ಬೆಂಗಳೂರು : ಜಾಮೀನು ಕೋರಿ ಮತ್ತೆ ಸುಪ್ರೋಂಕೋರ್ಟ್ಗೆ ನಟ ದರ್ಶನ್ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್
ವಕೀಲ ರಂಜಿತ್ ರೋಹ್ಟಗಿ ಅವರ ಮೂಲಕ ಇಂದು ಸುಪ್ರೀಂಕೋರ್ಟ್ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಜೈಲು ಸೇರಿದ 8 ತಿಂಗಳ ಬಳಿಕ ಈ ಅರ್ಜಿ ಸಲ್ಲಿಸಿದ್ದು, ಮೇ 4 ಕ್ಕೆ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.
ಸುಮಾರು 8 ತಿಂಗಳು ಕಳೆದ್ರೂ ಕೂಡ ಸಾಕ್ಷಿಗಳ ವಿಚಾರಣೆ ಮುಕ್ತಾಯ ಆಗಿಲ್ಲ. ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿದೆ. ಟ್ರಯಲ್ನಲ್ಲಿ ಸಾಕ್ಷಿಗಳ ವಿಚಾರಣೆ ತಡ ಆದರೆ ಮುಕ್ತಾಯ ಆಗಲು ಸಾಕಷ್ಟು ವರ್ಷ ಬೇಕಾಗಲಿದೆ. ಟ್ರಯಲ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ಜಾಮೀನು ಮಂಜೂರು ಮಾಡಿ ಎಂದು ಏಪ್ರಿಲ್ 2ನೇ ವಾರದಲ್ಲೇ ದರ್ಶನ್ ಮನವಿ ಮಾಡಿದ್ದಾರೆ.
ಆರೋಗ್ಯ ಸಮಸ್ಯೆ ನೀಡಿ ಜಾಮೀನು ಪಡೆದಿದ್ದ ದರ್ಶನ್ಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ ಆ.14 ರಂದು ಮತ್ತೆ ಪರಪ್ಪನ ಆಗ್ರಹಾರ ಜೈಲಿಗೆ ಸೇರುವಂತೆ ಮಾಡಿತ್ತು.

