Friday, December 12, 2025

2024ರ‌ ನಂತರ ದೇಶ ನೂರಕ್ಕೆ ನೂರರಷ್ಟು ಹಿಂದು ರಾಷ್ಟ್ರವಾಗಿ ಘೋಷಣೆಯಾಗಲಿದೆ: ಮುತಾಲಿಕ್

Most read

2024ರ‌ ನಂತರ ದೇಶ ನೂರಕ್ಕೆ ನೂರರಷ್ಟು ಹಿಂದು ರಾಷ್ಟ್ರವಾಗಿ ಘೋಷಣೆಯಾಗಲಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಹೊಸಪೇಟೆಯಲ್ಲಿ ಮಾತನಾಡಿದ ಅವರು, ಜನಸಂಘದ ಪ್ರಣಾಳಿಕೆಯಲ್ಲಿಯೇ ಹಿಂದುತ್ವ, ಗೋಹತ್ಯೆ, ಮತಾಂತರ ನಿಷೇಧಗಳನ್ನು ಹಾಕಿಕೊಂಡಿದೆ. ಬಿಜೆಪಿ ಅದನ್ನು ಮುಂದುವರೆಸಿದೆ. ಹಿಂದು ರಾಷ್ಟ್ರದ ಆಲೋಚನೆ ಮಾಡಲೇಬೇಕು. ಚುನಾವಣೆ ಬಂದಾಗ ಮಾತ್ರ ಅಲ್ಲ. ಪ್ರಧಾನಿ ‌ಮೋದಿ ಅವರು ಹಿಂದುರಾಷ್ಟ್ರದ ಕಡೆ ಹೆಜ್ಜೆ‌ ಇಡುತ್ತಿದ್ದಾರೆ. 2024ರ ನಂತರ ನೂರಕ್ಕೆ ನೂರು ಹಿಂದು ರಾಷ್ಟ್ರವಾಗುತ್ತದೆ. ಯಾರೂ ದೇಶ ಬಿಟ್ಟು ಹೋಗಬೇಕಾಗಿಲ್ಲ, ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸಂಸ್ಕೃತಿ ಒಪ್ಪಿ ಎಲ್ಲರೂ ಬದುಕು ನಡೆಸಬಹುದು ಎಂದರು.

2014ರ ಹಿಂದಿನ ಪ್ರಧಾನಿಗಳು ಒಬ್ಬರೂ ಒಂದು ದೇವಸ್ಥಾನಕ್ಕೆ ಹೋಗಿರಲಿಲ್ಲ. ಮದರಸಾಗಳಿಗೆ ಹೋಗುತ್ತಿದ್ದರು. ಬಾಬರ್‌ನನ್ನು ಹೊತ್ತು ಮೆರೆಸುತ್ತಿದ್ದರು. ಆದರೆ, 2014ರ ಬಳಿಕ ಪ್ರಧಾನಿಯಾದ ಮೋದಿಯವರು ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ದೇವರು, ಧರ್ಮ, ಅಭಿವೃದ್ಧಿ ಒಟ್ಟಿಗೆ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ‌ 400 ಸೀಟು ದಾಟುತ್ತಾರೆ. ಮತ್ತೆ ಸರಕಾರ ಬರುವುದರಲ್ಲಿ ಅನುಮಾನವಿಲ್ಲ ಎಂದರು.

More articles

Latest article