ಪ್ರಶಾಂತ್‌ ಸಂಬರಗಿಗೆ ಜಾಮೀನು ರಹಿತ ಬಂಧನ ವಾರೆಂಟ್ : ಕಾರಣ ಗೊತ್ತಾ?

ಬೆಂಗಳೂರು :  ಪ್ರಶಾಂತ್‌ ಸಂಬರಗಿ ಎಂಬ ವ್ಯಕ್ತಿ ವಿರುದ್ಧ ನಟಿ ಸಂಜನಾ ಗಲ್ರಾನಿ ಹೂಡಿರುವ ಮಾನನಷ್ಟ ಮೊಕದ್ದಮೆ ಸಂಬಂಧ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ನೀಡಿದೆ.

ನಟಿ ಸಂಜನಾ ವಿರುದ್ಧ ಡ್ರಗ್ಸ್‌ ಆರೋಪ ಹೊರೆಸಿದ್ದರು ಮೂರು ತಿಂಗಳು ಕಾಲ ಜೈಲಿನಲಿದ್ದು, ಕ್ಲೀನ್‌ ಚಿಟ್‌ ಪಡೆದು ಸಂಜನಾ ಹೊರಬಂದಿದ್ದರು. ಬಳಿಕ  ಪ್ರಶಾಂತ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸಂಜನಾ ಪರ ವಕೀಲರಾದ ಸೂರ್ಯ ಮುಕುಂದರಾಜ್‌ ಮಾತನಾಡಿ, ಹಲವು ಬಾರಿ ಪ್ರಕರಣದ ವಿಚಾರಣೆ ನಡೆದರೂ ಒಂದು ಬಾರಿಯೂ ಪ್ರಶಾಂತ್‌ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ, ಮುಂದಿನ ವಿಚಾರಣೆ ಜೂನ್‌ 16 ರಂದು ನಡೆಯಲಿದ್ದು, ಅಷ್ಟರೊಳಗೆ ಪ್ರಶಾಂತ್‌ ಸಂಬರಗಿಯನ್ನು ಬಂಧಿಸಿ ಕರೆತರುವಂತೆ ಕೋರ್ಟ್‌ ಆದೇಶಿಸಿದೆ ಎಂದು ತಿಳಿಸಿದ್ದಾರೆ. 

More articles

Latest article

Most read