ನ್ಯಾಯಾಧೀಶರ ಖುರ್ಚಿ ಮೇಲೆ ಮಾಟ ಮಂತ್ರ ಆರೋಪ : 65 ವರ್ಷದ ಮಹಿಳೆಯ ಬಂಧನ

ಬೆಂಗಳೂರು: ಚಿಕ್ಕಬಳ್ಳಾಪುರದ ನ್ಯಾಯಾಲಯ ಸಂಕೀರ್ಣದೊಳಗೆ ನ್ಯಾಯಾಧೀಶರ ಕುರ್ಚಿ ಮತ್ತು ವೇದಿಕೆಯ ಮೇಲೆ ಮಾಟಮಂತ್ರ ಮಾಡಿದ ಆರೋಪದ ಮೇಲೆ 65 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.

ಚಿಕ್ಕಬಳ್ಳಾಪುರದ ಮೊದಲ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದ ಕೋಣೆಯೊಳಗೆ ಜುಲೈ 9 ರಂದು ಬೆಳಿಗ್ಗೆ 9.40 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ತನಿಖೆ ಮತ್ತು ನ್ಯಾಯಾಲಯದ ಅಧಿಕಾರಿಗಳು ಸಲ್ಲಿಸಿದ ದೂರಿನ ನಂತರ ಮಂಜುಳಾ ಅವರನ್ನು ಜುಲೈ 11 ರಂದು ಬಂಧಿಸಲಾಗಿದೆ.
ತಮ್ಮ ವಿರುದ್ಧದ ಪ್ರಕರಣವನ್ನು ಸುಲಭವಾಗಿ ಕೊನೆಗೊಳಿಸಬಹುದು ಎಂಬ ನಂಬಿಕೆಯಿಂದ ನ್ಯಾಯಾಧೀಶರ ಟೇಬಲ್‌ ಮೇಲೆ ಬಿಳಿ ಸಾಸಿವೆಯನ್ನು ಚೆಲ್ಲಿದ್ದಾರೆ. ಈ ಮೂಲಕ ಮಾಟ ಮಂತ್ರವನ್ನು ಪ್ರಯೋಗಿಸಿದ್ದಾರೆ ಎನ್ನಲಾಗಿದೆ.
ಬಂಧಿತ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಟಮಂತ್ರ ಆಚರಣೆ?

ನ್ಯಾಯಾಲಯ ಆಡಳಿತವು ಸಲ್ಲಿಸಿದ ದೂರಿನ ಪ್ರಕಾರ, ಚಿಕ್ಕಬಳ್ಳಾಪುರದ ವಲಸಣ್ಣ ಬೀದಿಯ ನಿವಾಸಿ ಮಂಜುಳಾ ಅವರು ತೆರೆದ ನ್ಯಾಯಾಲಯದ ಕೋಣೆಗೆ ಪ್ರವೇಶಿಸಿ ನ್ಯಾಯಾಧೀಶರ ಕುರ್ಚಿ ಮತ್ತು ವೇದಿಕೆಯ ಮೇಲೆ ಬಿಳಿ ಸಾಸಿವೆ ಬೀಜಗಳನ್ನು ಹರಡಿದ್ದಾರೆ ಎಂದು ಆರೋಪಿಸಲಾಗಿದೆ.

More articles

Latest article

Most read