತಂಕಗೊಂಡ ಸ್ಥಳೀಯರು, ಹಲವು ಕುಟುಂಬಗಳನ್ನು ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು. ಆದಾಗ್ಯೂ, ಕೆಲವರು ಕಟ್ಟಡದಿಂದ ಹೊರಬರುತ್ತಿದ್ದಾಗಲೇ ಅದರ ‘ಬಿ’ (B) ವಿಭಾಗವು ಕುಸಿದುಬಿತ್ತ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಥಾಣೆ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಅಗ್ನಿಶಾಮಕ ದಳದ ತಂಡಗಳನ್ನು ಒಳಗೊಂಡ ಬಹು-ಸಂಸ್ಥೆಗಳ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಶ್ವಾನ ದಳ, ನಾಲ್ಕು ಅಗ್ನಿಶಾಮಕ ವಾಹನಗಳು, ಎರಡು ಆಂಬ್ಯುಲೆನ್ಸ್ಗಳು ಮತ್ತು ಭಾರೀ ಮಣ್ಣು ಸಾಗಿಸುವ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ.
ಮಹಾರಾಷ್ಟ್ರದಲ್ಲಿ ವಸತಿ ಕಟ್ಟಡ ಕುಸಿದು ಆರು ಮಂದಿ ಸಾವು : ಅವಶೇಷಗಳಡಿ ಇನ್ನೂ ಏಳು ಮಂದಿ ಸಿಲುಕಿರುವ ಶಂಕೆ