ಪಶ್ಚಿಮ ಏಷ್ಯಾ ಯುದ್ಧ: ತತ್ತರಿಸಿದ ಇರಾನ್‌ ಜನತೆ, ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತ

ಟೆಹ್ರಾನ್, ಮಾರ್ಚ್ 25: ಅಮೆರಿಕ ಮತ್ತು ಇಸ್ರೇಲ್‌ನ ದಾಳಿಗಳಿಂದಾಗಿ ಆರಂಭಗೊಂಡ ಪಶ್ಚಿಮ ಏಷ್ಯಾ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು,, ಇರಾನ್‌ ಜನರು ಬೆಲೆಏರಿಕೆಯಿಂದ ತತ್ತರಿಸುವಂತಾಗಿದೆ. ದೇಶದ 9 ಕೋಟಿ ಜನಸಂಖ್ಯೆಯ ಸಾಮಾನ್ಯ ನಾಗರಿಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದಾರೆ.

ಫೆಬ್ರವರಿ 28ರಂದು ಆರಂಭವಾದ ಯುದ್ಧ ಇರಾನ್‌ನ ವಿವಿಧ ನಗರಗಳು, ಸೇನಾ ನೆಲೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡ ಇಸ್ರೇಲ್‌ ಮತ್ತು ಅಮೆರಿಕ ಪಡೆಗಳು ನಿರಂತರ ದಾಳಿ ನಡೆಸುತ್ತಿವೆ. ಇದರ ಪರಿಣಾಮವಾಗಿ ದೇಶದ ಆರ್ಥಿಕತೆ ಹದಗೆಟ್ಟು, ಹಣದುಬ್ಬರ ಗಗನ ಸ್ಪರ್ಶಿಸುತ್ತಿದೆ.

ಯುದ್ಧದ ಆರಂಭವಾದ ದಿನದಿಂದಲೇ ಇರಾನ್‌ನ ಆರ್ಥಿಕತೆಯು ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಯುದ್ಧಕ್ಕೂ ಮುಂಚೆಯೇ 2018ರಿಂದ ಅಮೆರಿಕ ಪ್ರೇರಿತ ಅಂತಾರಾಷ್ಟ್ರೀಯ ನಿರ್ಬಂಧಗಳಿಂದಾಗಿ ದೇಶದ ಆರ್ಥಿಕತೆ ದುರ್ಬಲಗೊಂಡಿತ್ತು. ವಾರ್ಷಿಕ ಹಣದುಬ್ಬರ ಸುಮಾರು 70%ಕ್ಕೆ ತಲುಪಿತ್ತು, ಆಹಾರ ವಸ್ತುಗಳ ಹಣದುಬ್ಬರ 100%ಕ್ಕಿಂತ ಹೆಚ್ಚಾಗಿತ್ತು. ಷೇರು ಮಾರುಕಟ್ಟೆ ಕುಸಿದು ಹೋಗಿತ್ತು. ಗಾಯದ ಮೇಲೆ ಬರೆ ಎಂಬಂತೆ ಈಗ ಯುದ್ಧದಿಂದಾಗಿ ಇದು ಮತ್ತಷ್ಟು ಹದಗೆಟ್ಟಿದೆ

ಟೆಹ್ರಾನ್ ಗ್ರ್ಯಾಂಡ್ ಬಜಾರ್‌ನ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೋರ್ವರು ಅಲ್‌ ಜಜೀರಾ ಸುದ್ದಿಮಾಧ್ಯಮದ ಪ್ರತಿನಿಧಿಯೊಂದಿಗೆ ಮಾತನಾಡುತ್ತ, “ನೌರೋಜ್ ಹಬ್ಬ ಪೂರ್ವದ ಮಾರಾಟ ಗಣನೀಯವಾಗಿ ಕುಸಿದಿದ್ದು, ಸಾಮಾನ್ಯ ಮಾರಾಟದ ಮೂರನೇ ಒಂದು ಭಾಗಕ್ಕೆ ಇಳಿದಿದೆ. ಈ ಸಮಯದಲ್ಲಿ ವರ್ಷದ ಅತಿ ಹೆಚ್ಚು ವ್ಯವಹಾರವಾಗುವುದು ಸಾಮಾನ್ಯ, ಆದರೆ ಈಗ ಯಾರಿಗೂ ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ಕಳೆದ ಕೆಲವು ವರ್ಷಗಳಿಂದಲೂ ಪರಿಸ್ಥಿತಿ ಕೇವಲ ಹದಗೆಟ್ಟಿದೆ ಎಂದು ಹೇಳಿದ್ದಾಗಿ ಅಲ್‌ ಜಜೀರಾ ವರದಿ ಮಾಡಿದೆ.

ಪಶ್ಚಿಮ ಟೆಹ್ರಾನ್‌ ನ ಒಂದು ಸಣ್ಣ ಮಳಿಗೆಯ ಮಾಲೀಕರ ಪ್ರಕಾರ “ಗ್ರಾಹಕರು ವಸ್ತುಗಳ ಬೆಲೆಯನ್ನು ಎರಡು ಬಾರಿ ಪರಿಶೀಲಿಸುತ್ತಾ, ಲೆಕ್ಕ ಹಾಕುತ್ತಾ ಖರೀದಿ ಮಾಡುವುದು ಸಾಮಾನ್ಯ ದೃಶ್ಯವಾಗಿದೆ.”

ಇರಾನ್‌ ದೇಶಾದ್ಯಂತ ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಂಡು ಈಗ 25ನೇ ದಿನಕ್ಕೆ ಕಾಲಿಟ್ಟಿದೆ. ಇದು ದೇಶದ 9 ಕೋಟಿ ಜನರನ್ನು ಹೊರಪ್ರಪಂಚದ ಸಂಪರ್ಕದಿಂದ ಕಡಿತಗೊಳಿಸಿದಂತಾಗಿದೆ. ಜನವರಿ ಮಾಸದಲ್ಲಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ 20 ದಿನಗಳ ಇಂಟರ್ನೆಟ್ ಶಟ್‌ಡೌನ್ ಆಗಿತ್ತು. ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ ಮೂಲಕ ಆಭರಣ ಮತ್ತು ಆಕ್ಸೆಸರೀಸ್ ಮಾರಾಟ ಮಾಡುತ್ತಿದ್ದ ಒಬ್ಬ ಯುವತಿ ಹೇಳುವ ಪ್ರಕಾರ “ಈ ಬಾರಿ ಇಂಟರ್ನೆಟ್ ಮತ್ತೆ ಯಾವಾಗ ಮರುಸಂಪರ್ಕಗೊಳ್ಳುತ್ತದೋ ಎಂಬ ಮಾತೇ ಇಲ್ಲ. ಇದು ಅವಮಾನಕರವಷ್ಟೇ ಅಲ್ಲ, ವ್ಯವಹಾರಗಳು ಮುಚ್ಚುವಂತೆ ಮತ್ತು ಹಣದುಬ್ಬರ ಹೆಚ್ಚುವಂತೆ ಮಾಡುತ್ತಿದೆ.ʼʼ ಎಂದು ಹೇಳುತ್ತಾರೆ. ಈಕೆಯ ಹಾಗೆ ಬಹುತೇಕರು ಸ್ಥಿರ ಆದಾಯವನ್ನು ಕಳೆದುಕೊಂಡಿದ್ದಾರೆ.

ಯುದ್ಧ ಆರಂಭವಾದ ತಕ್ಷಣ ಅನೇಕ ಕುಟುಂಬಗಳು ಟೆಹ್ರಾನ್ ಮತ್ತು ಇತರ ದೊಡ್ಡ ನಗರಗಳಿಂದ ಗುಳೆ ಹೋಗುವ ಮೂಲಕ ತಮ್ಮ ಸೀಮಿತ ಉಳಿತಾಯವನ್ನು ಬಳಸುತ್ತಿದ್ದಾರೆ. ಜನರ ಖರೀದಿ ಸಾಮರ್ಥ್ಯ ತೀವ್ರವಾಗಿ ಕುಸಿದಿದೆ. ಉತ್ತಮ ವೇತನದ ಉದ್ಯೋಗಗಳು ಅಪರೂಪವಾಗಿವೆ. ಸರ್ಕಾರ ಕನಿಷ್ಠ ವೇತನವನ್ನು 60% ಹೆಚ್ಚಿಸುವ ಯೋಜನೆ ರೂಪಿಸಿದ್ದು, ಸಣ್ಣ ಮೊತ್ತದ ನಗದು ಸಹಾಯ ನೀಡುವುದಾಗಿ ಘೋಷಿಸಿದೆ. ಆದರೆ ತೆರಿಗೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ವೆಚ್ಚ ಕಡಿತಗೊಳಿಸುವ ನಿರ್ಧಾರವೂ ತೆಗೆದುಕೊಳ್ಳಲಾಗಿದೆ. ಇದರ ಹೊರತಾಗಿ, ಆಹಾರ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ಗಗನ ಮುಟ್ಟುತ್ತಿವೆ.

ಇರಾನ್‌ ಸರ್ಕಾರವು ಪ್ರಭುತ್ವ ವಿರೋಧಿ ಪ್ರತಿಭಟನೆಗಳನ್ನು ಕ್ರೂರವಾಗಿ ಹತ್ತಿಕ್ಕುತ್ತಿದೆ. ಯುದ್ಧದ ಪರಿಣಾಮಗಳನ್ನು ಚಿತ್ರೀಕರಿಸಿ ವಿರೋಧಿ ಮಾಧ್ಯಮಗಳಿಗೆ ಕಳುಹಿಸುವವರನ್ನು ಬಂಧಿಸಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟ ಬೊರ್ಝು ಅರ್ಜ್‌ಮಂಡ್ ಅವರ ಆಸ್ತಿಯನ್ನು ವಶಪಡಿಸಿಕೊಂಡಿದೆ. ಇರಾನ್‌ ಸರ್ಕಾರದ ವಿರುದ್ಧ ಪ್ರತಿಭಟಿಸುವವರ ಮೇಲೆ ಗುಂಡು ಹಾರಿಸಿ ಕೊಲ್ಲುವುದಾಗಿ ಎಚ್ಚರಿಕೆ ನೀಡಲಾಗಿದೆ.

ಯುದ್ಧದಿಂದಾಗಿ ಇರಾನ್‌ನಲ್ಲಿ 80,000ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ದಕ್ಷಿಣ ಟೆಹ್ರಾನ್‌ನಲ್ಲಿ ಇತ್ತೀಚಿನ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ, 28 ಜನರು ಗಾಯಗೊಂಡಿದ್ದಾರೆ. ಇರಾನ್ ಪ್ರತಿಕ್ರಿಯೆಯಾಗಿ ಇಸ್ರೇಲ್ ಮತ್ತು ಗಲ್ಫ್ ಪ್ರದೇಶಗಳಲ್ಲಿ ಮಿಸೈಲ್ ದಾಳಿ ನಡೆಸುತ್ತಿದೆ. ಇದರಿಂದಾಗಿ ವಿಶ್ವದ ತೈಲ ಬೆಲೆಗಳು 40-50% ಹೆಚ್ಚಾಗಿವೆ, ಸ್ಟ್ರೈಟ್ ಆಫ್ ಹಾರ್ಮುಜ್ ಮುಚ್ಚಲ್ಪಟ್ಟಿದೆ.

ಇರಾನ್ ಜನರು ದೈನಂದಿನ ಬದುಕಿಗಾಗಿ ಹೋರಾಡುತ್ತಿದ್ದಾರೆ. ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ, ಆನ್‌ಲೈನ್ ವ್ಯವಹಾರಗಳು ಸ್ಥಗಿತಗೊಂಡಿವೆ, ಉಳಿತಾಯ ಕುಸಿದಿದೆ. ಸರ್ಕಾರದ ಭ್ರಷ್ಟಾಚಾರ, ಅವ್ಯವಸ್ಥೆ ಮತ್ತು ನಿರ್ಬಂಧಗಳು ಈ ಸಂಕಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸಿವೆ. ಯುದ್ಧ ಯಾವಾಗ ಮುಗಿಯುತ್ತದೆ, ಆರ್ಥಿಕ ಸ್ಥಿರತೆ ಎಂದು ಮರಳುತ್ತದೆ ಎಂಬ ಭರವಸೆ ಇಲ್ಲದೆ, ಜನರು ತಮ್ಮ ಜೀವನವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪರಿಸ್ಥಿತಿ ಮುಂದುವರಿದರೆ ಇರಾನ್‌ನ ಆರ್ಥಿಕತೆಯು ಇನ್ನಷ್ಟು ಗಂಭೀರವಾದ ಕುಸಿತಕ್ಕೆ ಒಳಗಾಗುವ ಸಾಧ್ಯತೆ ಇದೆ.

More articles

Latest article

Most read