ಯುಜಿಸಿ ಅಧಿಸೂಚನೆಗೆ ಮೇಲ್ಜಾತಿಗಳ ಆಕ್ರೋಶ | ಮರೆಯಲ್ಲಿ ಮನುವಾದಿಗಳ ಷಡ್ಯಂತ್ರ

ಒಟ್ಟಾರೆಯಾಗಿ ಮೇಲ್ಜಾತಿಯವರು ಜಾತಿ ವ್ಯವಸ್ಥೆಯ ಮೇಲಿನ ತಮ್ಮ ಅಕ್ಟೋಪಸ್ ಹಿಡಿತವನ್ನು ಬಿಟ್ಟು ಕೊಡಲು ಸಿದ್ಧವಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಕೊನೆಯಾಗುವ ಲಕ್ಷಣಗಳಿಲ್ಲ. ಜಾತಿ ತಾರತಮ್ಯ ಕೊನೆಯಾಗುವವರೆಗೂ ಇನ್ನೆಷ್ಟು ರೋಹಿತ್ ವೇಮುಲರಂತಹ ಕೆಳಜಾತಿ ವರ್ಗಗಳ ವಿದ್ಯಾರ್ಥಿಗಳು ಬಲಿಯಾಗಬೇಕೋ? ಮೇಲ್ಜಾತಿಯೇತರ ಸಮುದಾಯಕ್ಕೆ ಉನ್ನತ ಶಿಕ್ಷಣವನ್ನು ನಿರ್ಬಂಧಿಸಲು ಈ ಸಂಘಿ ಸರಕಾರ ಇನ್ನೆಷ್ಟು ಷಡ್ಯಂತ್ರಗಳನ್ನು ರೂಪಿಸುತ್ತದೋ? ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಯುಜಿಸಿ ಅಂದ್ರೆ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಅಂತಾ ಒಂದಿದೆ. ಕೇಂದ್ರ ಸರಕಾರದ ಆಧೀನದಲ್ಲಿರುವ ಯುಜಿಸಿ ಯಾವ ವಿಶ್ವವಿದ್ಯಾಲಯಗಳಿಗೆ ಎಷ್ಟು ಅನುದಾನ ಮಂಜೂರು ಮಾಡಬೇಕು ಎಂಬುದನ್ನು ನಿರ್ಣಯಿಸುತ್ತದೆ ಹಾಗೂ ವಿಶ್ವವಿದ್ಯಾಲಯಗಳನ್ನು ಹೇಗೆಲ್ಲಾ ನಿಯಂತ್ರಣ ಮಾಡಬೇಕು ಎಂಬುದರ ಮೇಲ್ವಿಚಾರಣೆ ನಡೆಸುತ್ತದೆ. ಕಾನೂನು ಉಲ್ಲಂಘಿಸುವ ವಿವಿ ಗಳಿಗೆ ಅನುದಾನವನ್ನು ತಡೆಹಿಡಿಯುತ್ತದೆ,   ಮಾನ್ಯತೆಯನ್ನೂ ರದ್ದುಗೊಳಿಸುತ್ತದೆ.

ಇಂತಹ ಯುಜಿಸಿ ಕೃಪಾಕಟಾಕ್ಷದ ವಿವಿ ಗಳಲ್ಲಿ  ವಿದ್ಯಾರ್ಥಿಗಳ ಮೇಲೆ ಜಾತಿ ಆಧಾರಿತ ತಾರತಮ್ಯಗಳು ಆಗುತ್ತಿವೆ, ಅದನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ರಚಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶಿಸುತ್ತದೆ.

ಈ ಆದೇಶದ ಮೇರೆಗೆ 2012 ರ ಹಳೆಯ ಮಾರ್ಗಸೂಚಿಯನ್ನು ಬದಲಾಯಿಸಿ ಜನವರಿ 13 ರಂದು Promotion of Equity in Higher Education Institutions Regulations 2026 ಎಂಬ ಹೊಸ ನಿಯಮವನ್ನು ಅಧಿಸೂಚನೆಗೊಳಿಸಲಾಗಿದೆ. ಈ ದೇಶದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಗಟ್ಟಲು ಈ ಹೊಸ ಅಧಿಸೂಚನೆಯನ್ನು ತರಲಾಗಿದೆ. ಇದರ ಮುಖ್ಯ ಅಂಶಗಳೇನೆಂದರೆ…

* ವಿವಿ ಗಳಲ್ಲಿ SC, ST, OBC ವರ್ಗದವರ ವಿರುದ್ಧ ನಡೆಯುವ ಪ್ರತ್ಯಕ್ಷ ಅಥವಾ ಪರೋಕ್ಷ ಅವಹೇಳನಕಾರಿ ನಡವಳಿಕೆಯನ್ನು ತಾರತಮ್ಯ ಎಂದು ಪರಿಗಣಿಸಲಾಗುತ್ತದೆ.

* ಪ್ರತಿಯೊಂದು ಕಾಲೇಜುಗಳಲ್ಲೂ ಸಮಾನತಾ ಸಮಿತಿ ಅಥವಾ ಸಮಾನ ಅವಕಾಶ ಕೇಂದ್ರ ರಚನೆಯನ್ನು ಕಡ್ಡಾಯಗೊಳಿಸಲಾಗಿದೆ.

* ಜಾತಿ ತಾರತಮ್ಯದ ದೂರುಗಳಿಗಾಗಿ ಆನ್‌ ಲೈನ್ ಪೋರ್ಟಲ್ ಸ್ಥಾಪಿಸಬೇಕು, ದೂರುಗಳ ಮೇಲೆ ತ್ವರಿತ ಕ್ರಮ ಜರುಗಿಸಬೇಕು ಹಾಗೂ ಪೊಲೀಸರ ಜೊತೆ ಸಂಪರ್ಕ ಸಾಧಿಸಬೇಕು.

* ಈ ನಿಯಮಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಸ್ಥಗಿತ, ಮಾನ್ಯತೆ ರದ್ದುಗೊಳಿಸುವಂತಹ ಕ್ರಮ ಕೈಗೊಳ್ಳಲಾಗುವುದು

ರೋಹಿತ್ ವೇಮುಲಾ ಹಾಗೂ ಪಾಯಲ್ ತಡ್ಡಿ ಸಾವುಗಳ ನಂತರ ಸುಪ್ರೀಂ ಕೋರ್ಟ್ ಸೂಚನೆಯಂತೆ ಈ ನಿಯಮಗಳನ್ನು ರಚಿಸಲಾಗಿದೆ. ಜಾತಿ ತಾರತಮ್ಯ ನಿಯಂತ್ರಿಸಲು ಹಿಂದೆ ಕೂಡ ಕೆಲವು ನಿಯಮಗಳಿದ್ದರೂ ಅವೆಲ್ಲಾ ಸಲಹಾ ರೂಪದಲ್ಲಿದ್ದವು. ಆದರೆ ಈಗ ಕಡ್ಡಾಯವಾಗಿ ಜಾರಿಗೊಳಿಸುವ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಯುಜಿಸಿ ಯ ಈ ಹೊಸ ಅಧಿಸೂಚನೆ ಜಾರಿಯಾಗಿದ್ದೇ ತಡ ಮೇಲ್ವರ್ಗದವರಲ್ಲಿ ತಳಮಳ ಭುಗಿಲೆದ್ದಿದೆ. ಈ ಅಧಿಸೂಚನೆ ವಿರೋಧಿಸಿ ಬಿಜೆಪಿ ಪಕ್ಷದ ಕೇಂದ್ರ ಸರಕಾರದ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಬರೇಲಿಯ ಸಿಟಿ ಮ್ಯಾಜಿಸ್ಟ್ರೇಟ್ ಒಬ್ಬರು ರಾಜೀನಾಮೆಯನ್ನೂ ಕೊಟ್ಟಿದ್ದಾರೆ.

ಮೇಲ್ಜಾತಿಯವರ ಆಕ್ಷೇಪಣೆ ಹಾಗೂ ವಿರೋಧಕ್ಕೆ ಕಾರಣಗಳು ಏನು?

* ಕಾಲೇಜುಗಳಲ್ಲಿ ಜನರಲ್ ಕ್ಯಾಟಗರಿ ಅಂದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಇರುತ್ತಾರೆ. ಎಸ್ಸಿ ಎಸ್ಟಿ ಓಬಿಸಿ ವರ್ಗದವರ ಪರವಾಗಿರುವ ಈ ನಿಯಮಗಳಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ರಕ್ಷಣೆಯ ಪ್ರಸ್ತಾಪವಿಲ್ಲ.

* ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ ಸುಳ್ಳು ದೂರುಗಳು ದಾಖಲಾದರೆ ಸುಳ್ಳು ದೂರು ಕೊಟ್ಟವರ ಮೇಲೆ ಶಿಕ್ಷೆಯ ನಿಬಂಧನೆಗಳಿಲ್ಲ.

* ಕಾಲೇಜು ಕ್ಯಾಂಪಸ್ಸುಗಳಲ್ಲಿ ಜಾತಿ ವಿಭಜನೆ ಆಗುತ್ತದೆ.

ಈ ಕಾರಣಗಳನ್ನು ಇಟ್ಟುಕೊಂಡು ಯುಜಿಸಿ ಹೊಸ ಅಧಿಸೂಚಿತ ನಿಯಮಾವಳಿಗಳನ್ನು ತೀವ್ರವಾಗಿ ವಿರೋಧಿಸಲಾಗುತ್ತಿದೆ. ಈ ಅಧಿಸೂಚನೆಯ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ Writ petition ಕೂಡಾ ದಾಖಲಿಸಲಾಗಿದೆ. ಜನವರಿ 29 ರಂದು ಈ ನಿಯಮಗಳನ್ನು ಸುಪ್ರಿಂ ಕೋರ್ಟ್ ಸ್ಟೇ ಕೊಟ್ಟು ತಾತ್ಕಾಲಿಕವಾಗಿ ತಡೆಹಿಡಿದಿದೆ. “ಈ ನಿಯಮಗಳು ಅಸ್ಪಷ್ಟವಾಗಿವೆ ಮತ್ತು ದುರ್ಬಳಕೆಯಾಗುವ ಸಾಧ್ಯತೆಗಳಿವೆ, ಅಲ್ಲದೇ ಸಮಾಜದಲ್ಲಿ ಒಡಕು ಮೂಡಿಸಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ನ್ಯಾಯಾಲಯವು ಕೇಂದ್ರ ಸರಕಾರ ಹಾಗೂ ಯುಜಿಸಿ ಮಂಡಳಿಗೆ ನೋಟೀಸ್ ಜಾರಿ ಮಾಡಿದೆ. ವಿಚಾರಣೆ ಪೂರ್ಣವಾಗುವವರೆಗೆ 2012 ರ ನಿಯಮಗಳೇ ಮುಂದುವರೆಯುತ್ತವೆ. ಮಾರ್ಚ್ 19 ರಂದು ಮುಂದಿನ ವಿಚಾರಣೆ ಇದ್ದು ಅವತ್ತು ಕೋರ್ಟ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಇದು ಬಿಜೆಪಿ ಹಾಗೂ ಆರೆಸ್ಸೆಸ್ಸಿನ ಬೃಹನ್ನಾಟಕವೇ?

ಜಾತಿಗ್ರಸ್ತ ಮನಸ್ಸುಗಳು ಜಾಗೃತವಾಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿವೆ.‌ ಸಂಘಿ ಭಕ್ತಾಸುರರು ಪ್ರಧಾನಿ ಮೋದಿಯವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ಹೊರಗೆ ಹಾಕುತ್ತಿದ್ದಾರೆ. ಕೇಂದ್ರ ಸರಕಾರ ಇಕ್ಕಟ್ಟಿಗೆ ಸಿಲುಕಿದೆ ಎಂದು ಮೋದಿ ವಿರೋಧಿಗಳೂ ಒಂದರ್ಥದಲ್ಲಿ ಸಂಭ್ರಮಿಸುತ್ತಿದ್ದಾರೆ.

ಆದರೆ ಇದೆಲ್ಲಾ ಬಿಜೆಪಿ ಹಾಗೂ ಆರೆಸ್ಸೆಸ್ಸಿನ ಬೃಹನ್ನಾಟಕವಾಗಿದೆ. ವರ್ಣ ವ್ಯವಸ್ಥೆಯ ಪ್ರತಿಪಾದಕ, ಜಾತಿ ವ್ಯವಸ್ಥೆಯ ಸಮರ್ಥಕ ಆರೆಸ್ಸೆಸ್ ಎಂದೂ ಮೇಲ್ಜಾತಿಗೆ ವಿರುದ್ಧವಾದ ನಿಯಮಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ನಿರ್ಲಕ್ಷಿಸಲೂ ಕೇಂದ್ರದ ಮೋದಿ ಸರಕಾರಕ್ಕೆ ಅಸಾಧ್ಯ. ಸಂವಿಧಾನದ ಪ್ರಕಾರ ಜಾತಿ ತಾರತಮ್ಯಕ್ಕೂ ಅವಕಾಶವಿಲ್ಲ. ಹೀಗಾಗಿ ಬೃಹತ್ ಷಡ್ಯಂತ್ರವೊಂದನ್ನು ರಚಿಸಲಾಗಿದೆ. ಯುಜಿಸಿ ಜಾರಿಗೆ ತಂದ ನಿಯಮಾವಳಿಗಳ ವಿರುದ್ಧ ಬಿಜೆಪಿಯೇ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ, ಹಿನ್ನೆಲೆಯಲ್ಲಿ ಆರೆಸ್ಸೆಸ್ ಬೆಂಬಲಿಸುತ್ತಿದೆ. ಈ ಮೂಲಕ ತಾರತಮ್ಯದ ವಿರುದ್ಧ ನಿಯಮಾವಳಿಗಳನ್ನು ರೂಪಿಸಿದಂತೆಯೂ ಆಯ್ತು, ಜನಾಕ್ರೋಶಕ್ಕೆ ಮಣಿದು ಹಿಂತೆಗೆದುಕೊಳ್ಳಲೂ ಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಹೇಗಾದರೂ ಮಾಡಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಮಾಡುತ್ತಾ ಮೇಲ್ಜಾತಿ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವ ಪ್ರಯತ್ನದ ಫಲವೇ ಈ ಮೇಲ್ವರ್ಗದವರ ಪ್ರತಿಭಟನೆ. ವಿರೋಧದ ನೆಪದಲ್ಲಿ ತನ್ನ ಅಸಹಾಯಕತೆಯನ್ನು ಪ್ರಕಟಿಸುವ ಕೇಂದ್ರ ಸರಕಾರ ಯುಜಿಸಿ ನಿಯಮಾವಳಿಗಳನ್ನು ಹಿಂತೆಗೆದುಕೊಳ್ಳುವುದು ಇಲ್ಲವೇ ದುರ್ಬಲಗೊಳಿಸುವುದಂತೂ ಖಚಿತ.

ಕಳೆದ ಐದು ವರ್ಷಗಳಲ್ಲಿ 122 ಕ್ಕೂ ಹೆಚ್ಚು ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಜಾತಿ ತಾರತಮ್ಯದ ಹಿಂಸೆಗೆ ಬಲಿಯಾಗಿದ್ದಾರೆ. ಅರ್ಹತೆ ಪ್ರತಿಭೆ ಇದ್ದರೂ ಉನ್ನತ ಶಿಕ್ಷಣ ಮುಂದುವರೆಸಲಾಗದೇ ಕಳೆದ 5 ವರ್ಷಗಳಲ್ಲಿ 13,500 ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಧಕ್ಕೆ ವಿದ್ಯಾಭ್ಯಾಸ ತೊರೆದಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಯುಜಿಸಿ ನಿಯಮಗಳ ಆಳಕ್ಕಿಳಿದು ನೋಡಿದರೆ 2012 ರ ನಿಯಮಾವಳಿ ಕಾಯಿದೆಯಲ್ಲಿ ನಮೂದಿಸಲಾಗಿದ್ದ ಹಲವಾರು ಬಗೆಯ ಜಾತಿ ತಾರತಮ್ಯಗಳ ಕುರಿತ ವಿವರಗಳನ್ನು ತೆಗೆದು ಹಾಕಲಾಗಿದೆ. ಮೋದಿ ಸರಕಾರವು ತನ್ನ ಜಾತಿಗ್ರಸ್ಥ ಮನಸ್ಥಿತಿಯಂತೆ 2012 ರ ಕಾಯಿದೆಯನ್ನೇ ಬದಲಾವಣೆಯ ಹೆಸರಲ್ಲಿ ದುರ್ಬಲಗೊಳಿಸಿದೆ. ಈಗ ಮೇಲ್ಜಾತಿ ವಿದ್ಯಾರ್ಥಿಗಳು ಈ ಹೊಸ ನಿಯಮದಿಂದಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ ಜಾತಿ ದೌರ್ಜನ್ಯವಾಗುವ ಸಂಭವನೀಯತೆ ಇದೆ ಎಂಬ ಕುತರ್ಕವನ್ನು ಮುಂದಿಟ್ಟು ಪ್ರತಿಭಟನೆಗಿಳಿದಿದ್ದಾರೆ.

ಸಂವಿಧಾನದ ಆರ್ಟಿಕಲ್ 15 (4), 16 (4) ಗಳಲ್ಲಿ “ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮತ್ತು ವಿಶೇಷವಾಗಿ ಎಸ್ಸಿ ಎಸ್ಟಿಗಳ ಪ್ರಾತಿನಿಧ್ಯತೆಯನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಸಮಾನತೆಯನ್ನು ಸಾಧಿಸುವ ಮಾರ್ಗವೆಂದೂ ಸುಪ್ರಿಂ ಕೋರ್ಟ್ ಹೇಳಿದೆ. ಆದರೆ ಸಂವಿಧಾನವನ್ನು ಬದಲಾಯಿಸುವುದೇ ಬಿಜೆಪಿಯ ಗುರಿ ಎಂದವರಿಂದ, ಹಂತಹಂತವಾಗಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವವರಿಂದ ಸಂವಿಧಾನದ ಆಶಯವನ್ನು ಅಳವಡಿಸಲು ಸಾಧ್ಯವೇ?

ಶಿಕ್ಷಣ, ಉದ್ಯೋಗ ಅವಕಾಶ, ಉದ್ಯಮ ಅಧಿಕಾರ ಎಲ್ಲವೂ ಮೇಲ್ಜಾತಿ ವರ್ಗಗಳಿಗೆ ದಕ್ಕಬೇಕು, ಶೋಷಿತ ಜಾತಿಗಳು ಮೇಲ್ಜಾತಿಯವರ ಸೇವೆ ಮಾಡಿಕೊಂಡಿರಬೇಕು ಎನ್ನುವುದೇ ಮನುವಾದಿಗಳ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಕಾನೂನು ಮಸೂದೆ ನಿಯಮಾವಳಿಗಳನ್ನು ರೂಪಿಸುವ ಷಡ್ಯಂತ್ರಗಳು ನಡೆಯುತ್ತಿವೆ. ಶೋಷಕ ವರ್ಗಗಳ ಒಗ್ಗಟ್ಟಿನ ಜನಾಂದೋಲನ ಮಾತ್ರ ಮನುವಾದಿಗಳ ಪ್ರಯತ್ನಗಳನ್ನು ವಿಫಲಗೊಳಿಸ ಬಹುದಾಗಿದೆ.

ಯುಜಿಸಿ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರಕಾರವೂ  ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಕ್ಯಾಂಪಸ್ ಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು “ರೋಹಿತ್ ವೇಮುಲ ಮಸೂದೆ” ತರಲು ಸಿದ್ಧತೆ ಮಾಡಿಕೊಂಡಿದೆ. ಜಾತಿ ಆಧಾರಿತ ತಾರತಮ್ಯ ತಡೆಯುವ ಜೊತೆಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸುವುದೂ ರಾಜ್ಯ ಸರಕಾರದ ಆದ್ಯತೆ ಎಂದು ಅಧಿವೇಶನದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಎಲ್ಲಾ ವಿವಿ ಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಮತ್ತು ಶಿಕ್ಷಣದ ಹಕ್ಕು ಕಲ್ಪಿಸಲು ರಾಜ್ಯ ಸರಕಾರ “ರೋಹಿತ್ ಮೇಮುಲ ಕಾಯ್ದೆ” ರೂಪಿಸಲು ಮುಂದಾಗಿತ್ತು. 2025 ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೇ ಈ ಮಸೂದೆಯನ್ನು ಮಂಡಿಸುವ ಸಿದ್ಧತೆ ನಡೆದಿತ್ತು‌. ಆದರೆ ಮಂಡಿಸಲಿಲ್ಲ. ಈಗ ಯುಜಿಸಿ ಅಧಿಸೂಚನೆಗೆ ಬಂದ ವಿರೋಧವನ್ನು ಪರಿಗಣಿಸಿ ಈ ಉದ್ದೇಶಿತ ಮಸೂದೆಗೂ ಒಂದಿಷ್ಟು ಬದಲಾವಣೆಗಳನ್ನು ಮಾಡಿ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಜಾರಿಗೊಳಿಸುವ ಸಾಧ್ಯತೆಗಳಿವೆ. ಕೇಂದ್ರ ಸರಕಾರ ಯುಜಿಸಿ ನಿಯಮಾವಳಿಗಳಲ್ಲಿ ಮಾಡುವ ಬದಲಾವಣೆಗಳ ಪರಿಣಾಮ ರಾಜ್ಯ ಸರಕಾರ ತರಲು ಹೊರಟಿರುವ ಮಸೂದೆ ಮೇಲೆಯೂ ಆಗುವುದರಲ್ಲಿ ಸಂದೇಹವಿಲ್ಲ. ಒಟ್ಟಾರೆಯಾಗಿ ಮೇಲ್ಜಾತಿಯವರು ಜಾತಿ ವ್ಯವಸ್ಥೆಯ ಮೇಲಿನ ತಮ್ಮ ಅಕ್ಟೋಪಸ್ ಹಿಡಿತವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಕೊನೆಯಾಗುವ ಲಕ್ಷಣಗಳಿಲ್ಲ. ಜಾತಿ ತಾರತಮ್ಯ ಕೊನೆಯಾಗುವವರೆಗೂ ಇನ್ನೆಷ್ಟು ರೋಹಿತ್ ವೇಮುಲರಂತಹ ಕೆಳಜಾತಿ ವರ್ಗಗಳ ವಿದ್ಯಾರ್ಥಿಗಳು ಬಲಿಯಾಗಬೇಕೋ? ಮೇಲ್ಜಾತಿಯೇತರ ಸಮುದಾಯಕ್ಕೆ ಉನ್ನತ ಶಿಕ್ಷಣವನ್ನು ನಿರ್ಬಂಧಿಸಲು ಈ ಸಂಘಿ ಸರಕಾರ ಇನ್ನೆಷ್ಟು ಷಡ್ಯಂತ್ರಗಳನ್ನು ರೂಪಿಸುತ್ತದೋ? ಬಲ್ಲವರು ಯಾರು?

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಸ್ಮರಣೆ | ಗಾಂಧಿಯೊಂದು ವಿಶಿಷ್ಟ ಸಂಸ್ಕೃತಿ

More articles

Latest article

Most read