ಕೋಲಾರ : ಬೆಳ್ಳಂಬೆಳಗ್ಗೆ ಶ್ರೀನಿವಾಸಪುರ ತಾಲೂಕು ಎಲ್ಲದೂರು ಹೋಬಳಿ ಗ್ರಾಮ ಪಂಚಾಯಿತಿ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಗ್ರೇಡ್ 2 ಕಾರ್ಯದರ್ಶಿ ಶಿವಶಂಕರ್ ಹಾಗೂ ಗೌತಮಿ ಜೂನಿಯರ್ ಇಂಜಿನಿಯರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಸುನಿಲ್ ಕುಮಾರ್ ಎಂಬುವರನ್ನು ಲೋಕಾಯುಕ್ತ ಬಲೆಗೆ ಕೆಡವಿಕೊಂಡಿದ್ದಾರೆ.
ಕಂಟ್ರಾಕ್ಟರ್ ಸುನಿಲ್ ಕುಮಾರ್ ಎಂಬಾತನ ಬಿಲ್ ಮಾಡಿಸಿಕೊಡಲು ಆತನಿಗೆ 9 ಲಕ್ಷ ರೂಗಳನ್ನು ಬೇಡಿಕೆ ಇಟ್ಟಿದ್ದು, ಅದರಂತೆ ಇಂದು ಐದು ಲಕ್ಷ ನೀಡುತ್ತಿರುವಾಗ ಬೆಂಗಳೂರು ಹಾಗೂ ಕೋಲಾರ ಲೋಕಾಯುಕ್ತ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಲೆಗೆ ಬೀಳಿಸಿದ್ದಾರೆ.

