ನನ್ನನ್ನು ಇರಾನ್ ತನ್ನ ಸುಪ್ರೀಂ ಲೀಡರ್ ಮಾಡುವ ಆಫರ್ ನೀಡಿತ್ತು: ಟ್ರಂಪ್ ವಿಚಿತ್ರ ಹೇಳಿಕೆ

ವಾಷಿಂಗ್ಟನ್: ನನ್ನನ್ನು ತನ್ನ ದೇಶದ ಸುಪ್ರೀಮ್ ಲೀಡರ್ ಮಾಡುವುದಾಗಿ ಇರಾನ್ ಆಫರ್ ನೀಡಿತ್ತು, ನಾನು ಅದನ್ನು ನಿರಾಕರಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ.

ಗುರುವಾರ ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಷನಲ್ ಕಮಿಟಿ (NRCC) ನ ಫಂಡ್ ರೈಸರ್ ಭೋಜನಕೂಟದಲ್ಲಿ ಮಾತಾಡುವಾಗ, ಇರಾನ್ ನಾಯಕರು ತಮ್ಮನ್ನು ಇರಾನ್‌ನ ಮುಂದಿನ ಸುಪ್ರೀಂ ಲೀಡರ್ ಆಗಿ ಮಾಡುವ ಆಫರ್ ನೀಡಿದ್ದಾರೆ ಎಂದು ಅವರು ಹೇಳಿದರು. ಆದರೆ ತಾವು ಅದನ್ನು “ನಾನು ಇಲ್ಲ, ಧನ್ಯವಾದಗಳು” ಎಂದು ತಿರಸ್ಕರಿಸಿದ್ದೇನೆ ಎಂದು ಟ್ರಂಪ್ ತಿಳಿಸಿದರು.

ಇರಾನ್ ನಲ್ಲಿ ಆ ಹುದ್ದೆಯನ್ನು ಬಯಸುವವರು ಯಾರೂ ಇಲ್ಲದಂತಾಗಿದೆ. ಅದಕ್ಕಾಗಿಯೇ ಮುಂದಿನ ಸುಪ್ರೀಂ ಲೀಡರ್ ಆಗಿ ಎಂದು ನನಗೆ ಹೇಳಿದರು. ನಾನು ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಹೇಳಿದರು.

ಇರಾನ್ ಈಗ ಮೊಣಕಾಲ ಮೇಲೆ ನಿಂತಿದೆ. ಅಮೆರಿಕ ಜೊತೆ ಒಪ್ಪಂದಕ್ಕಾಗಿ ಬಹಳ ಆತುರದಿಂದಿದೆ. ಆದರೆ ತನ್ನ ಜನರಿಂದ ಅಥವಾ ಅಮೆರಿಕದಿಂದ ಕೊಲ್ಲಲ್ಪಡುವ ಭಯದಿಂದಾಗಿ ಅದನ್ನು ಬಹಿರಂಗವಾಗಿ ಹೇಳಲು ಹೆದರುತ್ತಿದೆ ಎಂದು ಅವರು ವಿವರಿಸಿದರು. ಇದೇ ಸಂದರ್ಭದಲ್ಲಿ ಇರಾನ್ ತಮಗೆ “ಬಹಳ ದೊಡ್ಡ ಉಡುಗೊರೆ” ನೀಡಿದೆ ಎಂದು ಹೇಳಿಕೊಂಡರು. ಈ ಉಡುಗೊರೆ ಏನು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.

ಟ್ರಂಪ್ ಅವರ ಈ ಹುಚ್ಚು ಹುಚ್ಚಾದ ಹೇಳಿಕೆಗಳು ರಿಪಬ್ಲಿಕನ್ ಬೆಂಬಲಿಗರಲ್ಲಿ ನಗೆಪಾಟಲಿಗೆ ಈಡಾಗಿದೆ. ವಿರೋಧಿಗಳು ಇದನ್ನು “ಬಿಜಾರ್” (ವಿಚಿತ್ರ) ಎಂದು ವಿಮರ್ಶಿಸಿದ್ದಾರೆ. ಇದು ಟ್ರಂಪ್ ಅವರ ಸಾಮಾನ್ಯ ಹಾಸ್ಯಮಯ ಮತ್ತು ಅತಿಶಯೋಕ್ತಿ ಶೈಲಿಯ ಭಾಗವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಇರಾನ್ ಅಧಿಕೃತವಾಗಿ ಯಾವುದೇ ಅಂತಹ ಆಫರ್ ನೀಡಿಲ್ಲ ಎಂದು ತಿಳಿದುಬಂದಿದೆ.

More articles

Latest article

Most read