ಸಿ.ಜೆ ರಾಯ್ ಆತ್ಮಹತ್ಯೆ ಪೂರ್ವ ನಿರ್ಧಾರಿತವೇ? ಕುಟುಂಬಕ್ಕೆ ಸಿಕ್ಕಿತು 9 ಪುಟಗಳ “ಡೆತ್ ನೋಟ್”

ಬೆಂಗಳೂರು : ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ. ಜೆ. ರಾಯ್ ನಾಲ್ಕು ದಿನಗಳ ಮುಂಚೆಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದ್ದು, ಕುಟುಂಬ ಸದಸ್ಯರಿಗೆ ಸಿಕ್ಕಿದ ಒಂಬತ್ತು ಪುಟಗಳ “ಡೆತ್ ನೋಟ್” ನಲ್ಲಿ ಈ ಸ್ಪೋಟಕ ಮಾಹಿತಿ ಬಯಲಾಗಿದೆ.

ಏನಿದೆ ಡೆತ್ ನೋಟ್ ನಲ್ಲಿ?

ಒಂಬತ್ತು ಪುಟಗಳ ಡೆತ್ ನೋಟ್ ನಲ್ಲಿ ಸಿ.ಜೆ ರಾಯ್ ತಮ್ಮ ಕುಟುಂಬಸ್ಥರಿಗೆ, ಹೂಡಿಕೆದಾರರಿಗೆ ಹಾಗು ತಮ್ಮ ಸಿಬ್ಬಂದಿಗೆ ತಾವು ತೆಗೆದುಕೊಂಡ ದುಡುಕಿನ ನಿರ್ಧಾರದ ಕುರಿತು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.

ವಿದೇಶಿ ಹೂಡಿಕೆಗಳಿಂದ ತಾನು ತೀವ್ರ ಹಿನ್ನಡೆ ಎದುರಿಸಬೇಕಾಯಿತು ಎಂಬ ವಿಷಯವನ್ನು ಉಲ್ಲೇಖಿಸಿದ್ದಾರೆ, ತಮ್ಮ ಕುಟುಂಬಸ್ಥರು ಮುಂದೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ವಿದೇಶಿ ಹೂಡಿಕೆಯಿಂದಾದ ನಷ್ಟ, ಆದಾಯ ತೆರಿಗೆ ಇಲಾಖೆಯ ಹಸ್ತಕ್ಷೇಪದಿಂದಾಗಿ ಒತ್ತಡದಲ್ಲಿರುವುದಾಗಿ ತಿಳಿಸಿದ್ದಾರೆ.

ಐಸ್.ಐ.ಟಿ ತನಿಖೆ ಚುರುಕು

ಈ ಮಧ್ಯೆ, ವಿಶೇಷ ತನಿಖಾ ತಂಡ ತನಿಖೆಯನ್ನು ತೀವ್ರಗೊಳಿಸಿದೆ. ನಿನ್ನೆ ಐಟಿ ಅಧಿಕಾರಿಗಳನ್ನು ವಿಚಾರಣೆಗೆ ಕರೆದಿದ್ದ ತನಿಖಾ ತಂಡ, ಐಟಿ ಅಧಿಕಾರಿಗಳನ್ನು ಮತ್ತೆ ವಿಚಾರಣೆಗೆ ಕರೆಯಲಿದೆ. ನಿನ್ನೆ ಪ್ರಾಥಮಿಕ ಮಾಹಿತಿಯನ್ನು ಮಾತ್ರ ಸಂಗ್ರಹಿಸಲಾಗಿದೆ. ತಪಾಸಣೆಗಾಗಿ ಕೊಚ್ಚಿಯಿಂದ ಬಂದ ಅಧಿಕಾರಿಗಳಿಗೆ ಬೆಂಗಳೂರಿನಿಂದ ಹೊರಹೋಗದಂತೆ ಲಿಖಿತವಾಗಿ ಸೂಚಿಸಲಾಗಿದೆ. ಕಾನ್ಫಿಡೆಂಟ್ ಗ್ರೂಪ್‌ನ ಉದ್ಯೋಗಿಗಳ ಹೇಳಿಕೆಗಳನ್ನು ಮರು ದಾಖಲಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರು ರಾಯ್ ಅವರ ಫೋನ್ ಕರೆಗಳ ವಿವರಗಳನ್ನು ಸಹ ಸಂಗ್ರಹಿಸಿದ್ದಾರೆ. ಎಸ್. ಐ.ಟಿ ತನಿಖಾ ತಂಡವು ಹಣಕಾಸಿನ ವಹಿವಾಟಿನ ದಾಖಲೆಗಳನ್ನು ಸಹ ಸಂಗ್ರಹಿಸಿದೆ ಎಂದು ಎಸ್.ಐ.ಟಿ ಮೂಲಗಳು ತಿಳಿಸಿವೆ.

More articles

Latest article

Most read