ಬಾಗಲಕೋಟೆ : ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.43.75ರಷ್ಟು ಮತದಾನ, ದಾವಣಗೆರೆ ದಕ್ಷಿಣದಲ್ಲಿ 1 ಗಂಟೆ ವೇಳೆಗೆ ಶೇಕಡಾ 37.17ರಷ್ಟು ಮತದಾನ ನಡೆದಿದೆ. ಒಟ್ಟು 2,31,674 ಮತದಾರರ ಪೈಕಿ 85,882 ಜನರಿಂದ ಮತ ಚಲಾವಣೆ ಆಗಿದೆ.
ಬಾಗಲಕೋಟೆ ನಗರದ ಸಕ್ರಿ ಕಾಲೇಜಿನಲ್ಲಿರುವ ಮತಗಟ್ಟೆ ಕೇಂದ್ರ 149ರಲ್ಲಿ ಒಂದು ಗಂಟೆ ಕಾಲ ಮತದಾನ ಸ್ಥಗಿತಗೊಂಡಿತ್ತು. ತಾಂತ್ರಿಕ ದೋಷದಿಂದ ಮತಯಂತ್ರ ಕೈಕೊಟ್ಟಿತು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಮತ ಯಂತ್ರ ಕೈ ಅಭ್ಯರ್ಥಿ ಉಮೇಶ ಮೇಟಿ ಬದಲಾವಣೆ ಮಾಡಿಸಿದರು.
ಬೆಳಿಗ್ಗೆ 11 ಗಂಟೆವರೆಗೆ ಶೇ.27.82ರಷ್ಟು ಮತದಾನ ನಡೆದಿತ್ತು. ಬಿರು ಬಿಸಿಲಿನಲ್ಲೂ ಜನ ಮತದಾನ ಮಾಡುತ್ತಿದ್ದಾರೆ. ಅಮೀನಗಡದಲ್ಲಿ ಮತದಾನದ ವೇಳೆ ಅವ್ಯವಸ್ಥೆ ಆರೋಪ ಕೇಳಿಬಂದಿದ್ದು, ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಮತದಾರರಿಗೆ ತೊಂದರೆ ಆಗಿದೆ. ಸಾಲಿನಲ್ಲಿ ನಿಂತಿದ್ದ ವೇಳೆ ಅಸ್ವಸ್ಥಗೊಂಡು ವೃದ್ಧೆ ಕುಸಿದು ಬಿದ್ದರು. ತಕ್ಷಣ ವೃದ್ಧೆಯನ್ನು ಚಿಕಿತ್ಸೆಗಾಗಿ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರು.
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಸ್ವಗ್ರಾಮ ತಿಮ್ಮಾಪೂರದಲ್ಲಿ ಮತಗಟ್ಟೆ ಸಂಖ್ಯೆ 39ರಲ್ಲಿ ಉಮೇಶ್ ಮೇಟಿ ಮತದಾನ ಮಾಡಿದರು. ಗ್ರಾಮದ ಮುಖಂಡರು, ಯುವಕರ ಜೊತೆ ಬಂದು ಹಕ್ಕು ಚಲಾಯಿಸಿದರು.
ವಿಧಾನಪರಿಷತ್ ಸದಸ್ಯ ಪಿ.ಹೆಚ್.ಪೂಜಾರ ಬಾಗಲಕೋಟೆ ನಗರದ ಸಕ್ರಿ ಮಹಾವಿದ್ಯಾಲಯದಲ್ಲಿ ಮತ ಚಲಾವಣೆ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಕುರೇರ ವೋಟಿಂಗ್ ನವನಗರ ಅಂಬೇಡ್ಕರ್ ಭವನದ 194ರ ಮತಗಟ್ಟೆಯಲ್ಲಿ ಪತ್ನಿ ಸಮೇತ ಆಗಮಿಸಿದ ಸಿಇಓ ಕುಟುಂಬ ಸಮೇತ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮತದಾನ ಮಾಡಿದರು.
ಇನ್ನೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆ ವರೆಗೆ ಶೇ.22 ರಷ್ಟು ಮತದಾನ ನಡೆದಿದೆ.

