ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 157/3ರ ಸರ್ಕಾರಿ ಭೂಮಿ ಅತಿಕ್ರಮಣ ಆರೋಪ ಕುರಿತು ಪಾರದರ್ಶಕ ಸರ್ವೆ ಕಾರ್ಯ ನಡೆಸುವಂತೆ ನೀತಿ ತಂಡ’ದ ಅಧ್ಯಕ್ಷರಾದ ಜಯಂತ್ ಟಿ.ಕೆ. ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿ ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 157/3ರಲ್ಲಿರುವ ಸರ್ಕಾರಿ ಭೂಮಿಯ ಸಂರಕ್ಷಣೆ ಹಾಗೂ ಅಲ್ಲಿ ನಡೆದಿರುವ ಎನ್ನಲಾದ ಅತಿಕ್ರಮಣದ ಕುರಿತು ಪಾರದರ್ಶಕ ತನಿಖೆ ನಡೆಸುವ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ, ಕಾನೂನು ಉಲ್ಲಂಘನೆಯಾಗದಂತೆ ನಿಷ್ಠಾವಂತ ಅಧಿಕಾರಿಗಳ ತಂಡದೊಂದಿಗೆ ಈ ಸರ್ವೆ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 2012ರಲ್ಲಿ ಆನೆ ಮಾವುತ ನಾರಾಯಣ ಮತ್ತು ಯಮುನಾ ಅವರ ಕೊಲೆಗೆ ಸಂಬಂಧವಿರುವ ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 157/3ರ ಸರ್ಕಾರಿ ಭೂಮಿಯಲ್ಲಿ ಅಯೋಧ್ಯ ಹೋಟೆಲ್ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಮಾಹಿತಿ ಜಾಲತಾಣಗಳಲ್ಲ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರಿ ಭೂಮಿಯನ್ನು ರಕ್ಷಿಸುವ ಸಲುವಾಗಿ ನೀತಿ ಟ್ರಸ್ಟ್ ವತಿಯಿಂದ 2025ರ ಏ.05 ರಂದು ರಾಜ್ಯ ಕಂದಾಯ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಬೆಳ್ತಂಗಡಿ ತಹಶೀಲ್ದಾರರಿಗೆ ದೂರು ಸಲ್ಲಿಸಲಾಗಿತ್ತು.
ಅಧಿಕೃತ ಕ್ರಮಗಳು : ದೂರಿನನ್ವಯ ಜಿಲ್ಲಾಧಿಕಾರಿಗಳು 2025 ರ ಏ.22 ರಂದು ಬೆಳ್ತಂಗಡಿ ದಂಡಾಧಿಕಾರಿಗಳಿಗೆ ತಹಶೀಲ್ದಾರರು ಅಯೋಧ್ಯ ಹೋಟೆಲ್ ನ ಜಾಗದ ಮಾಲೀಕರಾದ ವೀರೇಂದ್ರ ಹೆಗ್ಗಡೆ ಅವರಿಗೆ 2025 ರ ಮೇ. 21 ರಂದು ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮಾಲೀಕರು 2025ರ ಜೂ. 13ರಂದು ಉತ್ತರಿಸಿ, ಹೋಟೆಲ್ ಇರುವುದು ಸರ್ವೆ ನಂಬರ್ 158/3 ರಲ್ಲೇ ಹೊರತು 157/3 ರಲ್ಲಿ ಅಲ್ಲ ಎಂದು ಸ್ಪಷ್ಟನೆ ನೀಡಿ, ದೂರನ್ನು ವಜಾಗೊಳಿಸಲು ಕೋರಿದ್ದರು.
ನಂತರದ ಬೆಳವಣಿಗೆಯಲ್ಲಿ, ಕಂದಾಯ ನಿರೀಕ್ಷಕರು ಮತ್ತು ಭೂಮಾಪಕರು ದಾಖಲೆಗಳನ್ನು ಪರಿಶೀಲಿಸಿದ್ದು, 2026ರ ಏ.28 ರಂದು ಸ್ಥಳ ಸರ್ವೇ ನಡೆಸುವ ವಿಚಾರ ಮೌಖಿಕವಾಗಿ ತಿಳಿದು ಬಂದಿದೆ. ಹೀಗಾಗಿ, ಪಾರದರ್ಶಕವಾಗಿ ಸರ್ವೇ ನಡೆಸಬೇಕು ಎಂದು ಟಿ.ಕೆ.ಜಯಂತ್ ಆಗ್ರಹಿಸಿದ್ದಾರೆ.
ಪ್ರಮುಖ ಬೇಡಿಕೆಗಳು: ಸರ್ವೆ ಕಾರ್ಯದ ಕುರಿತು ಅಧಿಕೃತ ನೋಟಿಸ್ ನೀಡದ ಹಿನ್ನೆಲೆಯಲ್ಲಿ, ಕಳೆದ ಏ.18 ರಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿಗಳಿಗೆ ಬೇಡಿಕೆಗಳ ಮನವಿ ಸಲ್ಲಿಸಿದ್ದಾರೆ.
ವಿಡಿಯೋ ಚಿತ್ರೀಕರಣ: ಬೆಳ್ತಂಗಡಿ ತಹಶೀಲ್ದಾರ್ ಹಾಗೂ ದೂರುದಾರರ ಸಮ್ಮುಖದಲ್ಲೇ ಸಂಪೂರ್ಣ ಸರ್ವೆ ಕಾರ್ಯ ನಡೆಯಬೇಕು ಮತ್ತು ಇದರ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಆಗಬೇಕು.
ಪೊಲೀಸ್ ಭದ್ರತೆ: ಇದೊಂದು ಅತಿಸೂಕ್ಷ್ಮವಿಚಾರವಾಗಿರುವುದರಿಂದ ಸರ್ವೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು.
ವೆಚ್ಚ ಭರಿಸುವಿಕೆ: ವಿಡಿಯೋ ರೆಕಾರ್ಡಿಂಗ್ ವೆಚ್ಚವನ್ನು ಭರಿಸಲು ಸರ್ಕಾರಕ್ಕೆ ಆರ್ಥಿಕ ಸಂಕಷ್ಟವಿದ್ದರೆ, ಆ ವೆಚ್ಚವನ್ನು ದೂರುದಾರರು ಭರಿಸಲು ಸಿದ್ಧ. ಯಾವುದೇ ಪ್ರಭಾವಕ್ಕೆ ಒಳಗಾಗದೆ, ಕಾನೂನು ಉಲ್ಲಂಘನೆಯಾಗದಂತೆ ನಿಷ್ಠಾವಂತ ಅಧಿಕಾರಿಗಳ ತಂಡದೊಂದಿಗೆ ಈ ಸರ್ವೆ ಕಾರ್ಯ ನಡೆಯಬೇಕೆಂದು ನೀತಿ ತಂಡದ ಅಧ್ಯಕ್ಷ ಜಯಂತ್ ಟಿ.ಕೆ. ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಸರ್ಕಾರಿ ಭೂ ಅತಿಕ್ರಮಣ ಆರೋಪ, ಪಾರದರ್ಶಕ ಸರ್ವೇ ಕಾರ್ಯ ನಡೆಸುವಂತೆ ನೀಡಿ ತಂಡದ ಜಯಂತ್ ಟಿ.ಕೆ. ಆಗ್ರಹ