ಮಳೆಗೆ ಅಲೆಮಾರಿಗಳ ಜೋಪಡಿ ಕುಸಿದು ಮಕ್ಕಳಿಗೆ ಗಾಯ

ಗೋಡೆ ಕುಸಿತಕ್ಕೆ ಮೂಳೆ ಮುರಿತ

ಬೀದರ್‌/ಕಮಠಾಣ : ಇಂದು ಸಂಭವಿಸಿದ ಮಳೆ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಅಲೆಮಾರಿ ಮಾಂಗ್‌ಗಾರುಡಿ ಸಮುದಾಯದ ಹಲವಾರು ಮನೆ/ ಜೋಪಡಿಗಳು ಕುಸಿದು ಬಿದ್ದು ಹಲವಾರು ಮಕ್ಕಳು ಮತ್ತು ದೊಡ್ಡವರಿಗೆ ಗಂಭೀರ ಗಾಯಗಳಾದ ಘಟನೆ ಬೀದರ್‌ ಜಿಲ್ಲೆಯ ಕಮಠಾಣದಲ್ಲಿ ನಡೆದಿದೆ.

ಇಲ್ಲಿ ಗಾಯಗೊಂಡಿರುವ ಹಲವರನ್ನು ಬೀದರ್‌ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಡೆಗಳು ಕುಸಿದು ಬಿದ್ದ ಹೊಡೆತಕ್ಕೆ ಕೆಲವರ ಮೂಳೆಗಳು ಮುರಿದಿವೆ.

ಕಮಠಾಣದಲ್ಲಿ 40 ಮಂಗ್‌ಗಾರುಡಿ ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕ ಕುಟುಂಬಗಳಿಗೆ ಯಾವುದೇ ವಸತಿ ವ್ಯವಸ್ಥೆ ಇದುವರೆಗೂ ಆಗಿಲ್ಲ. ಅನೇಕ ಮನೆಗಳಿಗೆ ಮೇಲ್ಛಾವಣಿಯೇ ಇಲ್ಲ. ಕೆಲವು ಕುಟುಂಬಗಳು ಇಂತಹ ಜೋಪಡಿಗಳಲ್ಲಿ ವಾಸವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದು ಬಿದ್ದ ಮಳೆಗೆ ಗೋಡೆಗಳು ಮತ್ತು ಜೋಪಡಿಗಳು ಕುಸಿದು ಗಂಭೀರ ಪ್ರಮಾಣದ ಗಾಯಗಳಾಗಿವೆ.

ಈ ಕುರಿತು ಕನ್ನಡ ಪ್ಲಾನೆಟ್‌ನೊಂದಿಗೆ ಮಾಹಿತಿ ಹಂಚಿಕೊಂಡ ಸ್ಥಳೀಯರು, ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
“ನಮ್ಮ ಕಷ್ಟವನ್ನು ಕೇಳುವವರು ಯಾರು ಇಲ್ಲ, ಇಂತಹ ಪರಿಸ್ಥಿತಿಯಲ್ಲೇ ಸರಿಯಾದ ಮೂಲ ಸೌಕರ್ಯಗಳಿಲ್ಲದೇ, ಪ್ರತಿನಿತ್ಯ ತೊಂದರೆಗೀಡಾಗಿದ್ದೇವೆ. ಈಗ ನಮ್ಮ ಮನೆಗಳು ಕುಸಿದು ಬಿದ್ದಿರುವ ಸಂದರ್ಭದಲ್ಲಿ ಯಾರಾದರೂ ಆಗಮಿಸಿ ನಮ್ಮ ಪರಿಸ್ಥಿತಿಯನ್ನು ನೋಡಲಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಮಠಾಣಾದ ಮಾಂಗ್ ಗಾರುಡಿ ಮನೆಗಳು

More articles

Latest article

Most read