ಮಡಿಕೇರಿ : ನಿನ್ನೆ ದುಬಾರೆಯಲ್ಲಿ ನಡೆದ ಆನೆಗಳ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಇಂದು ಮೃತಪಟ್ಟಿದೆ. ದುಬಾರೆಯಲ್ಲಿ ಆನೆಗಳು ಸ್ನಾನ ಮಾಡುವಾಗ ಕಂಜನ್ ಹಾಗೂ ಮಾರ್ತಾಂಡ ಆನೆಗಳು ಇದ್ದಕ್ಕಿದ್ದಂತೆ ಕಾದಾಟ ನಡೆಸಿದವು.
ಇದರಿಂದ ಆನೆಗಳ ಕಾದಾಟ ನೋಡುವಾಗ ಕಾಲು ಜಾರಿ ಬಿದ್ದ ಚೆನ್ನೈ ಮೂಲದ ಯುವತಿಯೊಬ್ಬರು ಬಿದ್ದು ಆನೆಯ ಅಡಿ ಸಿಲುಕಿ ಮೃತಪಟ್ಟಿದ್ದರು.
ಇದಾದ ಒಂದು ದಿನದ ಬಳಿಕ ಕಾದಾಟದ ವೇಳೆ ಗಂಭಿರವಾಗಿ ಗಾಯಗೊಂಡಿದ್ದ ಆನೆ ಮಾರ್ತಾಂಡ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೇ 19ರಂದು ಮೃತಪಟ್ಟಿದೆ.
ನಿನ್ನೆ ಸ್ನಾನಕ್ಕೆಂದು ಕಾವೇರಿ ನದಿಗೆ ಮಾವುತರು ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಕರೆತಂದಿದ್ದರು. ದಂತದಿಂದ ತಿವಿದು ಕಂಜನ್ ಆನೆ ಮಾರ್ತಾಂಡ ಆನೆಯನ್ನು ನೆಲಕ್ಕೆ ಉರುಳಿಸಿತ್ತು. ಆನೆಗಳ ಕಾದಾಟದನ್ನು ತಡೆಯಲು ಮಾವುತರು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ.
ಇದರಿಂದ ಮಾರ್ತಾಂಡ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಮಾರ್ತಾಂಡಗೆ ಶಿಬಿರದಲ್ಲೇ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅದು ಇಂದು ಮೃತಪಟ್ಟಿದೆ ಎಂದು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದಾರೆ.
ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು