ಸತ್ತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ನಡೆದ ಆದಿವಾಸಿ

ಒಡಿಶಾ : ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಠೇವಣಿ ಹಣವನ್ನು ಮರಳಿ ಪಡೆಯಲು ಸಮಾಧಿಯಿಂದ ಹೊರತೆಗೆದ ಅಸ್ಥಿಪಂಜರದೊಂದಿಗೆ ಗ್ರಾಮೀಣ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದ್ದಾನೆ.

ಬ್ಯಾಂಕಿನಲ್ಲಿರುವ 20 ಸಾವಿರ ಹಣ ಪಡೆಯಲು ವ್ಯಕ್ತಿಯೋರ್ವ ಸಮಾಧಿಯೊಳಗಿದ್ದ ತನ್ನ ಸಹೋದರಿಯ ಮೃತ ದೇಹವನ್ನು ಬ್ಯಾಂಕಿಗೆ ಹೊತ್ತೊಯ್ದಿದ್ದಾನೆ. ಅಸ್ಥಿಪಂಜರವನ್ನು ನೋಡಿ ಬ್ಯಾಂಕ್ ಅಧಿಕಾರಿಗಳು ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿದರು. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಾಟ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಿಪಾಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ

ಒಡಿಶಾದ ವ್ಯಕ್ತಿಯೋರ್ವ ತನ್ನ ಮೃತ ಸಹೋದರಿಯ  ಖಾತೆಯಿಂದ 20,000 ರೂ. ಹಿಂಪಡೆಯಲು ಪ್ರಯತ್ನಿಸುತ್ತಿದ್ದ, ಆದರೆ ಬ್ಯಾಂಕ್ ಅಧಿಕಾರಿಗಳು ಖಾತೆದಾರನನ್ನು ಖುದ್ದಾಗಿ ಕರೆತರುವಂತೆ ಒತ್ತಾಯಿಸುತ್ತಲೇ ಇದ್ದರು. ಆಕೆ ನಿಧನರಾಗಿದ್ದಾರೆಂದು ಪದೇ ಪದೇ ಹೇಳಿದರೂ ಅವರು ಕೇಳಲಿಲ್ಲ. ಆತನಿಗೆ ಏನು ಮಾಡಬೇಕು ಎಂದು ಗೊತ್ತಾಗದಿದ್ದಾಗ ಈ ರೀತಿ ಮಾಡಿದ್ದಾನೆ. 

ಬ್ಯಾಂಕಿನ ಕಾನೂನು, ನಿಯಮಗಳ ಬಗ್ಗೆ ಹತಾಶಗೊಂಡ ಆ ವ್ಯಕ್ತಿ ಸಮಾಧಿಯಿಂದ ಸಹೋದರಿಯ ಅಸ್ಥಿಪಂಜರವನ್ನು ಹೊರತೆಗೆದಿದ್ದಾನೆ. ಬಳಿಕ ಮುಖದ ಭಾಗವನ್ನು ಸಿಮೆಂಟ್‌ ಚೀಲದಲ್ಲಿ ಕಟ್ಟಿದ್ದಾನೆ. ಉಳಿದ ಭಾಗವನ್ನು ಹಾಏಯೇ ಬಿಟ್ಟು ಹೆಗಲ ಮೇಲೆ ಹೊತ್ತು ರಸ್ತೆಯಲ್ಲಿ ನಡೆದುಕೊಂಡೆ ಬ್ಯಾಂಕಿಗೆ ಸಾಗಿದ್ದಾನೆ.  ಇದನ್ನು ನೋಡಿದವರು ವಿಡಿಯೋ ಮಾಡಿದ್ದಾರೆ. 

ನಂತರ ಪೊಲೀಸರೊಂದಿಗೆ ಚರ್ಚಿಸಿದ ನಂತರ, ಆ ವ್ಯಕ್ತಿ ಅಸ್ಥಿಪಂಜರವನ್ನು ಹಿಂತಿರುಗಿಸಿ ಸರಿಯಾದ ಸ್ಥಳದಲ್ಲಿ ಹೂಳಿದರು.  ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಪಾಟ್ನಾ ಬ್ಲಾಕ್‌ನ ಮಲ್ಲಿಪಾಸಿ ಗ್ರಾಮದ ಜಿತು ಮುಂಡಾ ಎಂದು ಗುರುತಿಸಲಾಗಿದೆ. ಆತನ ಸಹೋದರಿ ಮೃತಪಟ್ಟು ಎರಡು ತಿಂಗಳು ಕಳೆದಿತ್ತು. ಆಕೆಯ ಅಕೌಂಟ್‌ನಲ್ಲಿ ಇದ್ದ ಹಣವನ್ನು ಪಡೆಯಲು ಸಾಕ್ಷಿ ತರುವಂತೆ ಹೇಳಿದ್ದಾರೆ.ಆತನ ಮೃತ ಪ್ರಮಾಣ ಪತ್ರ ಮಾಡಿಸಬೇಕು ಎಂಬ ಅರಿವು ಕೂಡ ಇಲ್ಲ. ಹೀಗಾಗಿ, ಆಕೆಯ ಅಸ್ಥಿಪಂಜರವನ್ನೇ ಹೊತ್ತೊಯ್ದಿದ್ದಾನೆ.
“ಬ್ಯಾಂಕ್ ಅಧಿಕಾರಿ ತನ್ನ ಸಹೋದರಿಯ ಠೇವಣಿ ಹಣವನ್ನು ನೀಡಲು ಸಾಧ್ಯವಾಗದಿದ್ದಾಗ, ಅವಳು ಸತ್ತಿದ್ದಾಳೆ ಎಂಬುದಕ್ಕೆ ಪುರಾವೆಯಾಗಿ ತೋರಿಸಲು ಅಸ್ಥಿಪಂಜರವನ್ನು ತಂದಿದ್ದಾನೆ” ಎಂದು ಜಿತು ಮುಂಡಾ ಹೇಳಿದ್ದಾರೆ.

ಆತ ಅನಕ್ಷರಸ್ಥನಿರಬಹುದು. ಆತನಿಗೆ ದುಡ್ಡಿ ಅವಶ್ಯಕತೆ ಎಷ್ಟಿತ್ತು ಎಂಬುದನ್ನು ಘಟನೆಯೇ ವಿವರಿಸುತ್ತದೆ. ಅರಿವಿನ ಕೊರತೆಯ ಜೊತೆಗೆ ಕನಿಷ್ಠ ತಿಳವಳಿಕೆಯ ಕೊರತೆಯೂ ಆತನನ್ನು ಕಾಡುವ ಬಡತನವಿದೆ. ಮುಖ್ಯವಾಗಿ ಬಡಜನರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗುತ್ತಿದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

More articles

Latest article

Most read