ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ವಿ ಸೋಮಣ್ಣ (V Somanna) ಲೋಕಸಭೆಗೆ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸೋದಕ್ಕೆ ಟಿಕೆಟ್ ಕೇಳಿದ್ದೀನಿ. ಹೈಕಮಾಂಡ್ ಗುರುತಿಸಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ, ಅವರು ಎಲ್ಲಿ ಹೇಳ್ತಾರೋ ಅಲ್ಲಿಂದ ಸ್ಪರ್ಧಿಸ್ತೇನೆ ಎಂದು ಹೇಳಿದ್ದಾರೆ.
ನಾನು 365 ದಿನವೂ ರಾಜಕಾರಣ ಮಾಡ್ತೀನಿ ಎಂದ ಮಾಜಿ ಸಚಿವ ವಿ ಸೋಮಣ್ಣ, ನಾನು ಗೆದ್ದಾಗಲೂ ಒಂದು ದಿನ ಸುಮ್ಮನೆ ಕೂರಲ್ಲ, ಇದು ನನ್ನ ರೂಟೀನ್ ವರ್ಕ್. ಇದೀಗ ಸೋತಿದ್ದರಿಂದ ಸ್ವಲ್ಪ ಸೋಂಬೇರಿ ಆಗಿದ್ದೀನಿ ಎಂದು ಹೇಳಿದರು.
ಮೋದಿ ಪ್ರಧಾನಿ ಅಗ್ತಾರೆ ಅಂದರೆ ನಮ್ಮ ಅಳಿಲು ಸೇವೆ ಬೇಕಲ್ಲ. ನನಗೆ ಬೆಂಗಳೂರು ಹೇಗೋ ತುಮಕೂರು ಕೂಡ ಹಾಗೆ ಇದೆ. ನನಗೂ ತುಮಕೂರುಗೂ ಅವಿನಾಭಾವ ಸಂಬಂಧವಿದೆ ಎಂದು ವಿ.ಸೋಮಣ್ಣ ತಿಳಿಸಿದರು.