ಕಡಿಮೆ ಶಿಕ್ಷೆ ನೀಡುವಂತೆ ನ್ಯಾಯಾಧೀಶರಿಗೆ ವಿನಯ್‌ ಕುಲಕರ್ಣಿ ಮನವಿ

ಶಿಕ್ಷೆ ಪ್ರಮಾಣ ನಾಳೆಗೆ ಮುಂದೂಡಿಕೆ

ಬೆಂಗಳೂರು : ಯೋಗೇಶ್‌ ಗೌಡ  ಹತ್ಯೆ  ಪ್ರಕರಣದಲ್ಲಿ 16 ಮಂದಿ ದೋಷಿಗಳಿಗೆ  ಇಂದು  ಪ್ರಕಟಿಸಬೇಕಾಗಿದ್ದ ಶಿಕ್ಷೆ ಪ್ರಮಾಣವನ್ನು ನಾಳೆಗೆ ಮುಂದೂಡಲಾಗಿದೆ.  ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಖುದ್ದು ಅಪರಾಧಿಗಳು ಮತ್ತು ಅವರ ಪರ ವಕೀಲರ ವಾದವನ್ನು ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಸುದೀರ್ಘವಾಗಿ ಆಲಿಸಿ, ನಾಳೆ ತೀರ್ಪು ಪ್ರಕಟಿಸುವುದಾಗಿ ಹೇಳಿದರು.

ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೋರುವುದಿಲ್ಲ ಬದಲಾಗಿ ಕ್ಷಮೆಯಿಲ್ಲದ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಶಾಸಕ ವಿನಯ್‌ ಕುಲಕರ್ಣಿ ಅವರು ಕ್ಷೇತ್ರದಲ್ಲಿ ಜನರ ವಿಶ್ವಾಸಗಳಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅವರ ಅಗತ್ಯವಿದೆ. ಅಲ್ಲದೇ, ಸುಮಾರು ಮೂರುವರೆ ಸಾವಿರ ಎಮ್ಮೆ, ಹಸುಗಳನ್ನು ಸಾಕಿದ್ದು ಅದನ್ನು ಪೋಷಿಸಬೇಕಾಗಿದೆ. ಹೀಗಾಗಿ, ಕನಿಷ್ಠ ಶಿಕ್ಷೆ ನೀಡುವಂತೆ ಅಪರಾಧಿ ಪರ  ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಮನವಿ ಮಾಡಿದರು.  

ನ್ಯಾಯಾಲದಯ ಸೂಚನೆಯಂತೆ ಪೀಠದ ಮುಂದೆ ಹಾಜರಾದ ವಿನಯ್‌ ಕುಲಕರ್ಣಿ,  ಕಳೆದ 27 ವರ್ಷದಿಂದ ರಾಜಕೀಯದಲ್ಲಿದ್ದು, ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ಪ್ರತೀಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ. ಮೂವರು ಮಕ್ಕಳಿದ್ದು, ಅವರು ಮದುವೆಗೆ ಬಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸಂಸತ್‌ ಚುನಾವನೆಯಲ್ಲಿ ನಿಂತು ಸೋತಿದ್ದೇನೆ. ಒಮ್ಮೆ ಸಚಿವನಾಗಿದ್ದೇನೆ. ನನಗೆ ಕಡಿಮೆ ಶಿಕ್ಷೆ ವಿಧಿಸಬೇಕು  ಎಂದು ಮನವಿ ಮಾಡಿದರು.

ಬಳಿಕ ಎಲ್ಲಾ ಅಪರಾಧಿಗಳು ಕೂಡ ನ್ಯಾಯಾಲಯದ ಮುಂದೆ ತಮ್ಮ ಪರಿಸ್ಥಿತಿಗಳನ್ನು ವಿವರಿಸಿ, ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.

More articles

Latest article

Most read