ಶಿವಮೊಗ್ಗ: ಗೆಳೆಯರ ಜಗಳ ಬಿಡಿಸಲು ಹೋದ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹತ್ಯೆಯಾದ ಘಟನೆ ಶಿವಮೊಗ್ಗದ ಸೊಳೆಬೈಲು ಸರ್ಕಾರಿ ಶಾಲೆಯ ಆವರಣದ ಹೊರಗಡೆ ಕಳೆದ ರಾತ್ರಿ ನಡೆದಿದೆ.
ಸಂಕೇತ್ ಸೊಳೆಬೈಲು ಬಡಾವಣೆಯ ನಿವಾಸಿ ಕುಮಾರ್ ಎಂಬುವರ ಮಗ ಸಂಕೇತ್ (15) ಮೃತ ವಿದ್ಯಾರ್ಥಿ. ಕಳೆದ ರಾತ್ರಿ ವಿಶೇಷ ತರಗತಿ ಮುಗಿಸಿಕೊಂಡು ಸಂಕೇತ್ ಮನೆಗೆ ವಾಪಸ್ ಬರುತ್ತಿದ್ದ. ಈ ವೇಳೆ ತನ್ನ ಜೊತೆಗೆ ಓದುತ್ತಿದ್ದ ಕೆಲ ಸ್ನೇಹಿತರು ಶಾಲೆಯಿಂದ ಹೊರಗಡೆ ಗಲಾಟೆ ಮಾಡುಕೊಳ್ಳುತ್ತಿದ್ದರು. ಆಗ ಸಂಕೇತ್ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದರು. ಜಗಳದಲ್ಲಿ ಈತನ ಎದೆಗೆ ಏಟು ಬಿದ್ದ ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಸಂಕೇತ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ತುಂಗಾ ನಗರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು, ನಾಲ್ವರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ನಿಖಿಲ್, ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲು ಬಡಾವಣೆಯ ಸರ್ಕಾರಿ ಶಾಲೆ ಆವರಣದ ಹೊರಗಡೆ ಅಪ್ರಾಪ್ತ ಬಾಲಕನ ಕೊಲೆಯಾಗಿದೆ. ಈ ಹಿಂದೆ ಒಂದೇ ಶಾಲೆಯಲ್ಲಿ ಓದುತ್ತಿದ್ದ ಈತನ ಸ್ನೇಹಿತರು ಹೊರಗಡೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಆಗ ಮಧ್ಯಪ್ರವೇಶಿದ ಬಾಲಕನ ಎದೆ ಏಟು ಬಿದ್ದಿದ್ದರಿಂದ ಕುಸಿದು ಬಿದ್ದಿದ್ದ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದವರೆಲ್ಲ ಅಪ್ರಾಪ್ತರಾಗಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದರು.
ಪ್ರಕರಣದಲ್ಲಿ ಭಾಗಿಯಾದವರೆಲ್ಲ ಒಂದೇ ಗ್ರಾಮದವರಾಗಿದ್ದು, ಎಲ್ಲರೂ ಒಟ್ಟಿಗೆ ಬೆಳೆದ ಸ್ನೇಹಿತರಾಗಿದ್ದಾರೆ. ಜೊತೆಗೆ ಕೆಲವರು ಭಾಗಿಯಾದವರು ಶಾಲೆಯಿಂದ ಹೊರ ಬಂದು ಬೇರೆ ಶಾಲೆ ಸೇರಿಕೊಂಡಿದ್ದರು, ಇನ್ನೂ ಕೆಲವರು ಶಾಲೆ ಬಿಟ್ಟಿದ್ದರು. ಶಾಲೆಯಲ್ಲಿ ಸ್ಪೇಷಲ್ ಕ್ಲಾಸ್ಗೆ ಹಾಜರಾಗಿ ವಾಪಸ್ ಸಂಕೇತ್ ಬರುವಾಗ ಘಟನೆ ನಡೆದಿದೆ. ಘಟನೆಯಲ್ಲಿದ್ದ ಇನ್ನೋರ್ವ ಅಪ್ರಾಪ್ತನಿಂದ ಎಲ್ಲರ ಹೆಸರನ್ನು ಪಡೆದುಕೊಳ್ಳಲಾಗುತ್ತಿದೆ. ಮಾತಿಗೆ ಮಾತು ಬೆಳೆದು ಘಟನೆ ನಡೆದಿದೆ. ಸದ್ಯ ಶಾಂತಿಯುತವಾಗಿದೆ. ನಮ್ಮ ಸಿಬ್ಬಂದಿ ಎಲ್ಲಾ ಕಡೆ ಇದ್ದಾರೆ. ಮೃತ ಬಾಲಕನ ಕುಟುಂಬದ ಜೊತೆ ಮಾತನಾಡಿದ್ದೇವೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

