ಸಿಬಿಎಸ್ಸಿಯಲ್ಲಿ ಮೂರು ಭಾಷೆ ಕಲಿಕೆ ಕಡ್ಡಾಯ: ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

ನವದೆಹಲಿ : ಪ್ರಸಕ್ತ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನ ಕಡ್ಡಾಯವಾಗಿದ್ದು, ಅದರಲ್ಲಿ ಎರಡು ಭಾರತೀಯ ಭಾಷೆಗಳಿರಬೇಕು ಎಂಬ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ನೀತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ, ಸಿಬಿಎಸ್ಇ ಮತ್ತು ಎನ್‌ಸಿಇಆರ್‌ಟಿಯಿಂದ ಪ್ರತಿಕ್ರಿಯೆ ಕೋರಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಾಂಚೋಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿದ್ದು, ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಕೇಂದ್ರ ಸರ್ಕಾರದ ಪರ ವಾದ ಮಂಡನೆ ಮಾಡುತ್ತಿದ್ದಾರೆ. ಈ ನಿರ್ಧಾರವನ್ನು ಜಾರಿಗೆ ತರಲು ತೆಗೆದುಕೊಂಡಿರುವ ವ್ಯವಸ್ಥಾಪನಾ ಸಿದ್ಧತೆಯ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಸುತ್ತೋಲೆಯ ಪ್ರಕಾರ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕು ಎಂದು ವಾದಿಸಿದರು. ಸಂಬಂಧಿತ ಪ್ರಕರಣವೊಂದರಲ್ಲಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಷಯವು ಪ್ರಮುಖ ಸಾಂವಿಧಾನಿಕ ಸಮಸ್ಯೆಗಳನ್ನು ಹೊಂದಿದ್ದು, ಈ ಕುರಿತು ಪಠ್ಯಪುಸ್ತಕಗಳು ಸಹ ಲಭ್ಯವಿಲ್ಲ. ಇದು ಒಕ್ಕೂಟದ ವಿಷಯ ಮತ್ತು ಭಾಷೆಯು ಆಯ್ಕೆಯ ವಿಷಯವಾಗಿರಬೇಕೇ ಹೊರತು ಹೇರಿಕೆಯ ವಿಷಯವಲ್ಲ ಎಂದು ವಾದಿಸಿದರು.

ಮಧ್ಯಂತರ ಆದೇಶ ನೀಡದ ಪೀಠ: ಈ ವರ್ಷದ ಬದಲಾಗಿ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಜುಲೈ 1ರಿಂದ ಈ ನಿರ್ಧಾರವನ್ನು ಜಾರಿಗೆ ಬರದಂತೆ ಸಿಬಿಎಸ್‌ಇಯನ್ನು ಕೇಳಬೇಕೆಂದು ಅರ್ಜಿದಾರರ ಪರ ವಕೀಲರು ಪೀಠವನ್ನು ಕೋರಿದರು. ಆದರೆ, ಪೀಠವು ಯಾವುದೇ ಮಧ್ಯಂತರ ನಿರ್ದೇಶನವನ್ನು ನೀಡಲಿಲ್ಲ. ಈ ಕುರಿತು ಪರಿಶೀಲನೆ ನಡೆಸೋಣ ಎಂದಿತು.

ಜುಲೈ ಎರಡನೇ ವಾರದಲ್ಲಿ ಈ ಅರ್ಜಿಯ ಮುಂದಿನ ವಿಚಾರಣೆಯನ್ನು ನಡೆಸಲು ಸುಪ್ರೀಂ ಪೀಠ ನಿಗದಿ ಮಾಡಿದೆ. ದೆಹಲಿ, ಗುರುಗ್ರಾಮ, ನೋಯ್ಡಾ ಮತ್ತು ಚೆನ್ನೈನ ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡ 19 ಅರ್ಜಿದಾರರ ಗುಂಪು ಸಿಬಿಎಸ್‌ಇ ಮತ್ತು ಎನ್‌ಸಿಇಆರ್‌ಟಿ ವಿರುದ್ಧ ಪಿಐಎಲ್ ಸಲ್ಲಿಸಿದೆ.

ಅರ್ಜಿಯ ಪ್ರಕಾರ, ಸಿಬಿಎಸ್ಇಯ ಹೊಸ ನೀತಿ ಅಡಿ 9ನೇ ತರಗತಿಗೆ ಮತ್ತೆರಡು ಭಾಷೆಗಳನ್ನು ಸೇರ್ಪಡೆ ಮಾಡಿದ್ದು, ಅದರಲ್ಲಿ ಕನಿಷ್ಠ ಎರಡು ಸ್ಥಳೀಯ ಭಾರತೀಯ ಭಾಷೆಗಳ ಕಲಿಕೆ ಕಡ್ಡಾಯ ಎಂಬ ನಿಯಮವನ್ನು ಪ್ರಶ್ನಿಸಲಾಗಿದೆ. 

More articles

Latest article

Most read