ಬೆಂಗಳೂರು : ರಾಜ್ಯದಲ್ಲಿ ಎಸ್ಐಆರ್ ಅವಧಿಯನ್ನು ವಿಸ್ತರಣೆ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಜುಲೈ 29ರಂದು ಮತದಾರರು ಎಸ್ಐಆರ್ ಗಣತಿ ನಮೂನೆ ಸಲ್ಲಿಸಲು ಕೊನೆ ದಿನವಾಗಿತ್ತು. ಅದನ್ನು ಈಗ ಆಗಸ್ಟ್ 8 ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕರಡು ಪಟ್ಟಿಯನ್ನು ಆಗಸ್ಟ್ 5ರ ಬದಲಿಗೆ ಆಗಸ್ಟ್ 17ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ. ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7ರ ಬದಲಿಗೆ ಅಕ್ಟೋಬರ್ 19 ರಂದು ಪ್ರಕಟಿಸಲಾಗುವುದು ಎಂದು ಪರಿಷ್ಕೃತ ಪ್ರಕಟಣೆ ತಿಳಿಸಿದೆ.


