ಆರ್ ಸಿಬಿ ಅಭಿಮಾನಿಗಳಲ್ಲಿ ಡವಡವ: ಆ ಹುಡುಗ ಇವತ್ತು ಸೆಂಚುರಿ ಹೊಡೀತಾನಾ?

ಇವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ್ ರಾಯಲ್ಸ್ ನಡುವಿನ ಕಾಳಗ ನಡೆಯಲಿದೆ. ಈ ರಾಯಲ್ಸ್ ಗಳ ಮುಖಾಮುಖಿ ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆಗಳನ್ನು ಹುಟ್ಟಿಸಿದೆ. ಯಾಕೆಂದರೆ ಈ ತಂಡಗಳು 2026ರ ಐಪಿಎಲ್ ಆರಂಭದಲ್ಲೇ ಆರ್ಭಟಿಸುತ್ತಿವೆ. ಎರಡೂ ತಂಡಗಳು ಇನ್ನೂ ಸೋಲು ಕಂಡಿಲ್ಲ. ಇವತ್ತು ಇಬ್ಬರಲ್ಲಿ ಒಬ್ಬರು ಸೋಲಲೇಬೇಕು. ಗೆಲುವಿನ ಗೆರೆಯನ್ನು ಯಾರು ದಾಟಿಕೊಂಡುಹೋಗುತ್ತಾರೆ ಎಂಬುದು ಇವತ್ತು ಗೊತ್ತಾಗಲಿದೆ.

ಆದರೆ ಇನ್ನೊಂದು ಮುಖ್ಯ ವಿಷಯಕ್ಕಾಗಿ ಇವತ್ತಿನ ಪಂದ್ಯ ಬಹಳ ಕುತೂಹಲ ಮೂಡಿಸುತ್ತಿದೆ. ಒಂದು ಹೆಸರು ಎಲ್ಲ ಕಡೆಯೂ ಸದ್ದು ಮಾಡುತ್ತಿದೆ. ಆತ ಇವತ್ತು ಸೆಂಚುರಿ ಹೊಡೀತಾನಾ? ಆರ್ ಸಿಬಿ ಸೋಲಿಸುತ್ತಾನಾ? ಅನ್ನೋದು ಇವತ್ತಿನ ಪ್ರಶ್ನೆ. ಅವನ ಹೆಸರು ವೈಭವ್ ಸೂರ್ಯವಂಶಿ. ಕ್ರಿಕೆಟ್ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಹುಟ್ಟಿಸಿರುವ ಹದಿನೈದು ವರ್ಷದ ಪುಟ್ಟ ಹುಡುಗ.

ವೈಭವ್‌ ನೋಡಿದಾಗ ವಿರೇಂದ್ರ ಸೆಹ್ವಾಗ್‌ ನೆನಪಾಗುತ್ತಾನೆ. ಅವನೂ ಅಷ್ಟೆ, ಬೌಲರ್‌ ಯಾರು ಎಂಬುದನ್ನು ನೋಡದೇ ಬಾಲ್‌ ಇರುವುದೇ ಹಣಿಯುವುದಕ್ಕೆ ಎನ್ನುವ ಹಾಗೆ ಆಡಿದವನು. ಮುಂಬೈ ಮೇಲಿನ ಪಂದ್ಯದಲ್ಲಿ ವೈಭವ್‌ ಮೊದಲ ಬಾರಿ ಜಗದ್ವಿಖ್ಯಾತ ಬೌಲರ್‌ ಜಸ್‌ ಪ್ರೀತ್‌ ಬುಮ್ರಾ ಎದುರಿಸುತ್ತಿದ್ದ. ಮೊದಲ ಎಸೆತದಲ್ಲೇ ವೈಭವ್‌ ಸಿಕ್ಸರ್‌ ಹೊಡೆದುಬಿಟ್ಟ. ಅಲ್ಲಿಗೆ ನಿಲ್ಲಿಸದೇ ಅದೇ ಓವರ್‌ ನಲ್ಲಿ ಬುಮ್ರಾಗೆ ಮತ್ತೊಂದು ಸಿಕ್ಸರ್‌. ಯಾರಿಗಿದೆ ಈ ಧೈರ್ಯ? ವೈಭವ್‌ ಐಪಿಎಲ್‌ ಗೆ ಕಾಲಿಟ್ಟ ಮೊದಲ ಪಂದ್ಯದಲ್ಲೇ ತಾನು ಎದುರಿಸಿದ ಮೊದಲ ಚೆಂಡನ್ನೇ ಸಿಕ್ಸರ್‌ ಗೆ ಅಟ್ಟಿದವನು. ಅಲ್ಲಿಂದೀಚಿಗೆ ಅವನು ತಿರುಗಿ ನೋಡೇ ಇಲ್ಲ.

ಗುವಾಹಟಿಯ ಎಸಿಎ ಸ್ಟೇಡಿಯಂನಲ್ಲಿ ಇವತ್ತು ರಾತ್ರಿ 7.30ಕ್ಕೆ ಆರ್‌ ಸಿಬಿ, ಆರ್‌ ಆರ್‌ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.  ಆರ್ಸಿಬಿ ತಂಡ ಸತತ ಎರಡು ಗೆಲುವಿನ ಹೆಮ್ಮೆಯಲ್ಲಿ ತೇಲುತ್ತಿದೆ. ಆದರೆ ಅಭಿಮಾನಿಗಳ ಎದೆಯಲ್ಲಿ ಯಾವುದೋ ಹಕ್ಕಿ ರೆಕ್ಕೆಬಡಿದಂಥ ಅನುಭವ. ನಮ್ಮ ಬೌಲರ್‌ ಗಳನ್ನು ಅವನು ಮನಸಾರೆ ಹಣಿದುಬಿಟ್ಟರೆ ಅನ್ನೋ ಭಯ. ಯಾಕೆಂದರೆ ಈ ಹುಡುಗನಿಗೆ ನಿಜಕ್ಕೂ ಭಯ ಅನ್ನೋದೇ ಇಲ್ಲ. ಹೇಜಲ್‌ವುಡ್‌, ಡಫಿ, ಕೃನಾಲ್‌, ಸುಯಾಶ್‌ ಎಲ್ಲರಿಗೂ ಅವನು ಸಿಕ್ಸರ್‌ ಬಾರಿಸಿದರೆ ಅನ್ನೋ ಭಯ ಅಭಿಮಾನಿಗಳನ್ನು ಕಾಡುತ್ತಿದೆ.

ಕಳೆದ ವರ್ಷ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 35 ಎಸೆತಗಳಲ್ಲಿ 101 ರನ್ ಹೊಡೆದಾಗ ಕ್ರಿಕೆಟ್‌ ಜಗತ್ತು ನಿಬ್ಬೆರಗಾಗಿತ್ತು. ಐಪಿಎಲ್ ಇತಿಹಾಸದಲ್ಲಿ ಇದು ಕ್ರಿಸ್ ಗೇಲ್ ನಂತರ ಎರಡನೇ ಅತಿ ವೇಗದ ಶತಕ.  ಆ ಪಂದ್ಯದಲ್ಲಿ ಅವನು 11 ಸಿಕ್ಸರ್ಗಳ ಮಳೆ ಸುರಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದ.

ಆದರೆ ಅವನ ಅತ್ಯುತ್ತಮ ಇನ್ನಿಂಗ್ಸ್ ಅಂದರೆ 2026 ಯು-19 ವಿಶ್ವಕಪ್ ಫೈನಲ್. ಹರಾರೆಯಲ್ಲಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್! ಐವತ್ತು ಓವರ್‌ ಗಳ ಪಂದ್ಯವನ್ನು ಅವರು ಟಿ20ಯಂತೆಯೇ ಆಡಿದ.  15 ಫೋರ್ ಮತ್ತು 15 ಸಿಕ್ಸರ್ಗಳ ಅಬ್ಬರ. ಸ್ಟ್ರೈಕ್ ರೇಟ್ 218! ಯು-19 ವಿಶ್ವಕಪ್ ಫೈನಲ್ನಲ್ಲಿ ಇದು ಅತ್ಯಧಿಕ ವೈಯಕ್ತಿಕ ಸ್ಕೋರ್. ಭಾರತವನ್ನು 411/9ಕ್ಕೆ ತಲುಪಿಸಿ 100 ರನ್ಗಳ ಭರ್ಜರಿ ಗೆಲುವು ತಂದುಕೊಟ್ಟ.

ವೈಭವ್ ಸೂರ್ಯವಂಶಿ ಯಾವ ಟೂರ್ನಿಗೆ ಕಾಲಿಟ್ಟರೂ ಅಲ್ಲೊಂದು ಸೆಂಚುರಿ ಇದ್ದೇ ಇರುತ್ತದೆ. ಇದರಲ್ಲಿ ಐಪಿಎಲ್ನಲ್ಲಿ ಒಂದು (101), ಲಿಸ್ಟ್ ಎ (ವಿಜಯ್ ಹಜಾರೆ ಟ್ರೋಫಿ)ಯಲ್ಲಿ ಒಂದು (36 ಎಸೆತಗಳಲ್ಲಿ ಶತಕ — ಲಿಸ್ಟ್ ಎ ಇತಿಹಾಸದ ಅತಿ ವೇಗದ ಶತಕಗಳಲ್ಲಿ ಒಂದು), ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಒಂದು (61 ಎಸೆತಗಳಲ್ಲಿ 108*), ಯು-19 ಏಷ್ಯಾ ಕಪ್ ಮತ್ತು ಇತರ ಯು-19 ಪಂದ್ಯಗಳಲ್ಲಿ ಹಲವು (ಉದಾ: ಆಸ್ಟ್ರೇಲಿಯಾ ಯು-19 ವಿರುದ್ಧ 58 ಎಸೆತಗಳಲ್ಲಿ ಶತಕ). ಇವೆಲ್ಲವೂ ಅವನು 14-15 ವರ್ಷದೊಳಗೆ ಸಾಧಿಸಿದ್ದು!

ವೈಭವ್ ಗೆ ನಿಜಕ್ಕೂ ಇನ್ನೂ 15 ವರ್ಷನಾ? ಅವನಿಗೆ 18 ಆಗಿರಬಹುದು, 19 ಆಗಿರಬಹುದು ಎಂಬುದು ಹಲವರ ವಾದ. ಅವನ ವಯಸ್ಸಿನ ಬಗ್ಗೆ ಭಾರಿ ವಿವಾದವೇ ಎದ್ದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ದೊಡ್ಡ ಚರ್ಚೆಯೇ ನಡೆಯಿತು. ಆದರೆ ಅವನ ಅಪ್ಪ ಸಂಜೀವ್ ಸೂರ್ಯವಂಶಿ “ನನ್ನ ಮಗನ ವಯಸ್ಸು ಸರಿ. ಬಿಸಿಸಿಐ ಬೋನ್ ಟೆಸ್ಟ್ ಮಾಡಿಸಿದ್ದೇವೆ. ಎಂಟು ವರ್ಷದಿಂದಲೂ ಅವನು ಈ ವಯಸ್ಸಿನಲ್ಲೇ ಆಡುತ್ತಿದ್ದಾನೆ” ಎಂದು ಸಾಕ್ಷ್ಯ ಸಹಿತ ಹೇಳಿದ್ದರು. ಆದರೆ ವಿವಾದ ಇನ್ನೂ ಆರಿದ ಹಾಗೆ ಕಾಣುತ್ತಿಲ್ಲ.

ವೈಭವ್ ಬಿಹಾರದ ಸಮಸ್ತಿಪುರ ಜಿಲ್ಲೆಯ ತಾಜ್ಪುರ (ಮೋಟಿಪುರ) ಗ್ರಾಮದವನು. ಸಣ್ಣ ರೈತ ಕುಟುಂಬ. ಅಪ್ಪ ಸಂಜೀವ್ ಒಮ್ಮೆ ಕ್ರಿಕೆಟ್ ಆಡುವ ಕನಸು ಕಂಡಿದ್ದರು. ಆದರೆ ಆಗಲಿಲ್ಲ. ಆ ಕನಸನ್ನು ಮಗನಲ್ಲಿ ನೆಟ್ಟರು. ನಾಲ್ಕು ವರ್ಷದಿಂದಲೇ ಬ್ಯಾಟ್ ಕೊಟ್ಟು ಕ್ರಿಕೆಟ್ ಕಲಿಸಿದರು. ಹಳ್ಳಿಯಲ್ಲಿ ನೆಟ್ ನಿರ್ಮಿಸಿದರು. ಮಗನನ್ನು ಕರೆದುಕೊಂಡು ಪಟ್ನಾದ ಮಣೀಶ್ ಒಜ್ಹಾ ಅಕಾಡೆಮಿಗೆ 100 ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದರು. ಕೊನೆಗೆ ತಮ್ಮ 2.5 ಎಕರೆ ಭೂಮಿಯನ್ನೇ ಮಾರಿ ಮಗನ ಕ್ರಿಕೆಟ್ಗೆ ಹಣ ತಂದರು. ಅಮ್ಮ ಗಂಡ-ಮಗನ ಕನಸಿಗೆ ಬೆನ್ನಾಗಿ ನಿಂತಳು. ಹಿರಿಯ ಮಗ ಉಜ್ವಲ್ ಕುಟುಂಬದ ಉಳಿದ ಕೆಲಸಗಳನ್ನು ನೋಡಿಕೊಂಡ. ಇಡೀ ಕುಟುಂಬವೇ ಒಂದು ವೈಭವದ ಕನಸಿಗಾಗಿ ಸಮರ್ಪಿಸಿಕೊಂಡಿತು.

ವೈಭವ್ನ ಬ್ಯಾಟಿಂಗ್ ಶೈಲಿ ವಿಶೇಷ. ಅವನ ಬತ್ತಳಿಕೆಯಲ್ಲಿ ಎಲ್ಲ ಬಗೆಯ ಹೊಡೆತಗಳೂ ಇವು. ಅವನ ಬ್ಯಾಟ್ ಸ್ವಿಂಗ್ ಅದ್ಭುತ. ವೇಗದ ಬೌಲರ್ ಗಳ ನೀರಿಳಿಸುವುದರಲ್ಲಿ ಅವನು ನಿಸ್ಸೀಮ. ಒಂದು ಶಾಟ್ ಹೊಡೆಯಲು ನಿಂತಾಗ ಅವನು ಜನರೇಟ್ ಮಾಡುವ ಪವರ್ ಅಸಾಧಾರಣ. ಹೀಗೆ ಪವರ್ ಜನರೇಟ್ ಮಾಡುವಾಗ ಟೈಮಿಂಗ್ ಒಂದು ಫ್ರಾಕ್ಷನ್ ಸೆಕೆಂಡ್ ಕೂಡ ಕೆಡಬಾರದು. ವೈಭವ್ ಗೆ ಪವರ್ ಜೊತೆಗೆ ಟೈಮಿಂಗ್ ಕೂಡ ಮಾಡುತ್ತಾನೆ. ವೈಭವ್ ಸೋಲಿಸಲು ಬೌಲರ್ ಗಳಿಗೆ ಇರುವ ಒಂದೇ ಉಪಾಯವೆಂದರೆ ಶಾರ್ಟ್ ಬೌನ್ಸರ್ ಗಳು, ಶಾರ್ಟ್ ಬಾಲ್ ಗಳು. ಆದರೆ ಈ ಚೆಂಡುಗಳನ್ನೂ ವೈಭವ್ ಕನೆಕ್ಟ್ ಮಾಡಿದನೆಂದರೆ ಬೌಲರ್ ಗಳ ಗತಿ ದೇವರಿಗೇ ಪ್ರೀತಿ.

ಇವತ್ತು ಆರ್ಸಿಬಿ ಬೌಲಿಂಗ್ ಲೈನ್ಅಪ್ ತುಂಬಾ ಬಲಿಷ್ಠವಾಗಿದೆ ಎಂಬುದೇನೋ ನಿಜ. ಇವತ್ತಿನ ಪಂದ್ಯಕ್ಕೆ ಜೋಷ್ ಹೇಜಲ್ ವುಡ್ ಬಂದು ಜೋಷ್ ತುಂಬುವ ಸಾಧ್ಯತೆಯೂ ಇದೆ.  ಆದರೆ ವೈಭವ್ ತನ್ನ ಮೊದಲ ಎಸೆತದಿಂದಲೇ ಆಕ್ರಮಣ ಆರಂಭಿಸುತ್ತಾನೆ. ಆತನ ಜೋಡಿ ಯಶಸ್ವಿ ಜೈಸ್ವಾಲ್ ಕೂಡ ಸ್ಫೋಟಕ ಆಟಗಾರ. ಇವತ್ತು ಅವನು ಸೆಂಚುರಿ ಹೊಡೆದರೆ ಇತಿಹಾಸದ ಮತ್ತೊಂದು ಪುಟ ತೆರೆಯುತ್ತಾನೆ.

ವೈಭವ್ ಭಾರತ ಜೆರ್ಸಿಯಲ್ಲಿ ಭಾರತ ತಂಡಕ್ಕಾಗಿ ಆಡುವ ದಿನಗಳು ದೂರವೇನೂ ಇಲ್ಲ. ಈ ಐಪಿಎಲ್ ಅವನ ಕನಸಿಗೆ ಮತ್ತೊಂದು ಮೆಟ್ಟಿಲು.

•             ದಿನೇಶ್ ಕುಮಾರ್ ಎಸ್.ಸಿ.

More articles

Latest article

Most read