ಸೌಜನ್ಯ ಪ್ರಕರಣ ಸಾಕ್ಷಿಗಳಿಗೆ ರಕ್ಷಣೆ ಕೊಡಿ: ಸುಪ್ರೀಂ ಕೋರ್ಟ್‌ ತಾಕೀತು

ದೆಹಲಿ, ಏಪ್ರಿಲ್ 29: 2012ರಲ್ಲಿ ಸಂಭವಿಸಿದ ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಪ್ರಕರಣದ ಸಾಕ್ಷಿಗಳಿಗೆ ರಕ್ಷಣೆ ಕೊಡಿ ಎಂದು ವಿಭಾಗೀಯ ಪೀಠ ಆದೇಶ ನೀಡಿದೆ.

ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸಿಬಿಐ ಲಿಖಿತ ರೂಪದಲ್ಲಿ ತಮ್ಮ ನಿಲುವನ್ನು ತಿಳಿಸಲು ಈ ಹಿಂದೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಬೆಳಿಗ್ಗೆ ಈ ಪ್ರಕರಣ ವಿಚಾರಣೆಗೆ ಬಂದಾಗ ರಾಜ್ಯ ಸರ್ಕಾರ ಮತ್ತು ಸಿಬಿಐ ಪರ ಅಭಿಯೋಜಕರು ಕೋರ್ಟ್‌ ಹಾಲ್‌ ನಲ್ಲಿ ಇರಲಿಲ್ಲ. ಮಧ್ಯಾಹ್ನ ಮತ್ತೆ ಪ್ರಕರಣದ ವಿಚಾರಣೆ ನಡೆದಾಗಲೂ ರಾಜ್ಯ ಸರ್ಕಾರ ಮತ್ತು ಸಿಬಿಐ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಲಿಲ್ಲ.

ಈ ಹಿನ್ನೆಲೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯವು ಪ್ರಮುಖ ನಿರ್ದೇಶನಗಳನ್ನು ನೀಡಿದೆ.

ಪ್ರಮುಖ ಅಂಶಗಳು:

  1. ಸಾಕ್ಷಿಗಳಿಗೆ ತಕ್ಷಣ ರಕ್ಷಣೆ: ಪ್ರಕರಣದ ಎಲ್ಲ ಪ್ರಮುಖ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಹಿಂದೆ ಕೆಲವು ಪ್ರಮುಖ ಸಾಕ್ಷಿಗಳು ಸಂಶಯಾಸ್ಪದ ಸಾವು ಹೊಂದಿರುವುದನ್ನು ಗಮನಿಸಿ ಈ ಆದೇಶ ನೀಡಲಾಗಿದೆ. ಇದು 13 ವರ್ಷಗಳ ನಂತರ ಸಾಕ್ಷಿಗಳಿಗೆ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಸಿಕ್ಕ ರಕ್ಷಣೆಯಾಗಿದೆ.
  2. ಮರುತನಿಖೆ ಕುರಿತು ಉತ್ತರ: ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸಿಬಿಐ ಎರಡು ವಾರಗಳಲ್ಲಿ ಲಿಖಿತ ರೂಪದಲ್ಲಿ ತಮ್ಮ ನಿಲುವು ಸಲ್ಲಿಸಬೇಕು. ಮರುತನಿಖೆ ಯಾವ ಸಂಸ್ಥೆ ನಡೆಸಬಹುದು ಎಂಬುದನ್ನು ಸ್ಪಷ್ಟಪಡಿಸಬೇಕು.
  3. ರಾಜ್ಯ ಸರ್ಕಾರಕ್ಕೆ ತರಾಟೆ: ಇಂತಹ ಗಂಭೀರ ಪ್ರಕರಣದಲ್ಲಿ ರಾಜ್ಯ ಸರ್ಕಾರ ತೋರಿದ ನಿರಾಸಕ್ತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ. ಪ್ರಮುಖ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಮನ್ನಣೆ ನೀಡಿ ಸಾಕ್ಷಿಗಳ ರಕ್ಷಣೆಗೆ ಆದೇಶ ಹೊರಡಿಸಲಾಗಿದೆ.

ಅರ್ಜಿದಾರ ಕುಸುಮಾವತಿ ಅವರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ಶೋಭಾ ಗುಪ್ತ, ಶ್ರೀ ಶೇಖರ ದೇವಸ್, ಶ್ರೀ ನೂಲವಿ, ಶ್ರೀ ಅಶುತೋಷ್ ದುಬೇ ಸೇರಿದಂತೆ ಅನೇಕ ನ್ಯಾಯವಾದಿಗಳು ಹಾಜರಿದ್ದರು. ಸಂತೋಷ್ ರಾವ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಶ್ರೀ ಗುರುರಾಜ್ ವಾದ ಮಂಡಿಸಿದರು.

ಈ ಬೆಳವಣಿಗೆಯನ್ನು ಸೌಜನ್ಯ ಹೋರಾಟಗಾರರು, ಮಹಿಳಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆಶಾದಾಯಕ ಎಂದು ಸ್ವಾಗತಿಸಿದ್ದಾರೆ. 13 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಸುಮಾವತಿ, ಮಹೇಶ ಶೆಟ್ಟಿ ತಿಮರೋಡಿ ಮತ್ತು ಇತರ ಹೋರಾಟಗಾರರ ಧ್ವನಿಗೆ ಸುಪ್ರೀಂ ಕೋರ್ಟ್ ಮನ್ನಣೆ ನೀಡಿದಂತಾಗಿದೆ.

ಈ ಪ್ರಕರಣವು ಇನ್ನಷ್ಟು ತೀವ್ರ ತಿರುವು ಪಡೆಯುವ ಸಾಧ್ಯತೆ ಇದೆ. ಮುಂದಿನ ವಿಚಾರಣೆಯಲ್ಲಿ ಸಿಬಿಐ ಮತ್ತು ರಾಜ್ಯ ಸರ್ಕಾರದ ಉತ್ತರದ ನಂತರ ಮುಂದಿನ ನಿರ್ಧಾರಗಳು ಬರಲಿವೆ

More articles

Latest article

Most read