ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್‌ ದಾಳಿ : ಟ್ರಂಪ್‌ ಎಚ್ಚರಿಕೆ

ವಾಷಿಂಗ್ಟನ್‌ : ಎರಡು ವಾರಗಳ ವಿರಾಮದ ಗಡುವು ಬುಧವಾರಕ್ಕೆ ಅಂತ್ಯವಾಗಲಿದ್ದು, ಯಾವುದೇ ದೀರ್ಘಾವಧಿಯ ಒಪ್ಪಂದಕ್ಕೆ ಬರದಿದ್ದರೆ ಕದನ ವಿರಾಮ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಯಾವುದೇ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನವು  ಮುಂದುವರೆಯಲಿದೆ. ಓಪ್ಪಂದವು ಆಗದಿದ್ದರೆ ಮತ್ತೆ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಸಿದ್ದಾರೆ.  

ಬಹುಶಃ ನಾನು ಅದನ್ನು ವಿಸ್ತರಿಸುವುದಿಲ್ಲ, ಆದರೆ (ಇರಾನ್ ಬಂದರುಗಳ ಮೇಲಿನ) ದಿಗ್ಬಂಧನವು ಉಳಿಯುತ್ತದೆ” ಎಂದು ಟ್ರಂಪ್ ಅರಿಜೋನಾದ ಫೀನಿಕ್ಸ್‌ನಿಂದ ವಾಷಿಂಗ್ಟನ್‌ಗೆ ಹಿಂತಿರುಗುವಾಗ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. “

ಸೋಮವಾರ ಇಸ್ಲಾಮಾಬಾದ್’ನಲ್ಲಿ ಮಾತುಕತೆ
ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವಿನ ಇಸ್ಲಾಮಾಬಾದ್ ಮಾತುಕತೆಗಳು ಒಪ್ಪಂದವಿಲ್ಲದೆ  ಮುರಿದುಬಿದ್ದಿದೆ.  ಸೋಮವಾರ ಮತ್ತೊಮ್ಮೆ ಪಾಕಿಸ್ತಾನದ ರಾಜಧಾನಿಯಲ್ಲಿ ಎರಡೂ ಕಡೆಯವರು ಮಾತುಕತೆಗೆ ಕುಳಿತುಕೊಳ್ಳುತ್ತಾರೆ ಎಂದು ಇರಾನಿನ ಮೂಲಗಳನ್ನು ಉಲ್ಲೇಖಿಸಿ  ವರದಿ ಮಾಡಲಾಗಿದೆ.

ಮುಂದಿನ ಸುತ್ತಿನ ಮಾತುಕತೆಗಳ ಕುರಿತು ಅಮೆರಿಕದ ಕಡೆಯಿಂದ ಯಾವುದೇ ನವೀಕರಣವಿಲ್ಲ, ಆದರೂ ಟ್ರಂಪ್ ಅಮೆರಿಕ ಮತ್ತು ಇರಾನ್ ‘ಒಪ್ಪಂದಕ್ಕೆ ಹತ್ತಿರದಲ್ಲಿವೆ’ ಮತ್ತು ಇರಾನ್ ಯುದ್ಧ ಬೇಗನೆ ಕೊನೆಗೊಳ್ಳಬೇಕು ಎಂದು ಹೇಳಿದ್ದರು.

More articles

Latest article

Most read