ಕೋಲಾರದಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಪತಿ

ಕೋಲಾರ : ಕಳೆದ ರಾತ್ರಿ ಮಾಲೂರು ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಮಿಂಡಹಳ್ಳಿ ಗ್ರಾಮದ ಬಳಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಯೋಗಿಣಿ (25) ಕೊಲೆಯಾದ ಮಹಿಳೆಯಾಗಿದ್ದು ಈಕೆಯ ಪತಿ ಗಣೇಶ್ (30) ಎಂಬಾತ ಕೊಲೆ ಆರೋಪಿಯಾಗಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ಮೂಲದ ಗಣೇಶ್ ಹಾಗೂ ಯೋಗಿಣಿ ಪ್ರೀತಿಸಿ ಮದುವೆಯಾಗಿದ್ದು ಎರಡು ವರ್ಷದ ಮಗು ಸಹ ಇದ್ದು ಇವರಿಬ್ಬರ ನಡುವೆ ಕೌಟುಂಬಿಕ ಮನಸ್ತಾಪಗಳು ಇದ್ದುದರಿಂದ ಯೋಗಿಣಿ ಆತನನ್ನು ತೊರೆದು ತನ್ನ ತವರು ಮನೆಗೆ ವಾಪಸ್ ಆಗಿದ್ದಾಳೆ ಎನ್ನಲಾಗಿದೆ. ನೆನ್ನೆಯ ದಿನ ಯೋಗಿಣಿ ಕೆಲಸವನ್ನು ಅರಸಿಕೊಂಡು ನರಸಾಪುರದ ಕೈಗಾರಿಕಾ ಪ್ರದೇಶಕ್ಕೆ ಬಂದಿದ್ದಾಗ ಬೆಂಗಳೂರಿನಿಂದ ಫೋನ್ ಮಾಡಿದ ಪತಿ ಗಣೇಶ್ ನಿನ್ನ ಬಳಿ ಮಾತನಾಡಬೇಕಿದೆ ಎಂದು ತಿಳಿಸಿ ನರಸಾಪುರಕ್ಕೆ ಬಂದಿದ್ದಾನೆ.

ನಂತರ ಮಿಂಡಹಳ್ಳಿ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ, ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿ ತಾನೇ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಮಾಲೂರು ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

More articles

Latest article

Most read