ಚೀಟಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಹತ್ಯೆ

ಕೋಲಾರ : ಇಲ್ಲಿನ ನಿಸಾರ್ ನಗರದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನು ಸ್ನೇಹಿತನೇ ಭೀಕರವಾಗಿ ಕೊಲೆ ಮಾಡಿದ್ದಾನೆ

ನಿಸಾರ್ ನಗರದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದ ಮಿಲತ್ ನಗರದ ನಿವಾಸಿ ಸೈಯದ್ ಅಲ್ತಾಫ್ ( 42) ಕೊಲೆಯಾದ ವ್ಯಕ್ತಿ ಯಾಗಿದ್ದು ಈತನ ಒಡನಾಡಿಯಾಗಿದ್ದ ಇಮ್ರಾನ್ ಪಾಷಾ ( 40) ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ನಿಸಾರ್ ನಗರದ ಇಮ್ರಾನ್ ಪಾಷಾ ಹಾಗೂ ಕೊಲೆಯಾದ ವ್ಯಕ್ತಿ ಸೈಯದ್ ಅಲ್ತಾಫ್ ಈ ಹಿಂದೆ ಒಂದೇ ಕಡೆ ವಾಸಿಸುತ್ತಿದ್ದು ಕೊಲೆಯಾಗಿರುವ ವ್ಯಕ್ತಿ ಸೈಯದ್ ಅಲ್ತಾಫ್ ಬಳಿ ಇಮ್ರಾನ್ ಪಾಷಾ ಚೀಟಿ ವ್ಯವಹಾರ ನಡೆಸುತ್ತಿದ್ದು ಚೀಟಿಯನ್ನು ಸಹ ತೆಗೆದುಕೊಂಡು ಹಣ ಪಾವತಿ ಮಾಡದೆ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇವರಿಬ್ಬರಲ್ಲಿಯೂ ಸಹ ಮನಸ್ತಾಪಗಳಿದ್ದು ಚೀಟಿ ಹಣವನ್ನು ಕೇಳಿದಾಗಲೆಲ್ಲ ಇಮ್ರಾನ್ ಪಾಷಾ ಆತನಿಗೆ ಹಣವನ್ನು ನೀಡದೆ ಸತಾಯಿಸುತ್ತಿದ್ದ ನಲ್ಲದೆ ಹಣ ಕೇಳಿದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆಯನ್ನು ಸಹ ಒಡ್ಡಿದ್ದಾನೆ ಎನ್ನಲಾಗಿದೆ.

ಇದೇ ಉದ್ದೇಶವನ್ನು ಇಟ್ಟುಕೊಂಡಿದ್ದ ಇಮ್ರಾನ್ ಪಾಷಾ ಕಳೆದ ರಾತ್ರಿ ನಿಸಾರ್ ನಗರದಲ್ಲಿ ಚಿಲ್ಲರೆ ಅಂಗಡಿಯ ನಡೆಸುತ್ತಿದ್ದ ಸೈಯದ್ ಅಲ್ತಾಫ್ ನನ್ನು ತಮ್ಮ ಇಂಡಿಕಾ ಕಾರಿನಲ್ಲಿ ಹಿಂಬಾಲಿಸಿಕೊಂಡು ಎವಿಜಿ ಇಟ್ಟಿಗೆ ಫ್ಯಾಕ್ಟರಿಯ ಬಳಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಡರಾತ್ರಿಯ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

More articles

Latest article

Most read