ಕೋಲಾರ : ಇಬ್ಬರು ವ್ಯಕ್ತಿಗಳ ನಡುವೆ ನಡೆದ ಮಾತಿನ ಚಕಮುಕಿ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿರುವ ಘಟನೆ ನಗರದ ಹೊರ ವಲಯದಲ್ಲಿನ ಲಕ್ಷ್ಮೀ ಬಾರ್ ಸಮೀಪ ಮಂಗಳವಾರ ಮುಂಜಾನೆ ನಸುಕಿನಲ್ಲಿ ನಡೆದಿದೆ.
ಮೃತನನ್ನು ನಗರದ ಬೀಡಿ ಕಾಲೋನಿನ ಸುಲ್ತಾನ್ ಪಾಷಾ ( 40) ಎನ್ನಲಾಗಿದ್ದು ಹತ್ಯೆ ಮಾಡಿದ ಆರೋಪಿ ಮಹಾಲಕ್ಷ್ಮಿ ಬಡಾವಣೆಯ ಅಬ್ದುಲ್ ರಶೀದ್ (45) ಎಂದು ಗುರುತಿಸಲಾಗಿದೆ.
ಮೃತ ಸುಲ್ತಾನ್ ಪಾಷಾ ಮುಂಜಾನೆ ಒಂದು ಗಂಟೆಯಲ್ಲಿ ಕದೀರ್ ಎಂಬಾತನಿಗೆ ಫೋನ್ ಮಾಡಿ ಮಹಾಲಕ್ಷ್ಮಿ ಬಡಾವಣೆಯ ಅಬ್ದುಲ್ ರಶೀದ್ ಎಂಬಾತ ನನ್ನನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದು ಬೇಗನೆ ಲಕ್ಷ್ಮಿ ಬಾರ್ ಬಳಿಗೆ ಬರುವಂತೆ ತಿಳಿಸಿದ್ದಾನೆ.
ಕಧೀರ್ ಸ್ಥಳಕ್ಕೆ ಬರುವಷ್ಟರಲ್ಲಿ ಸುಲ್ತಾನ್ ಪಾಷಾ ಹಾಗೂ ಆತನೊಂದಿಗೆ ನವಾಜ್ ಮತ್ತು ಜಮೀಲ್ ಸಹ ಇದ್ದು ಮೃತ ಸುಲ್ತಾನ್ ಪಾಷಾ ಅಬ್ದುಲ್ ರಶೀದ್ ನಾ ಆಟೋಗೆ ಕಲ್ಲುಗಳಿಂದ ಹೊಡೆಯುತ್ತಿದ್ದಾಗ ಕೋಪಗೊಂಡ ಅಬ್ದುಲ್ ರಶೀದ್ ಸುಲ್ತಾನ್ ಪಾಶಾಗೆ ಚಾಕುವಿನಿಂದ ತಿಳಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ . ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸದಾನಂದ ಮತ್ತವರ ತಂಡವು ಕೆಲವೇ ಗಂಟೆಗಳಲ್ಲಿ ಆರೋಪಿ ರಶೀದ್ ನನ್ನು ಬಂಧಿಸಿದ್ದಾರೆ.

