16 ಸಾವಿರ ಕೋಟಿ ರೂ. ಗೆ ಬಿರ್ಲಾ ಗ್ರೂಪ್‌ ಪಾಲಾದ ಆರ್‌ಸಿಬಿ

ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ,  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡವನ್ನು ಸ್ವಾಧೀನ ಮಾಡಿಕೊಂಡಿದೆ. . ಭಾರತೀಯ ಬಿಲಿಯನೇರ್  ಮಂಗಲಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್ ಹಾಗೂ ಅದರ ಒಕ್ಕೂಟವು ಹಾಲಿ ಐಪಿಎಲ್ ಚಾಂಪಿಯನ್‌ ತಂಡ ಖರೀದಿಗೆ 1.78 ಬಿಲಿಯನ್ ಡಾಲರ್‌ಗ ಅಂದರೆ,  16,000 ಕೋಟಿ ರೂ.ಗಿಂತ ಹೆಚ್ಚು ಪಾವತಿಸಲಿದೆ.

ಆರ್‌ಸಿಬಿಯ 100ರಷ್ಟು  ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಯುಕೆ-ಡಿಯಾಜಿಯೊ ಪಿಎಲ್‌ಸಿಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಜೊತೆ ಒಕ್ಕೂಟವು ಒಪ್ಪಂದ ಮಾಡಿಕೊಂಡಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ ಫ್ರಾಂಚೈಸಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಎರಡು ದಶಕಗಳಲ್ಲಿ, ಐಪಿಎಲ್ ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಇದು ಭಾರತಕ್ಕೆ ಅಗಾಧ ಮೌಲ್ಯವನ್ನು ಸೃಷ್ಟಿಸುವ ಮೂಲಕ ಭಾರತೀಯ ಕ್ರಿಕೆಟ್‌ನ ಮುಖವನ್ನೇ ಬದಲಾಯಿಸಿದೆ. ಆಧುನಿಕ ಕ್ರೀಡೆಯಲ್ಲಿ ಅತ್ಯಂತ ಪ್ರಭಾವಶಾಲಿ ಫ್ರಾಂಚೈಸಿಗಳಲ್ಲಿ ಒಂದಾದ ಆರ್‌ಸಿಬಿ, ಆದಿತ್ಯ ಬಿರ್ಲಾ ಗ್ರೂಪ್‌ಗೆ ತನ್ನ ಸಂಸ್ಥೆ-ನಿರ್ಮಾಣದ ಪರಂಪರೆಯನ್ನು ಜಾಗತಿಕ ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಲು ಒಂದು ವಿಶಿಷ್ಟ ವೇದಿಕೆಯನ್ನು ನೀಡುತ್ತದೆ. ಈ ಆಸ್ತಿಯ ಪಾಲಕರಾಗಲು ನಾವು ಸಂತೋಷಪಡುತ್ತೇವೆ ಎಂದು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ   ತಿಳಿಸಿದ್ದಾರೆ.

More articles

Latest article

Most read