ಬೆಂಗಳೂರು : ನನ್ನ ಹೋರಾಟ ಇರುವುದು ಸೌಜನ್ಯ ಸಾವಿನ ವಿರುದ್ಧ ಹಾಗೂ ಅಲ್ಲಿ ನಡೆದಿರುವ ಹೆಣ್ಣುಮಕ್ಕಳ ಸಾವಿನ ವಿರುದ್ಧ. ಇದರ ಬಗ್ಗೆ ಮಾತ್ರ ನಾನು ಪ್ರಶ್ನೆ ಮಾಡಿದ್ದೇನೆ ಅಷ್ಟೇ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ನನ್ನ ಬಗ್ಗೆ ನಟ ಪ್ರಕಾಶ್ ರಾಜ್ ಹೆಸರು ಬಹಿರಂಗವಾದ ಹಿನ್ನೆಲೆ ನಾನು ಧರ್ಮಸ್ಥಳಕ್ಕೆ ಹೋಗಲೇ ಇಲ್ಲ, ಗಿರೀಶ್ ಮಟ್ಟಣ್ಣನವರ್ಅನ್ನು ಭೇಟಿ ಮಾಡಲೇ ಇಲ್ಲ. ಚಿನ್ನಯ್ಯ ಕರೆ ಮಾಡಿದ್ದು ನಿಜ. ಆತ ಮಾತನಾಡಿದ್ದನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡು ಎಸ್ಐಟಿ ಮುಖ್ಯಸ್ಥರಿಗೆ ಕಳುಹಿಸಿ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಚಿನ್ನಯ್ಯನಿಂದ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಹೇಳಿದ್ದರು. ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ, ಆತ ಸುಳ್ಳು ಮಾಹಿತಿ ನೀಡುತ್ತಿದ್ದಾನೆ, ಅವನಿಂದ ದೂರ ಇರಿ ಎಂದು ಎಚ್ಚರಿಸಿದ್ದರು. ಈ ಕಾರಣದಿಂದಾಗಿ ನಾನು ಅವನಿಂದ ತಕ್ಷಣ ದೂರ ಆದೆ ಎಂದಿದ್ದಾರೆ.
ಕೇರಳದಿಂದ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಳು ಮಾಡಲು 200 ರೂ. ಕೋಟಿಯನ್ನು ಯಾರು ಹೂಡಿಕೆ ಮಾಡಿದ್ದಾರೆ. ಅದರಲ್ಲಿ 50 ಲಕ್ಷ ರೂ.ವನ್ನು ಚಿನ್ನಯ್ಯನಿಗೆ ಕೊಡಬೇಕೆಂತ ಮಾತನಾಡಿದ್ದರು, ಅದರಲ್ಲಿ ಪ್ರಕಾಶ್ ರಾಜ್ ಹೆಸರು ಹೇಳಲಾಗಿದೆ. ಹಾಗೇ 200 ರೂ. ಕೋಟಿ ಹೇಳಿಕೆ ಬಂದಿದೆ. ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋದವನಲ್ಲ, ಮಟ್ಟಣ್ಣನವರ್ ಅವರನ್ನು ಭೇಟಿ ಮಾಡಿದವನಲ್ಲ. ಆದರೆ ಅಲ್ಲಿ ಸರಣಿ ಸಾವಾಗಿದೆ ಎಂಬ ಸುದ್ದಿಗೆ ಆತಂಕ ಪಟ್ಟದ್ದಂತು ನಿಜ.
ನನ್ನ ಹೋರಾಟ ಇರುವುದು ಸೌಜನ್ಯ ಸಾವಿನ ವಿರುದ್ಧ ಹಾಗೂ ಸಾಲು ಸಾಲು ಹೆಣ್ಣುಮಕ್ಕಳ ಸಾವಿನ ವಿರುದ್ಧ ಅಷ್ಟೇ. ನಾನು ನನ್ನ ಜೀವನದಲ್ಲಿ ಒಂದೇ ಒಂದು ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದೇನೆ. ಅವರು ಅದ್ಭುತ ಮನುಷ್ಯ ಹಾಗೂ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರು.
ಸೌಜನ್ಯ ಸಾವಿನ ವಿರುದ್ಧ ಮಾತ್ರ ನನ್ನ ಹೋರಾಟ : ಪ್ರಕಾಶ್ ರಾಜ್