ತಮಿಳು ನಟ, ರಾಜಕಾರಣಿ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಮೇಲೆ ಆದಾಯ ತೆರಿಗೆ ಇಲಾಖೆ 1.5 ಕೋಟಿ ರೂ. ತೆರಿಗೆ ದಂಡವನ್ನು ವಿಧಿಸಿದ್ದ ಕ್ರಮವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.
2015–16ರಲ್ಲಿ, “ಆದಾಯ ಬಹಿರಂಗಪಡಿಸದ” ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ 1.50 ಕೋಟಿ ರೂಪಾಯಿ ದಂಡ ವಿಧಿಸಿದ್ದ ಆದೇಶವನ್ನು ಪ್ರಶ್ನಿಸಿ ವಿಜಯ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
“ಆದಾಯ ತೆರಿಗೆ ಇಲಾಖೆಯ ನೋಟಿಸ್ ಅನ್ನು ನಿಗದಿತ ಸಮಯದ ಮಿತಿಯೊಳಗೆ ನೀಡಲಾಗಿದೆ” ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ದಂಡವು ಮುಂದುವರಿಯಲು ಅವಕಾಶ ನೀಡಿದೆ.
ಸೆಪ್ಟೆಂಬರ್ 2015 ರಲ್ಲಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು ಈ ಸಂದರ್ಭದಲ್ಲಿ ತೆರಿಗೆ ಬಹಿರಂಗಪಡಿಸದ 15 ಕೋಟಿ ರೂಪಾಯಿ ಆದಾಯ ಪತ್ತೆಯಾದ ಹಿನ್ನೆಲೆಯಲ್ಲಿ ಇಲಾಖೆ ದಂಡ ವಿಧಿಸಿತ್ತು.


