ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು :  ನಡೆಯದ ಡಿಸಿಎಂ ಡಿಕೆಶಿ ಕಮಾಲ್‌, ಹಿಮಂತ ಬಿಸ್ವಾ ಶರ್ಮಾ ಮತ್ತೆ ಸಿಎಂ

ಗುವಾಹಟಿ:  ಭಾರತದ ಈಶಾನ್ಯದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಅಸ್ಸಾಂನ 126 ವಿಧಾನಸಭಾ ಕ್ಷೇ ತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಮೂರನೇ ಬಾರಿಗೆ ಗೆದ್ದು ಅಧಿಕಾರ ಹಿಡಿಯಲು ಸಜ್ಜಾಗಿದೆ

ಆಡಳಿತರೂಢ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಹುತೇಕ ಎಲ್ಲ ಸಚಿವರು ಗೆಲುವಿನ ನಗೆ ಬೀರಿದ್ದಾರೆ.  ಹಿಮಂತ ಬಿಸ್ವಾ ಶರ್ಮಾ ಅವರು ಮತ್ತೊಮ್ಮೆ ಸಿಎಂ ಆಗುವ ಕನಸು ಹೊಂದಿದ್ದಾರೆ. ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಗೌರವ್‌ ಗೊಗಯ್‌ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ.

ಅಸ್ಸಾಂ 122 ವಿಧಾನ ಸಭಾ ಕ್ಷೇತ್ರಗಳಿಗೆ ವಿವಿಧ ಪಕ್ಷಗಳಿಂದ 722 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಇವುಗಳಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅತೀ ಹೆಚ್ಚು ಅಂದರೆ 99  ಅಭ್ಯರ್ಥಿಗಳು ಇದ್ದರು. ಬಿಜೆಪಿ 90 ಅಭ್ಯರ್ಥಿ, ಮತ್ತು ಎಐಯುಡಿಎಫ್‌ 30  ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಎನ್‌ಡಿಎ ಮಿತ್ರ ಪಕ್ಷಗಳಾದ ಎಜಿಪಿ 26 ಅಭ್ಯರ್ಥಿಗಳನ್ನು ಹೊಂದಿದ್ದರೆ ಬಿಪಿಎಫ್‌ 11 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಬಿಜೆಪಿ-82 ಕ್ಷೇತ್ರ, ಕಾಂಗ್ರೆಸ್‌-18 ಕ್ಷೇತ್ರ,  ಎಜಿಪಿ -11 ಕ್ಷೇತ್ರ,  ಬಿಒಪಿಎಫ್‌-10 ಕ್ಷೇತ್ರ

ಗೆದ್ದವರು :   ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು   ಜಲುಕ್ಬರಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಅದೇ ರೀತಿ  ಬಿಜೆಪಿ ಹಿತೇಂದ್ರನಾಥ್ ಗೋ ಸ್ವಾಮಿ ಅವರು  ಜೋರ್ಹತ್ ಕ್ಷೇತ್ರದಲ್ಲಿ 23,182 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.  ಬಿಜೆಪಿ ರನೋಜ್ ಪೆಗು ಅವರು ಧೇಮಾಜಿ ಕ್ಷೇತ್ರದಲ್ಲಿ 32,229 ಮತಗಳ ಅಂ ತರ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಚರಣ್ ಬೊರೊ ಅವರು  ಮಜ್ಬತ್ ಕ್ಷೇತ್ರದಿಂದ  55,000 ಮತಗಳ ಅಂತರಲ್ಲಿ ಗೆಲುವು ದಾಖಲಿಸಿದ್ದಾರೆ.

 ಬಿಜೆಪಿ ಜಿಬನ್ ಗೊಗೊಯ್ ಅವರು ಸಿಸ್ಸಿಬರ್ಗಾಂವ್ ಕ್ಷೇತ್ರದಲ್ಲಿ  40,593 ಮತಗಳ ಅಂತರದಿಂದ ಗೆದ್ದಿದ್ದಾರೆ.  ಬಿಜೆಪಿಯ ಪ್ರದ್ಯುತ್ ಬೋರ್ಡೊ ಲೊಯ ಅವರು  ದಿಸ್ಪುರ್ ಕ್ಷೇತ್ರದಲ್ಲಿ 49,667 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಸೋತ ಪ್ರಮುಖರು: ಗೌರವ್ ಗೋಗಯ್ ಅವರು ಜೋರ್ಹ ತ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇವರು 23,182 ಮತಗಳ ಅಂ ತರದಿಂದ ಸೋತಿದ್ದಾರೆ. ಕಾಂಗ್ರೆಸ್‌ನ ಸೈಲೆನ್ ಸೋ ನೊವಾಲ್ ಅವರು ಧೇಮಾಜಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ವಿರುದ್ಧ 32,229 ಮತಗಳ ಅಂತರದಿಂದ ಸೋತಿದ್ದಾರೆ.  ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ  ಮಿರಾ ಗೋಸ್ವಾಮಿ ಅವರು  ದಿಸ್ಪುರ ಕ್ಷೇತ್ರದಿಂದ  49,667 ಮತಗಳ ಅಂತರದಿಂದ ಸೋತಿದ್ದಾರೆ.

ಅಸ್ಸಾಂ ಚುನಾವಣೆಯಲ್ಲಿ ನನಗೆ ಉಸ್ತುವಾರಿ ನೀಡಲಾಗಿತ್ತು. ಅಲ್ಲಿ ಪಕ್ಷದ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇನೆ. ಇನ್ನು  ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಸ್ಥಳೀಯರ ಪ್ರತಿಕ್ರಿಯೆ ಕೂಡ ಇದೇ ಅಗಿತ್ತು. ಆದರೆ ಫಲಿತಾಂಶ ಏರುಪೇರಾಗಿದೆ ಎಂದು ಅಸ್ಸಾಂ ಚುನಾವಣಾ ಉಸ್ತುವಾರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.  

ಮೊದಲ ಚುನಾವಣೆಯಲ್ಲೇ ಮುಗ್ಗರಿಸಿದ ಗೊಗೊಯ್

ಅಸ್ಸಾಂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಜೋರ್ಹತ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಹಿತೇಂದ್ರನಾಥ್ ಗೋಸ್ವಾಮಿ ವಿರುದ್ಧ 23,182 ಮತಗಳಿಂದ ಸೋತಿದ್ದಾರೆ.

ಗೊಗೊಯ್, ತಂದೆ ತರುಣ್ ಗೊಗೊಯ್ ಅವರ ರಾಜಕೀಯ ಮಾರ್ಗವನ್ನು ಅನುಸರಿಸುವಮೂಲಕ ರಾಜ್ಯ ರಾಜಕೀಯಕ್ಕೆ ಮರಳಲು ಸಜ್ಜಾಗಿದ್ದರು, ಆದರೆ ಬಿಜೆಪಿಯ ಅಬ್ಬರದ ನಡುವೆ ಹೀನಾಯವಾಗಿ ಸೋಲು ಕಂ ಡಿದ್ದಾರೆ. ಗೊಗೊಯ್ 46,257 ಮತಗಳನ್ನು ಪಡೆದರೆ, ಗೋಸ್ವಾಮಿ 69,439 ಮತಗಳನ್ನು ಪಡೆದು ಸತತ ಮೂರನೇ ಬಾರಿಗೆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

2024 ರ ಲೋ ಕಸಭಾ ಚುನಾವಣೆಯಲ್ಲಿ ಜೋರ್ಹತ್ನಿ ಕ್ಷೇತ್ರದಿಂದ  ನಿರಾಯಾಸವಾಗಿ ಜಯಗಳಿಸಿದ್ದ ಗೊಗೊಯ್, ಈ ಬಾರಿ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಗೊಗೊಯ್ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಂತೆ ಆಡಳಿತಾರೂಢ ಬಿಜೆಪಿ, ವಿಶೇಷವಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ವ್ಯಾಪಕ ಪ್ರಚಾರಮಾಡಿತ್ತು.

More articles

Latest article

Most read