ಮೊಮ್ಮಗಳಿಂದ ಮೈಸೂರಿನಲ್ಲಿ ಎಸ್‌.ಜಾನಕಿ ಅಂತ್ಯಕ್ರಿಯೆ

ಮೈಸೂರು : ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್‌ ಜಾನಕಿ ಅವರ ಅಂತಿಮ ದರ್ಶನ ನಡೆಯುತ್ತಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ.

ಮೊಮ್ಮಗಳು ಅಪ್ಸರಾ ಅವರಿಂದ ಎಸ್.ಜಾನಕಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕೆಲ ವರ್ಷಗಳ ಹಿಂದೆ ಜಾನಕಿ ಅವರ ಪುತ್ರ ನಿಧನರಾದರು. ಹೀಗಾಗಿ, ಅವರ ಮಗನ ಮಗಳಿಂದ ಗಾಯಕಿಯ ಅಂತ್ಯಸಂಸ್ಕಾರ ನಡೆಯಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಹೆಚ್.ಡಿ.ಕೋಟೆ ರಸ್ತೆಯ ಕಣಿಯನಹುಂಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

ಗಾನಕೋಗಿಲೆ ಎಸ್. ಜಾನಕಿ ಮತ್ತು ಮೈಸೂರು ನಂಟು : ಮೈಸೂರಿನೊಂದಿಗೆ ಅವಿನಾಭಾವ ಸಂಬಂಧ. ಮೈಸೂರಿನಲ್ಲಿ ಕೊನೆಯ ಸಂಗೀತ ಕಚೇರಿ 2017ರ ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ನಡೆದ ತಮ್ಮ ನಿವೃತ್ತಿ ಸಂಗೀತ ಕಚೇರಿಯಲ್ಲಿ ಎಸ್. ಜಾನಕಿ ಅವರು, “ಇದು ನನ್ನ ಕೊನೆಯ ಸಂಗೀತ ಕಚೇರಿ” ಎಂದು ಭಾವನಾತ್ಮಕವಾಗಿ ಘೋಷಿಸಿದ್ದರು.

ಮೈಸೂರನ್ನೇ ತಮ್ಮ ನೆಲೆಯಾಗಿ ಆಯ್ಕೆ ನಿವೃತ್ತಿಯ ನಂತರ ಶಾಂತ, ಸುಂದರ ವಾತಾವರಣಕ್ಕಾಗಿ ಮೈಸೂರನ್ನು ತಮ್ಮ ನೆಲೆಯಾಗಿ ಆಯ್ಕೆ ಮಾಡಿಕೊಂಡು ಅಲ್ಲಿಯೇ ವಾಸವಿದ್ದರು. ಮೈಸೂರು ಮೇಲಿನ ಪ್ರೀತಿ ಮೈಸೂರಿನ ಸಂಸ್ಕೃತಿ, ಜನರ ಪ್ರೀತಿ ಹಾಗೂ ನಗರದ ಶಾಂತ ವಾತಾವರಣವನ್ನು ಅವರು ಸದಾ ಮೆಚ್ಚಿಕೊಂಡಿದ್ದರು.ನಮನಗಳು ಗಾನದ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದ ಎಸ್. ಜಾನಕಿ ಅವರು, ಮೈಸೂರಿನೊಂದಿಗಿನ ತಮ್ಮ ವಿಶೇಷ ಬಾಂಧವ್ಯದಿಂದಲೂ ಸದಾ ನೆನಪಿನಲ್ಲಿ ಉಳಿಯುತ್ತಾರೆ.

ಮೂಲತಃ ಆಂಧ್ರಪ್ರದೇಶದವರು ಜಾನಕಮ್ಮ
1938 ಏಪ್ರಿಲ್ 23 ರಂದು ಆಂಧ್ರಪ್ರದೇಶದ ರೇಪಲ್ಲೆಯಲ್ಲಿ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅಪಾರ ಒಲವು ಹೊಂದಿದ್ದರು. ೧೯೫೭ರಲ್ಲಿ ‘ವಿದಿಯಿನ್ ವಿಳಯಾಟ್ಟು’ ಎಂಬ ತಮಿಳು ಚಿತ್ರದ ಮೂಲಕ ಹಿನ್ನೆಲೆ ಗಾಯನ ಶುರುಮಾಡಿದ ಅವರು, ಆ ನಂತರ ಸೃಷ್ಟಿಸಿದ್ದು ಒಂದು ಬಹುದೊಡ್ಡ ಇತಿಹಾಸ. ಮುಗ್ಧ ಮಗುವಿನ ಧ್ವನಿಯಿಂದ ಹಿಡಿದು, ಯುವತಿ, ವಯಸ್ಸಾದ ಅಜ್ಜಿಯವರೆಗೂ ಯಾವುದೇ ಪಾತ್ರಕ್ಕಾದರೂ ತಮ್ಮ ಧ್ವನಿಯನ್ನು ಲೀಲಾಜಾಲವಾಗಿ ಬದಲಾಯಿಸಬಲ್ಲ ಮಾಂತ್ರಿಕ ಶಕ್ತಿ ಅವರಲ್ಲಿತ್ತು. ಈ ವಿಶಿಷ್ಟ ಕೌಶಲ್ಯವೇ ಅವರನ್ನು ಭಾರತೀಯ ಚಿತ್ರರಂಗದ ದಂತಕಥೆಯನ್ನಾಗಿ ಮಾಡಿತು.

ಕನ್ನಡ ಚಿತ್ರರಂಗದ ಸುವರ್ಣಯುಗದಲ್ಲಿ ಇವರ ಧ್ವನಿ ಒಂದು ಅವಿಭಾಜ್ಯ ಅಂಗವಾಗಿತ್ತು. ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅವರಂತಹ ದಿಗ್ಗಜರ ಕಾಲದಲ್ಲಿ ಬಹುತೇಕ ನಾಯಕಿಯರ ಭಾವನೆಗಳಿಗೆ ಇವರದ್ದೇ ಧ್ವನಿಯ ಮೂಲಕ ಜೀವ ತುಂಬಲಾಗುತ್ತಿತ್ತು. ಜಿ.ಕೆ. ವೆಂಕಟೇಶ್, ರಾಜನ್-ನಾಗೇಂದ್ರ, ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ “ಜೊತೆಯಲಿ ಜೊತೆ ಜೊತೆಯಲಿ”, “ಗಗನವು ಎಲ್ಲೋ”, “ಪೂಜಿಸಲೆಂದೇ ಹೂಗಳ ತಂದೆ” ದಂತಹ ಸಾವಿರಾರು ಗೀತೆಗಳು ಕನ್ನಡಿಗರ ನಾಡಿಮಿಡಿತವಾಗಿವೆ.

ಬರೋಬ್ಬರಿ ೨೦ಕ್ಕೂ ಹೆಚ್ಚು ಭಾಷೆಗಳಲ್ಲಿ 48ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಜಾನಕಿ ಅವರ ಸಾಧನೆಗೆ ಸಾಟಿಯೇ ಇಲ್ಲ. ಇವರ ಈ ಅದ್ಭುತ ಗಾಯನ ಸೇವೆಗಾಗಿ ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ವಿವಿಧ ರಾಜ್ಯ ಸರ್ಕಾರಗಳಿಂದ ೩೩ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳು ಒಲಿದು ಬಂದಿವೆ. ೨೦೧೩ ರಲ್ಲಿ ಭಾರತ ಸರ್ಕಾರವು ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ಘೋಷಿಸಿತ್ತು. ಆದರೆ ದಕ್ಷಿಣ ಭಾರತದ ಕಲಾವಿದರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂಬ ನಿಲುವಿಗೆ ಅಂಟಿನಿಂತ ಅವರು, ಆ ಪ್ರಶಸ್ತಿಯನ್ನು ಅತ್ಯಂತ ವಿನಮ್ರವಾಗಿ ತಿರಸ್ಕರಿಸಿ ತಮ್ಮ ಅಪ್ರತಿಮ ಸ್ವಾಭಿಮಾನವನ್ನು ಮೆರೆದಿದ್ದರು.

ಮೈಸೂರಿನಲ್ಲೇ ಕೊನೆಯುಸಿರು
ಜುಲೈ 11ರಂದು ಶನಿವಾರ ಸಂಜೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಹೃದಯ ಸ್ತಂಭನದಿಂದ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರ ಭೌತಿಕ ಶರೀರ ನಮ್ಮನ್ನು ಅಗಲಿದ್ದರೂ, ಅವರ ಧ್ವನಿಯ ಮಾಧುರ್ಯ ಮುಂದಿನ ಅನೇಕ ತಲೆಮಾರುಗಳಿಗೂ ಸ್ಫೂರ್ತಿಯಾಗಿ ಉಳಿಯಲಿದೆ.

More articles

Latest article

Most read