ಬೆಂಗಳೂರು : ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ನೀತಿಗೆ ಬಿಜೆಪಿ ಅಪಸ್ವರ ತೆಗೆದಿದೆ. ಹಿಂದಿ ಭಾಷೆ ಐಚ್ಚಿಕ ವಿಷಯವಾಗಿರಿಸಿಕೊಳ್ಳುವ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿದೆ. ಮುಂದೊಂದು ದಿನ
ನಿಮ್ಮಲ್ಲೂ ಹಿಂದಿ ಹೇರಬಹುದು, ಬಿಜೆಪಿ ಬಗ್ಗೆ ಎಚ್ಚರವಿರಲಿ ಎಂದು ತಮಿಳುನಾಡು ರಾಜಕಾರಣಿಗಳಿಗೆ ಕನ್ನಡ ಹೋರಾಟಗಾರ ಕಿವಿಮಾತು ಹೇಳಿದ್ದಾರೆ.
ಕನ್ನಡ ಹೋರಾಟಗಾರ ಅರುಣ್ ಜಾವಗಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು,
ಪ್ರಿಯ ತಮಿಳು ಜನರೇ, ನೀವು ಮತ ಚಲಾಯಿಸುವಾಗ ದಯವಿಟ್ಟು ಜಾಗರೂಕರಾಗಿರಿ.
ಕರ್ನಾಟಕದ ಕನ್ನಡ ಭೂಮಿಯಲ್ಲಿ ಹಿಂದಿ ಪ್ರಾಬಲ್ಯವನ್ನು ಉತ್ತೇಜಿಸುವ ನೀತಿಗಳನ್ನು ಬಿಜೆಪಿ ನಿರಂತರವಾಗಿ ಮಾಡುತ್ತಲೇ ಬಂದಿದೆ. ದೆಹಲಿ ಹೈಕಮಾಂಡ್ಗೆ ತಲೆ ಬಾಗಿಸಿರುವ ಸ್ಥಳೀಯ ನಾಯಕರು, ಕನ್ನಡಕ್ಕಾಗಿ ಕನ್ನಡದ ನೆಲದ ತೀರ್ಮಾನದ ಬಗೆಗಿನ ತಮ್ಮ ಧ್ವನಿಯನ್ನು ಸೀಮಿತಗೊಳಿಸಿಕೊಂಡಿದ್ದಾರೆ.
ಅನ್ಯಾಯದ ತೆರಿಗೆ ವಿತರಣೆ ಅಥವಾ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯದಿರಲು ನೀಡದ ಅವಕಾಶದಂತಹ ಪ್ರಮುಖ ವಿಷಯಗಳ ಬಗ್ಗೆ ಬಿಜೆಪಿ ನಾಯಕರು ಮೌನವಾಗಿರುವ ಹಲವಾರು ನಿದರ್ಶನಗಳಿವೆ.
https://www.facebook.com/share/p/1D71JhK295
ಈಗ, ಬಿಜೆಪಿ ಹಿಂದಿಯನ್ನು ಐಚ್ಛಿಕ ವಿಷಯವಾಗಿ ಇರಿಸಿಕೊಳ್ಳುವ ಪ್ರಯತ್ನಗಳನ್ನು ವಿರೋಧಿಸುತ್ತಿದೆ ಮತ್ತು ಕನ್ನಡ ನೆಲದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವ ಕಡೆಗೆ ಒತ್ತಾಯಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಂದು ರಾಜ್ಯದ ಬಗ್ಗೆ ಅಲ್ಲ, ಭಾಷಾ ವೈವಿಧ್ಯತೆ, ಫೆಡರಲ್ ಮೌಲ್ಯಗಳು ಮತ್ತು ಪ್ರಾದೇಶಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಾದ ರಾಜ್ಯಗಳಿಗೆ ಅನ್ವಯವಾಗಲಿದೆ. ಹೀಗಾಗಿ,
ನೀವು ಮತ ಚಲಾಯಿಸುವಾಗ ದಯವಿಟ್ಟು ಈ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ಮತ ಹಾಕಿ ಎಂದು ತಮಿಳುನಾಡಿನ ಜನತೆಗೆ ಮನವಿ ಮಾಡಿದ್ದಾರೆ.

