ಅಹಮದಾಬಾದ್ : ಸಂಜು ಸ್ಯಾಮ್ಸನ್ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು. ಈ ಫೈನಲ್ನಲ್ಲಿ ಅರ್ಧಶತಕ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದ್ದು ಮಾತ್ರವಲ್ಲದೆ, ಹ್ಯಾಟ್ರಿಕ್ ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.
ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 89 ರನ್ಗಳ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಸತತ ಮೂರನೇ ಪಂದ್ಯದಲ್ಲೂ ಸಂಜು ಶತಕ ವಂಚಿತರಾದರು. ಆದಾಗ್ಯೂ ಈ ಇನ್ನಿಂಗ್ಸ್ ಮೂಲಕ ಸಂಜು ಒಂದು ಆವೃತ್ತಿಯ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿದರು.
ಸಂಜು ಈ ವಿಶ್ವಕಪ್ನಲ್ಲಿ ಆಡಿದ ಐದು ಪಂದ್ಯಗಳಲ್ಲಿ 321 ರನ್ ಬಾರಿಸಿದ್ದಾರೆ. ಇದು ಟಿ20 ವಿಶ್ವಕಪ್ನಲ್ಲಿ ಯಾವುದೇ ಭಾರತೀಯ ಆಟಗಾರ ಗಳಿಸಿದ ಅತ್ಯಧಿಕ ರನ್ ಆಗಿದೆ. ಇದಕ್ಕೂ ಮೊದಲು, ವಿರಾಟ್ 2014 ರ ಟಿ20 ವಿಶ್ವಕಪ್ನಲ್ಲಿ 319 ರನ್ ಸಿಡಿಸಿದ್ದರು. ಇದೀಗ 12 ವರ್ಷಗಳ ನಂತರ ಈ ದಾಖಲೆ ಸಂಜು ಪಾಲಾಗಿದೆ. ಸಂಜು ಸ್ಯಾಮ್ಸನ್ ಐದು ಪಂದ್ಯಗಳಲ್ಲಿ 80.2 ಸರಾಸರಿಯಲ್ಲಿ 321 ರನ್ ಗಳಿಸಿದ್ದಾರೆ. ಇದರಲ್ಲಿ 24 ಸಿಕ್ಸರ್ಗಳು ಮತ್ತು 27 ಬೌಂಡರಿಗಳು ಸೇರಿವೆ.
ವಿರಾಟ್ ಕೊಹ್ಲಿ ದಾಖಲೆ ಮುರಿದ ಸಂಜು ಸ್ಯಾಮ್ಸನ್
ಆಡಿದ ಐದು ಪಂದ್ಯಗಳಿಂದ 321 ರನ್