ದುಬೈ: ಶನಿವಾರ ದುಬೈ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ದಾಳಿ ನಡೆದಿದೆ. ಇದೊಂದು ಸಣ್ಣ ಘಟನೆಯಾಗಿದೆ. ಇದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಸರ್ಕಾರ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಸಂಚಾರದ ವಿಶ್ವದ ಅತ್ಯಂತ ಜನನಿಬಿಡ ದುಬೈ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಪ್ರಯಾಣಿಕರು, ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ವಿಮಾನಯಾನ ಸಿಬ್ಬಂದಿಯ ಸುರಕ್ಷತೆಗಾಗಿ, ದುಬೈ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲ ಕಾರ್ಯವಿಧಾನಗಳನ್ನು ಸ್ಥಾಪಿತ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತಿದೆ ಎಂದು ದುಬೈ ಮಾಧ್ಯಮ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇದಕ್ಕೂ ಮೊದಲು, ವಿಮಾನ ನಿಲ್ದಾಣದ ಬಳಿ ವಸ್ತುವೊಂದು ಪತ್ತೆಯಾದ ಹಿನ್ನೆಲೆಯಲ್ಲಿ, ವೈಮಾನಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನಂತರ ಸ್ಫೋಟಗೊಂಡು ದಟ್ಟ ಹೊಗೆ ಆವರಿಸಿತು ಎಂದು ಎಏಫ್‌ಪಿ ವರದಿ ಮಾಡಿದೆ.
ಘಟನೆಗೂ ಮುನ್ನ, ನಾವು ಇಂದು, ಮಾರ್ಚ್ 7ರಿಂದ ಕಾರ್ಯಾಚರಣೆಯನ್ನು ಭಾಗಶಃ ಪುನರಾರಂಭಿಸಿದ್ದೇವೆ. ಕೆಲವು ವಿಮಾನಗಳು ಡಿಎಕ್ಸ್‌ಬಿ ಮತ್ತು ಡಿಡಬ್ಲ್ಯೂಸಿ ಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅದು ದುಬೈನ ಮುಖ್ಯ ವಿಮಾನ ನಿಲ್ದಾಣ ಮತ್ತು ನಗರದ ದುಬೈ ವರ್ಲ್ಡ್ ಸೆಂಟ್ರಲ್ – ಅಲ್ ಮಕ್ತೌಮ್ ಇಂಟರ್ನ್ಯಾಷನಲ್ ಅನ್ನು ಉಲ್ಲೇಖಿಸಿ ಮಾಹಿತಿ ನೀಡಿತ್ತು.
ವೇಳಾಪಟ್ಟಿಗಳು ಬದಲಾಗುತ್ತಲೇ ಇರುವುದರಿಂದ ವಿಮಾನಯಾನ ಸಂಸ್ಥೆಯು ನಿಮ್ಮ ವಿಮಾನವನ್ನು ದೃಢೀಕರಿಸಿ, ನಿಮ್ಮನ್ನು ಸಂಪರ್ಕಿಸದ ಹೊರತು ದಯವಿಟ್ಟು ವಿಮಾನ ನಿಲ್ದಾಣಕ್ಕೆ ಬರಬೇಡಿ ಎಂದು ಪ್ರಯಾಣಿಕರಿಗೆ ತಿಳಿಸಲಾಗಿತ್ತು.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಾಯು ರಕ್ಷಣಾ ಪಡೆಗಳು ಪ್ರಸ್ತುತ ಇರಾನ್‌ನಿಂದ ಬರುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ಬೆದರಿಕೆಗಳಿಗೆ ಪ್ರತಿಕ್ರಿಯಿಸುತ್ತಿವೆ ಎಂದು ಎಮಿರಾಟಿ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

