ಚಿತ್ರ ನಿರ್ದೇಶಕ, ಪತ್ರಕರ್ತ, ಪ್ರಗತಿಪರ ಹೋರಾಟಗಾರ ಎನ್‌.ಎಸ್.ಶಂಕರ್ ನಿಧನಕ್ಕೆ ಕಂಬನಿ

ಬೆಂಗಳೂರು: ಚಿತ್ರ ನಿರ್ದೇಶಕ, ಪತ್ರಕರ್ತ ಮತ್ತು ಪ್ರಗತಿಪರ ಚಳವಳಿಗಳ  ಮೂಲಕ ಛಾಪು ಮೂಡಿಸಿದ್ದ ಎನ್‌.ಎಸ್.ಶಂಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರ ನಿಧನಕ್ಕೆ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಅನಾರೋಗ್ಯಕ್ಕೀಡಾಗಿದ್ದ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು.

ದುಃಖಿತರಾದ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು,  ಎನ್‌.ಎಸ್.ಶಂಕರ್ ಅವರ ಸಾವಿನ ಸುದ್ದಿ ಕೇಳಿ ದು:ಖವಾಯಿತು. ಪತ್ರಕರ್ತರಾಗಿ ಪ್ರಜಾವಾಣಿ, ಮುಂಗಾರು, ಸುದ್ದಿಸಂಗಾತಿ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದರು.  ಅವರೊಬ್ಬ ಕನ್ನಡದ ಬಹುಮುಖ ಪ್ರತಿಭೆ. ಇನ್ನಷ್ಟು ಕಾಲ ನಮ್ಮ ಜೊತೆ ಇದ್ದು, ನಮಗೆಲ್ಲ ಮಾರ್ಗದರ್ಶನ ನೀಡಬೇಕಾಗಿತ್ತು. ಅವರ ಕುಟುಂಬವರ್ಗಕ್ಕೆ ಸಂತಾಪಗಳು, ಅವರೆಲ್ಲರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಂತಾಪ ಸೂಚಿಸಿದ ಕೆ.ವಿ.ಪ್ರಭಾಕರ್‌
 ಕೆವಿ ಪ್ರಭಾಕರ್ ಕೂಡ ಸಂತಾಪ ಸೂಚಿಸಿದ್ದು, “ಹಿರಿಯ ಪತ್ರಕರ್ತರು, ಅದ್ಭುತ ಒಳನೋಟಗಳನ್ನು ಹೊಂದಿದ್ದ ಅಪರೂಪದ ವಿಶ್ಲೇಷಕರಲ್ಲಿ ಪ್ರಮುಖರಾಗಿದ್ದ ಎನ್.ಎಸ್.ಶಂಕರ್ ಅವರ ನಿಧನ ಅಪಾರ ನೋವು ತಂದಿದೆ ಎಂದಿದ್ದಾರೆ.  ಅಪಾರ ಜ್ಞಾನದಾಹಿ ಆಗಿದ್ದು, ಸಾಮಾಜಿಕ ನ್ಯಾಯ ಮತ್ತು‌ ಸಂವಿಧಾನದ ಆಶಯಗಳ ಪ್ರಬಲ ಫ್ರತಿಪಾದಕರಾಗಿದ್ದರು. ಕನ್ನಡದ ತಿಳಿವಳಿಕೆಯನ್ನು ವಿಸ್ತರಿಸಿದ ಬರಹಗಾರರಾಗಿ, ಒಳನೋಟವುಳ್ಳ ರಾಜಕೀಯ ವಿಶ್ಲೇಷಕರಾಗಿ, ಅತ್ಯಂತ ಸೂಕ್ಷ್ಮ ಪ್ರಜ್ಞೆಯ ಸಿನಿಮಾ ನಿರ್ದೇಶಕರಾಗಿ ಕನ್ನಡದ ಶ್ರೇಷ್ಠ ಸಿನಿಮಾ ವಿಶ್ಲೇಷಕರಾಗಿದ್ದ ಶಂಕರ್ ಅವರ ನಿಧನ ಈ ಎಲ್ಲಾ ಕ್ಷೇತ್ರಗಳಿಗೂ ತುಂಬಲಾರದ ನಷ್ಟ.

ಆಘಾತ ತಂದಿದೆ
ಪ್ರಜಾವಾಣಿ’, ‘ಮುಂಗಾರು’, ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದ ಎನ್.ಎಸ್. ಶಂಕರ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ‘ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ’ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಮೂಲತಃ ಮಂಡ್ಯದವರು
ಎನ್​ಎಸ್ ಶಂಕರ್ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ. ಆದರೆ ಅವರು ಬಾಲ್ಯವನ್ನು ಕಳೆದಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ. ಹೈಸ್ಕೂಲ್ ಓದಿದ್ದು ಮೈಸೂರಿನಲ್ಲಿ. ಕಾಲೇಜು ಶಿಕ್ಷಣವನ್ನು ಅವರು ಬೆಂಗಳೂರಿನಲ್ಲಿ ಪಡೆದರು. ಮೊದಲು ಪತ್ರಕರ್ತನಾಗಿದ್ದ ಅವರು ನಂತರ ಚಿತ್ರರಂಗಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡರು.  ಪ್ರಗತಿಪರ ಚಳವಳಿಗಳ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.  ಹಿರಿಯ ಪತ್ರಕರ್ತರಾಗಿ ಪ್ರಮುಖ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು.  ಉಲ್ಟಾ ಪಲ್ಟಾ ಸಿನಿಮಾದ ನಿರ್ದೇಶಕರಾಗಿದ್ದರು. 

More articles

Latest article

Most read