ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಯಾರು?

ನವದೆಹಲಿ:
ಮೇ 16 ರಂದು, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿಗಳು ಪರಾವಲಂಬಿಗಳು ಮತ್ತು ಜಿರಳೆಗಳು ಎಂಬ ಹೇಳಿಕೆ ನೀಡಿದ ನಂತರ, ಅಭಿಜೀತ್ ದೀಪ್ಕೆ ಎಂಬುವರು  ವಿಡಂಬನಾತ್ಮಕವಾಗಿ ʼಕಾಕ್ರೋಚ್ ಜನತಾ ಪಕ್ಷʼವನ್ನು ಪ್ರಾರಂಭಿಸಿದರು.

ಈ ಪಕ್ಷದ ಅಭಿಯಾನ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿತು.  
ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದೆ. ಇಂದು, ಸಿಜೆಪಿ ಇನ್‌ಸ್ಟಾಗ್ರಾಮ್‌ನಲ್ಲಿ 19 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಇದು ಭಾರತದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳಿಗಿಂತ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದೆ. ಆದರೆ,  ಎಕ್ಸ್‌ ತಾಣದಲ್ಲಿ   200,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿತ್ತು. ಆದರೆ, ಅದನ್ನು ತಡೆ ಹಿಡಿಯಲಾಗಿದೆ. 

ದೀಪ್ಕೆ ಅವರ ಪಕ್ಷವು ವಿವಿಧ ರಾಜಕಾರಣಿಗಳು, ಕಾರ್ಯಕರ್ತರು, ಕಲಾವಿದರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಬಳಕೆದಾರರಿಂದ ಬೆಂಬಲವನ್ನು ಪಡೆದುಕೊಂಡಿದೆ.

ಅಭಿಜೀತ್ ದೀಪ್ಕೆ ಯಾರು?

30 ವರ್ಷದ ಅಭಿಜೀತ್ ದೀಪ್ಕೆ ತಮ್ಮ ಪದವಿಪೂರ್ವ ಪದವಿಯನ್ನು  ಪುಣೆಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ವರದಿಯಾಗಿದೆ.

ಅವರು ಪ್ರಸ್ತುತ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ ಎನ್ನಲಾಗಿದೆ. 

ವರದಿಗಳ ಪ್ರಕಾರ, ದೀಪ್ಕೆ 2020 ರಿಂದ 2023 ರವರೆಗೆ ಆಮ್ ಆದ್ಮಿ ಪಕ್ಷ (ಎಎಪಿ) ದೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡಿದರು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಗೆದ್ದ 2020 ರ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಮೀಮ್ ಆಧಾರಿತ ಡಿಜಿಟಲ್ ಪ್ರಚಾರದಲ್ಲಿ ಕೆಲಸ ಮಾಡಿದ್ದರು ಎಂದು ವರದಿಯಾಗಿದೆ.

ಕಾಕ್ರೋಚ್ ಜನತಾ ಪಾರ್ಟಿ ಎಂದರೇನು?

ಕಾಕ್ರೋಚ್ ಜನತಾ ಪಾರ್ಟಿಯ ವೆಬ್‌ಸೈಟ್ ವ್ಯವಸ್ಥೆಯನ್ನು ಎಣಿಸಲು ಮರೆತ ಜನರಿಗೆ ರಾಜಕೀಯ ಪಕ್ಷ. ಐದು ಬೇಡಿಕೆಗಳು. ಶೂನ್ಯ ಪ್ರಾಯೋಜಕರು. ಒಂದು ದೊಡ್ಡ, ಹಠಮಾರಿ ಗುಂಪು” ಎಂದು ವಿವರಿಸುತ್ತದೆ. ಅದು ತನ್ನನ್ನು “ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ” ಎಂದು ಕರೆದುಕೊಳ್ಳುತ್ತದೆ.

ಸಿಜೆಪಿಯ ವೆಬ್‌ಸೈಟ್‌ನಲ್ಲಿರುವ ಅರ್ಹತಾ ಮಾನದಂಡದ ಪ್ರಕಾರ, ಒಬ್ಬ ವ್ಯಕ್ತಿಯು “ನಿರುದ್ಯೋಗಿ, ಸೋಮಾರಿ ಮತ್ತು ದೀರ್ಘಕಾಲೀನ ಆನ್‌ಲೈನ್” ಆಗಿರಬೇಕು ಮತ್ತು ಪಕ್ಷಕ್ಕೆ ಸೇರಲು “ವೃತ್ತಿಪರವಾಗಿ ಮಾತನಾಡುವ ಸಾಮರ್ಥ್ಯವನ್ನು” ಹೊಂದಿರಬೇಕು.

More articles

Latest article

Most read