ನವದೆಹಲಿ : ಎಎಪಿ ತೊರೆದು ಬಿಜೆಪಿಯೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿ ಬಿಜೆಪಿ ಸೇರಿರುವ ಆಮ್ ಆದ್ಮಿ ಪಕ್ಷದ ಏಳು ಮಂದಿ ರಾಜ್ಯ ಸಭೆ ಸದಸ್ಯರನ್ನು ಅನರ್ಹಗೊಳಿಸುವಂತೆ ರಾಜ್ಯ ಸಭಾ ಅಧ್ಯಕ್ಷ ಸಿ.ಪಿ.ರಾಧಾಕೃಷ್ಣ್ ಅವರಿಗೆ ಅರ್ಜಿ ಸಲ್ಲಿಕೆಯಾಗಿದೆ.
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಏಳು ರಾಜ್ಯಸಭೆ ಸದಸ್ಯರನ್ನು ಅನರ್ಹಗೊಳಿಸುವಂತೆ ಅರ್ಜಿ ಸಲ್ಲಿಸಿರುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಗತ್ಯವಿದ್ದರೆ ಈ ವಿಷಯದಲ್ಲಿ ಪಕ್ಷವು ಕಾನೂನು ಕ್ರಮ ಕೈಗೊಳ್ಳಲಿದೆ. ಏಳು ಸಂಸದರ ಈ ಕ್ರಮವು ಪಕ್ಷಾಂ ತರ ವಿರೋಧಿ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಏಳು ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಎಎಪಿಯು ರಾಜ್ಯಸಭಾ ಅಧ್ಯಕ್ಷರನ್ನು ಒತ್ತಾಯಿಸಿದೆ. ಅವರೆಲ್ಲ ಎಎಪಿ ಟಿಕೆಟ್ ಮೇಲೆ ಮೇಲ್ಮನೆಗೆ ಆಯ್ಕೆಯಾಗಿದ್ದರು. ಆದರೆ ನಂತರ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಲು ನಿರ್ಧ ರಿಸಿದ್ದಾರೆ ಎಂ ದು ಎಎಪಿ ತಿಳಿಸಿದೆ.
ಎಎಪಿಯ ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಅವರು ಪಕ್ಷ ತೊರೆದು ಬಿಜೆಪಿಯಲ್ಲಿ ವಿಲೀ ನಗೊಳ್ಳುವುದಾಗಿ ಘೋ ಷಿಸಿದ್ದರು.
ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ತನ್ನ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ದೂರ ಸರಿದಿದೆ ಎಂದು ಅವರು ಆರೋಪಿಸಿದ್ದರು.
ಸಂವಿಧಾನದ ಪ್ರಕಾರ, ಒಂದು ಪಕ್ಷದ ಒಟ್ಟು ಸಂಸದರಲ್ಲಿಮೂರನೇ ಎರಡರಷ್ಟು ಜನರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಬಹುದು ಎಂದು ಚಡ್ಡಾ ಹೇಳಿದ್ದರು. ಇದಕ್ಕೆ ಪಕ್ಷಾಂತರ ವಿರೋಧಿ ಕಾಯ್ದೆ ಅಡ್ಡ ಬರುವುದಿಲ್ಲ ಎಂದು ವಾದಿಸಿದ್ದರು.
ರಾಜ್ಯಸಭೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿದ್ದು, 7 ಸಂಸದರು ಹೋಗುತ್ತಿರುವುದರಿಂ ದಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಈ ವಾದ ತಳ್ಳಿ ಹಾಕಿರುವ ಸಿಂಗ್, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಕ್ಕೆ ಸಂ ಬಂಧಿಸಿದ ಪ್ರಕರಣಗಳು ಸೇರಿದಂ ತೆ ಸುಪ್ರೀಂ ಕೋರ್ಟ್ ನ ಹಲವು ತೀರ್ಪು ಗಳು ಪಕ್ಷಾಂತರಗಳು ಹೇಗೆ ಅನರ್ಹತೆಗೆ ಕಾರಣವಾಗಬಹುದು ಎಂಬುದನ್ನು ಸ್ಪಷ್ಟಪಡಿಸಿವೆ ಎಂದು ಹೇಳಿದ್ದಾರೆ.
ಸಂವಿಧಾನದ 10ನೇ ಪರಿಚ್ಛೇ ದವನ್ನು ಉಲ್ಲೇಖಿಸಿದ ಸಿಂಗ್, ಇದು ಸಂಸದರುಮಾಡಿರುವ ರಾಜಕೀಯ ಪಕ್ಷಾಂತರಗಳನ್ನು ಸ್ಪಷ್ಟವಾಗಿ ಅನುಮತಿಸುವುದಿಲ್ಲಎಂದು ಹೇಳಿದ್ದಾರೆ.

