Friday, March 13, 2026

ಅಸ್ಸಾಂನ 8 ಶಾಸಕರು ವಂಡರ್‌ ಲಾ ರೆಸ್ಟಾರ್ಟ್‌ಗೆ ಆಗಮನ

ಬೆಂಗಳೂರು : ‘ಆಪರೇಷನ್ ಕಮಲ’ ಆತಂಕದ ಹಿನ್ನೆಲೆ ಈಶಾನ್ಯ ರಾಜ್ಯ ಅಸ್ಸಾಂನ 8 ಮಂದಿ ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿಯ ವಂಡರ್ ಲಾ ರೆಸಾರ್ಟ್​ಗೆ ಶಿಫ್ಟ್ ಮಾಡಲಾಗಿದೆ.

ಇಂದು ಮಧ್ಯಾಹ್ನದ ಬಳಿಕ ಮತ್ತಷ್ಟು ಶಾಸಕರು ಆಗಮಿಸುವ ಸಾಧ್ಯತೆ ಇದೆ. ಶಾಸಕರನ್ನು ಕರೆತರಲು ಈಗಾಗಲೇ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣಕ್ಕೆ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.

ಒಡಿಶಾ ಕಾಂಗ್ರೆಸ್ ಅಧ್ಯಕ್ಷರೂ ಸೇರಿದಂತೆ ಎಂಟು ಮಂದಿ ಕಾಂಗ್ರೆಸ್ ಶಾಸಕರು ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ರೆಸಾರ್ಟ್​ಗೆ ಆಗಮಿಸಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್​ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರೆಸಾರ್ಟ್‌ಗೆ ಆಗಮಿಸಿರುವ ಶಾಸಕರ ವಿವರ: ಪ್ರಫುಲ್ ಚಂದ್ರ ಪ್ರಧಾನ್, ಸತ್ಯಜೀತ್ ಗೋಮಗ,   ಡಾ. ಸಿ.ಎಸ್.ರಝೆನ್ ಪಕ್ಕ, ಪವಿತ್ರಾ ಸಾವಂತ್, ಅಶೋಕ್ ಕುಮಾರ್ ದಾಸ್,  ನೀಲಮಾದ ಐಕಾಕ,   ಅಪ್ಪಲ ಸ್ವಾಮಿ (ಶಾಸಕ), ಮಂಗು ಖಿಲ್ಲ, 

ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳು:  ಭಕ್ತ ಚದ್ರಾ ದಾಸ್,  ದುರ್ಗಾ ಪ್ರಸಾದ್,  ಪ್ರದೀಪ್ ಮೊಹಪಾಪೆ

More articles

Latest article

Most read