ಕಲಬುರಗಿ ವಿಸ್ತೃತ ಸ್ಥಳೀಯ ಯೋಜನಾ ಪ್ರದೇಶದ 2041ರ ಮಾಸ್ಟರ್‌ಪ್ಲಾನ್‌ಗೆ ಅನುಮೋದನೆ : ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಸೆಪ್ಟೆಂಬರ್ 30: ಕಲಬುರಗಿ ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಮತ್ತು ಯೋಜಿತ ಅಭಿವೃದ್ಧಿಗೆ ಅಗತ್ಯವಾದ ದೀರ್ಘಕಾಲೀನ ನಗರಾಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅಮೃತ್ ಯೋಜನೆಯಡಿ ಸಿದ್ಧಪಡಿಸಿರುವ ಕಲಬುರಗಿ ವಿಸ್ತೃತ ಸ್ಥಳೀಯ ಯೋಜನಾ ಪ್ರದೇಶದ ಜಿಐಎಸ್‌ ಆಧಾರಿತ ಮಾಸ್ಟರ್‌ಪ್ಲಾನ್‌ (ಪರಿಷ್ಕೃತ–III) 2041ಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಸೆಕ್ಷನ್‌ 13(1)ರಡಿ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯು ಸೆಪ್ಟೆಂಬರ್ 29, 2026ರಂದು ಸರ್ಕಾರಿ ಆದೇಶ ಹೊರಡಿಸಿದೆ.

2041ರ ವೇಳೆಗೆ 18 ಲಕ್ಷ ಜನಸಂಖ್ಯೆ ನಿರೀಕ್ಷೆ
ಮಾಸ್ಟರ್‌ಪ್ಲಾನ್‌ನಲ್ಲಿ ಕಲಬುರಗಿ ವಿಸ್ತೃತ ಸ್ಥಳೀಯ ಯೋಜನಾ ಪ್ರದೇಶದ ಭವಿಷ್ಯದ ಜನಸಂಖ್ಯೆ ಹಾಗೂ ನಗರೀಕರಣದ ಅಗತ್ಯಗಳನ್ನು ಪರಿಗಣಿಸಲಾಗಿದೆ. 2011ರ ಜನಗಣತಿ ಪ್ರಕಾರ ಈ ಪ್ರದೇಶದ ಜನಸಂಖ್ಯೆ 6,25,623 ಆಗಿದ್ದು, 2041ರ ವೇಳೆಗೆ ಸುಮಾರು 18 ಲಕ್ಷ ಜನಸಂಖ್ಯೆ ತಲುಪುವ ನಿರೀಕ್ಷೆಯನ್ನು ಆಧರಿಸಿ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಒಟ್ಟು ಸುಮಾರು 44,629 ಹೆಕ್ಟೇರ್‌ ಪ್ರದೇಶವನ್ನು ಯೋಜನಾ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದ್ದು, ಇದರಲ್ಲಿ ಸುಮಾರು 18,000 ಹೆಕ್ಟೇರ್‌ ಪ್ರದೇಶವನ್ನು ಅಭಿವೃದ್ಧಿ ಹಾಗೂ ನಗರೀಕರಣಕ್ಕೆ ಸಂಬಂಧಿಸಿದಂತೆ ಯೋಜಿಸಲಾಗಿದೆ. ವಿಸ್ತೃತ ಸ್ಥಳೀಯ ಯೋಜನಾ ಪ್ರದೇಶಕ್ಕೆ ಹೆಚ್ಚುವರಿಯಾಗಿ 11 ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂಬ ಮಾಹಿತಿಯನ್ನೂ ಸಚಿವ ಪ್ರಿಯಾಂಕ್‌ ಖರ್ಗೆ ನೀಡಿದ್ದಾರೆ.

ವಸತಿ, ವಾಣಿಜ್ಯ, ಕೈಗಾರಿಕೆ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ
ಮಾಸ್ಟರ್‌ಪ್ಲಾನ್‌ನಲ್ಲಿ ಸುಮಾರು 18,000 ಹೆಕ್ಟೇರ್‌ ಅಭಿವೃದ್ಧಿ ಪ್ರದೇಶವನ್ನು ವಿವಿಧ ಬಳಕೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ 9,367.20 ಹೆಕ್ಟೇರ್‌ (52.04%) ವಸತಿ ಪ್ರದೇಶ, 1,080 ಹೆಕ್ಟೇರ್‌ (6%) ವಾಣಿಜ್ಯ ಪ್ರದೇಶ, 1,269 ಹೆಕ್ಟೇರ್‌ (7.05%) ಕೈಗಾರಿಕಾ ಪ್ರದೇಶ ಹಾಗೂ 1,261.80 ಹೆಕ್ಟೇರ್‌ (7.01%) ಸಾರ್ವಜನಿಕ ಮತ್ತು ಅರೆ-ಸಾರ್ವಜನಿಕ ಬಳಕೆಯ ಪ್ರದೇಶವಾಗಿ ಗುರುತಿಸಲಾಗಿದೆ. ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 2165.40 ಹೆಕ್ಟೇರ್‌ ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಭವಿಷ್ಯದ ನಗರ ಬೆಳವಣಿಗೆಗೆ ಯೋಜಿತ ಚೌಕಟ್ಟು
ಕಲಬುರಗಿ ನಗರ ಮತ್ತು ವಿಸ್ತೃತ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಮುಂದಿನ ಹಂತದ ನಗರ ವಿಸ್ತರಣೆ, ವಸತಿ ಅಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳು, ಸಾರ್ವಜನಿಕ ಸೌಲಭ್ಯಗಳು, ಸಾರಿಗೆ ವ್ಯವಸ್ಥೆ ಹಾಗೂ ಮುಕ್ತ ಪ್ರದೇಶಗಳ ಅಭಿವೃದ್ಧಿಗೆ ಅಗತ್ಯವಾದ ಯೋಜನಾ ಚೌಕಟ್ಟನ್ನು ಮಾಸ್ಟರ್‌ಪ್ಲಾನ್ ಒದಗಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಜಿಐಎಸ್‌ ಆಧಾರಿತ ಯೋಜನೆಯ ಮೂಲಕ ಭೂಬಳಕೆ ಹಾಗೂ ನಗರಾಭಿವೃದ್ಧಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಉದ್ದೇಶ ಹೊಂದಲಾಗಿದೆ. ಭವಿಷ್ಯದ ಜನಸಂಖ್ಯೆ ಮತ್ತು ನಗರೀಕರಣದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಗೆ ಯೋಜಿತ ಮಾರ್ಗದರ್ಶನ ದೊರೆಯಲಿದೆ. ಸರ್ಕಾರದ ಆದೇಶದಂತೆ, ಅನುಮೋದಿತ ಮಾಸ್ಟರ್‌ಪ್ಲಾನ್‌ನ್ನು ಸಂಬಂಧಿತ ನಿಯಮಗಳು ಹಾಗೂ ನಿಗದಿತ ಪ್ರಕ್ರಿಯೆಗಳಿಗೆ ಅನುಗುಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

More articles

Latest article

Most read