ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ರೂ. ವಂಚನೆ ಆರೋಪ

ಹೈದರಾಬಾದ್: ಕಿರು ಹಣಕಾಸು ಯೋಜನೆ ವ್ಯವಹಾರದಲ್ಲಿ ವಕೀಲರೊಬ್ಬರಿಗೆ 10 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಪಂಜಾಗುಟ್ಟ ಪೊಲೀಸರು ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಯೋಜನೆಗೆ ಸಂಬಂಧಿಸಿದ ವಂಚನೆಯಲ್ಲಿ ಮಂಗಲಿ ತನಗೆ 10 ಕೋಟಿ ರೂ. ವಂಚಿಸಿದ್ದಾರೆ ಎಂದು ವಕೀಲ ಸುಬ್ಬಾ ರಾವ್ ಆರೋಪಿಸಿದ್ದಾರೆ.

ವಕೀಲರು ಮಂಗಲಿ ಮತ್ತು ಇತರ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ಕೇಳಿದ್ದಕ್ಕೆ ಅವರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ, ಮಂಗ್ಲಿ, ಅವರ ಸಹೋದರ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 351 (2), 352 ರ ಅಡಿಯಲ್ಲಿ ಪಂಜಾಗುಟ್ಟ ಪೊಲೀಸರು ಬಿಎನ್ಎಸ್ ನ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಮಂಗ್ಲಿ ಮೈಕ್ರೋ ಫೈನಾನ್ಸ್ ಮಾಡುತ್ತಿದ್ದರು ಎನ್ನಲಾಗಿದೆ. ಮಂಗ್ಲಿ, ಅವರ ಸಹೋದರ ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಸುಮಾರು 100 ಜನರಿಂದ ಭಾರಿ ಹಣವನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಸೆ ತೋರಿಲಾಗಿತ್ತು. ಇದನ್ನು ನಂಬಿ ಅನೇಕರು ಹಣ ನೀಡಿದ್ದರು. ಮಂಗ್ಲಿ ಕಡೆಯಿಂದ ಸುಮಾರು 10 ಕೋಟಿ ರೂಪಾಯಿ ಮೋಸ ಆಗಿದೆ ಎನ್ನಲಾಗಿದೆ.

More articles

Latest article

Most read