ಸಿನೆಮಾ | ಲ್ಯಾಂಡ್ ಲಾರ್ಡ್ -‌ ಕೊಡ್ಲಿ ರಾಚಯ್ಯನ ಸಂವಿಧಾನಾವತಾರ

ಸಿನಿಮಾದ ಮೊದಲ ಭಾಗದಲ್ಲಿ ಊರಿನ ಸಾಮಾಜಿಕ ಸಂಬಂಧಗಳನ್ನು ನವಿರಾದ ರೀತಿಯಲ್ಲಿ ಸಿನಿಮಾ ಕಟ್ಟಿಕೊಡುತ್ತದೆ. ಅಲ್ಲಲ್ಲಿ ಭಾವುಕ ಸನ್ನಿವೇಶಗಳ ಮೂಲಕ ನೋಡುಗರನ್ನು ತಟ್ಟುತ್ತದೆ. ಆದರೆ ಸಿನಿಮಾದ ಸತ್ವ ಇರುವುದು ಅದರ ದ್ವಿತೀಯಾರ್ಧದಲ್ಲಿ. ನಂತರದಲ್ಲಿ ಘಟಿಸುವ ಘಟನಾವಳಿಗಳ ಮೂಲಕ ಸಿನಿಮಾ ನೇರವಾದ ರಾಜಕೀಯ ಹೇಳಿಕೆಯಾಗಿ ನೋಡುಗರ ಮನಸ್ಸಿಗೆ ಹತ್ತಿರವಾಗುತ್ತದೆ. ಎಲ್ಲಾ ಸಿನಿಮಾಗಳಿಗೆ ಭಿನ್ನವಾಗಿ ನಿಲ್ಲುವುದೂ ಇದೇ ಕಾರಣಕ್ಕೆ -ಹರ್ಷಕುಮಾರ್‌ ಕುಗ್ವೆ.

“ಇನ್ನೂರು ಎಕರೆ ಭೂಮಿ ಇದ್ರೂ ಲ್ಯಾಂಡ್ ಲಾರ್ಡ್ ಎರಡೇ ಅಂಗುಲ ಭೂಮಿ ಇದ್ರೂ ಲ್ಯಾಂಡ್ ಲಾರ್ಡೆ”, ಕೂಲಿ ಮಾಡೋರು ಯಾವತ್ತೂ ಭೂಮಾಲೀಕರಾಗಬಾರದು, ಈಗ ಬೇಕಿರೋದು ಸಂಧಾನ ಮಾರ್ಗ ಅಲ್ಲ ಸಂವಿಧಾನ ಮಾರ್ಗ, ನೀವು ಬದಲಾಗಿ, ಇಲ್ದೇ ಇದ್ರೆ ಅವನು ಬಂದು ಬದಲಾಯಿಸ್ತಾನೆ, ಯಾವ ಹೆಂಗಸೂ ಹುಟ್ತಾನೇ ಮುಂಡೆನೂ ಅಲ್ಲ ಮುತ್ತೈದೆನೂ ಅಲ್ಲ…. ಇಂತಹ ಪಂಚಿಗ್ ಡೈಲಾಗ್ ಗಳು ಮೊನ್ನೆ ಬಿಡುಗಡೆಯಾಗಿರುವ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ಪ್ರೇಕ್ಷಕರನ್ನು ಮುದಗೊಳಿಸುತ್ತವೆ. ಈ ಸಿನಿಮಾ ಉತ್ತಮ ಚರ್ಚೆ ಹುಟ್ಟುಹಾಕಿರುವುದರಲ್ಲಿ ಸಹ ಇಂತಹ ಗಟ್ಟಿಯಾದ ಸಂಭಾಷಣೆಗಳ ಪಾತ್ರ ಮುಖ್ಯ. ಲ್ಯಾಂಡ್ ಲಾರ್ಡ್ ಸಿನಿಮಾ ಪ್ರಾಯಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ. ಈ ಕಾರಣಕ್ಕೆ ಈ ಸಿನಿಮಾದ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಜಡೇಶ್ ಕೆ ಹಂಪಿಯವರನ್ನು ಅಭಿನಂದಿಸಬೇಕು. ಇಂತಹ ಸತ್ವಯುತ ಸಿನಿಮಾದಲ್ಲಿ ನಾಯಕ ನಟನಾಗಿ ಪಾತ್ರ ಮಾಡಲು ಮುಂದೆ ಬರುವ ಮೂಲಕ ತಾನೇ ಒಂದು strong ಸಂದೇಶ ನೀಡಿರುವ ನಟ ದುನಿಯಾ ವಿಜಯ್ ಅವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಬೇಕು. ಯಾಕೆಂದರೆ, ಇಂತಹ ಕಥೆಗಳು ಮುಂದೆ ಬರುವಾಗ ಒಂದಲ್ಲ ನೂರು ಸಲ ಯೋಚಿಸುವ ಪರಿಸ್ಥಿತಿ ಕನ್ನಡ ಚಿತ್ರರಂಗದಲ್ಲಿದೆ. ಲಾಭ ಹೋಗಲಿ ಹಾಕಿದ ಬಂಡವಾಳವಾದರೂ ಬಂದರೆ ಸಾಕು ಅನ್ನುವ ಆತಂಕ ಸಿನಿಮಾ ಮಾಡಿದವರಲ್ಲಿ ಇರುತ್ತದೆ. ಈ ಪರಿಸ್ಥಿತಿ ನೆರೆಯ ತಮಿಳು ಮಲಯಾಳಂ ಸಿನಿಮಾಗಳಿಗಿಲ್ಲ. ಅಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಗಳನ್ನು ಹೇಳುವ ಸಿನಿಮಾಗಳ ಒಂದು ಪರಂಪರೆಯೇ ಸೃಷ್ಟಿಯಾಗಿದೆ. ಆದರೆ ಕನ್ನಡದ ಮಟ್ಟಿಗೆ ಇಂತಹ ಪ್ರಯತ್ನಗಳು ಬಹಳ ಕಡಿಮೆ. ಇಂತಹ ಸಿನಿಮಾಗಳೇ ಬಂದಿಲ್ಲ ಎಂದಲ್ಲ. ಆದರೆ ಅವುಗಳು ಗೆಲ್ಲುವ ಭರವಸೆ ಇರುವುದಿಲ್ಲ.‌ ಎರಡು ವರ್ಷಗಳ ಹಿಂದೆ ಇಂತದೇ ಕತೆ ಇಟ್ಟುಕೊಂಡು ಬಂದ ಪಾಲಾರ್ ಸಿನಿಮಾ ಆಗಲಿ,  ಇತ್ತೀಚೆಗೆ ಬಂದ ಹೆಬ್ಬುಲಿ ಕಟ್ ಆಗಲಿ ಕಮರ್ಷಿಯಲ್ ಸಕ್ಸೆಸ್ ಕಾಣಲಿಲ್ಲ. ಆದರೆ ದರ್ಶನ್ ಅಭಿನಯದ ಕಾಟೇರ ಮಾತ್ರ ಭಾರೀ ಹಿಟ್ ಆಯಿತು. ತರುಣ್ ಸುಧೀರ್,  ಇದೇ ಜಡೇಶ್, ಮಾಸ್ತಿ ಇವರ ತಂಡವೇ ಅದನ್ನೂ ಮಾಡಿದ್ದು. ಆ ಸಿನಿಮಾ ಮೂಲಕವೇ ಈ ತಂಡ ಒಂದು ಹೊಸ ಭರವಸೆ ಮೂಡಿಸಿತ್ತು. ಮುಖ್ಯವಾಗಿ ನಾಡಿನ ಸುಡುವಾಸ್ತವಗಳ ಕಥೆಗಳನ್ನು ಹೇಳುವಾಗ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಹೇಳುವ ಕಲೆ ಮುಖ್ಯ. ಈ ವಿಷಯದಲ್ಲಿ ಈ ತಂಡ ವಿನೂತನ ಪ್ರಯತ್ನಕ್ಕೆ ಮುಂದಾಗಿತ್ತು. ಇದೀಗ ಲ್ಯಾಂಡ್ ಲಾರ್ಡ್ ಸಿನಿಮಾದ ಮೂಲಕ ಆ ಪ್ರಯತ್ನದ ಎರಡನೇ ಮಜಲನ್ನು ತಲುಪಿದೆ.

ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ರಾಮದುರ್ಗದ ಕೊಡಲಿ ರಾಚಯ್ಯ (ವಿಜಯ್) ಎಂಬ ತಳಸಮುದಾಯದ ವ್ಯಕ್ತಿ ಹುಲಿದುರ್ಗ ಎಂಬ ಊರಲ್ಲಿ ಸಾಮಾನ್ಯ ಕೂಲಿಕಾರನಾಗಿ ತನ್ನ ಹೆಂಡತಿ ನಿಂಗವ್ವ (ರಚಿತಾ ರಾಮ್) ಮತ್ತು ಪೊಲೀಸ್ ಆಗಿರುವ ಮಗಳು ಭಾಗ್ಯ (ರಿತನ್ಯ ವಿಜಯ್) ಜೊತೆ ವಾಸಿಸುತ್ತಾ ಇರುತ್ತಾನೆ. ಈ ರಾಚಯ್ಯನ ಹಿನ್ನೆಲೆ ಆ ಊರಿನ ಜನರಿಗಿರಲಿ ಭೂಮಾಲಿಕ ಸಣ್ಣ ಧಣಿಗೂ (ರಾಜ್ ಬಿ ಶೆಟ್ಟಿ) ತಿಳಿದಿರುವುದಿಲ್ಲ. ಆದರೆ, ಆ ಊರಿನಲ್ಲಿ ಕೂಲಿ ಮಾಡುವ ಕೂಲಿಕಾರರಲ್ಲಿ ಕೆಲವರು ಯಥಾಸ್ಥಿತಿಯನ್ನು ಒಪ್ಪಿಕೊಳ್ಳದೆ ತಮ್ಮ ಮೇಲಿನ ದಬ್ಬಾಳಿಕೆಯನ್ನು ಪ್ರಶ್ನಿಸುವುದು ಅಪರಾಧವಾಗಿರುತ್ತದೆ. ಇದರಲ್ಲಿ ದೇವಿ (ಶಿಶಿರ್ ಬೈಕಾಡಿ) ಎಂಬ ಯುವಕ ಮುಂಚೂಣಿಯಲ್ಲಿರುತ್ತಾನೆ.

ಸಿನಿಮಾದ ಮೊದಲ ಭಾಗದಲ್ಲಿ ಊರಿನ ಸಾಮಾಜಿಕ ಸಂಬಂಧಗಳನ್ನು ನವಿರಾದ ರೀತಿಯಲ್ಲಿ ಸಿನಿಮಾ ಕಟ್ಟಿಕೊಡುತ್ತದೆ. ಅಲ್ಲಲ್ಲಿ ಭಾವುಕ ಸನ್ನಿವೇಶಗಳ ಮೂಲಕ ನೋಡುಗರನ್ನು ತಟ್ಟುತ್ತದೆ. ಆದರೆ ಸಿನಿಮಾದ ಸತ್ವ ಇರುವುದು ಅದರ ದ್ವಿತೀಯಾರ್ಧದಲ್ಲಿ. ನಂತರದಲ್ಲಿ ಘಟಿಸುವ ಘಟನಾವಳಿಗಳ ಮೂಲಕ ಸಿನಿಮಾ ನೇರವಾದ ರಾಜಕೀಯ ಹೇಳಿಕೆಯಾಗಿ ನೋಡುಗರ ಮನಸ್ಸಿಗೆ ಹತ್ತಿರವಾಗುತ್ತದೆ. ಎಲ್ಲಾ ಸಿನಿಮಾಗಳಿಗೆ ಭಿನ್ನವಾಗಿ ನಿಲ್ಲುವುದೂ ಇದೇ ಕಾರಣಕ್ಕೆ.

ಸ್ವಾತಂತ್ರ್ಯಾ ನಂತರದಲ್ಲಿ ಸಮಾನತೆಯ ತತ್ವದ ಸಂವಿಧಾನವೇನೋ ಜಾರಿಯಲ್ಲಿರುತ್ತದೆ, ಪ್ರಜಾಪ್ರಭುತ್ವವೂ ಇರುತ್ತದೆ. ಆದರೆ ಈ ದೇಶದ ಫ್ಯೂಡಲ್  ವರ್ಗದ ಮೇಲ್ಜಾತಿ ಮೇಲ್ವರ್ಗದ ವಾರಸುದಾರರು ಈ ಎಲ್ಲವನ್ನೂ  ತಮ್ಮ ತೆಕ್ಕೆಗೆ ಪಡೆದುಕೊಂಡು, ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳನ್ನು ಹತೋಟಿಗೆ ತರಲು ಶತಾಯ ಗತಾಯ ಮಾಡಿದ ಪ್ರಯತ್ನಗಳು ಯಾವುದೋ ಅಡಗೂಲಜ್ಜಿ ಕತೆಗಳಲ್ಲ, ಕಾಲ್ಪನಿಕ ಕತೆಗಳಲ್ಲ. ಅದು ಕೋಲಾರವಿರಲಿ, ಹೈದರಾಬಾದ್ ಕರ್ನಾಟಕವಿರಲಿ, ಗೇಣಿ ಪದ್ಧತಿ ಇದ್ದ ಮಲೆನಾಡು ಕರಾವಳಿ ಇರಲಿ. ಎಲ್ಲ ಕಡೆಗಳಲ್ಲೂ ಲ್ಯಾಂಡ್ ಲಾರ್ಡ್ ವರ್ಗ ನಡೆಸಿದ್ದು ಇದೇ ಹಕೀಕತ್ತು. ಈ ಎಳೆಯನ್ನೇ ಹಿಡಿದುಕೊಂಡು ಉಳ್ಳವರ ವರ್ಗದ ವಿರುದ್ಧ ಅನಿವಾರ್ಯ ಪ್ರತಿಹಿಂಸೆಗೆ ಇಳಿಯುವ ಕೊಡಲಿ ರಾಚಯ್ಯನನ್ನು ಮುಖಾಮುಖಿ ಮಾಡುತ್ತದೆ. ಅಷ್ಟೇ ಆಗಿದ್ದರೆ ಇದು ಮತ್ತೊಂದು ಅಸುರನ್ ಸಿನಿಮಾ ಆಗಿಬಿಡುತ್ತಿತ್ತು. ಇಲ್ಲಿ ಸಿನಿಮಾದ ಪೊಲಿಟಿಕಲ್ ಸ್ಟೇಟ್ಮೆಂಟ್ ಇರುವುದು ಕೊಡಲಿ ರಾಚಯ್ಯ ಬದಲಾವಣೆಗಾಗಿ ಅಕ್ಷರದ ಅರಿವಿನ ದಾರಿಯನ್ನು ಮತ್ತು ಸಂವಿಧಾನದ ದಾರಿಯನ್ನು ಬಲವಾಗಿ ಪ್ರತಿಪಾದಿಸುವುದರಲ್ಲಿ.  ಲ್ಯಾಂಡ್ ಲಾರ್ಡ್ ಸಿನಿಮಾ ಭಿನ್ನವಾಗುವುದು ಈ ಕಾರಣಕ್ಕೆ.

ಸಿನಿಮಾ ಫ್ಯೂಡಲ್ ವರ್ಗಗಳ ಸೇವೆಗಾಗಿ ಜಾರಿಲ್ಲಿದ್ದ ದೇವದಾಸಿ ಬಸವಿ ಬಿಡುವ ಪದ್ಧತಿಯನ್ನು, ಜಾತಿ ಅಸ್ಪೃಶ್ಯತೆಗಳನ್ನು ಸಹ ಕತೆಯಲ್ಲಿ ಪರಿಣಾಮಕಾರಿಯಾಗಿ ಜೋಡಿಸಿಕೊಂಡಿದೆ.

ಸಿನಿಮಾದ ಮತ್ತೊಂದು ಶಕ್ತಿ ಇದರ ಸ್ತ್ರೀಪಾತ್ರಗಳು.  ರಾಚಯ್ಯನ ಅವ್ವ (ಉಮಾಶ್ರೀ), ನಿಂಗವ್ವಳಾಗಿ ರಚಿತಾ ರಾಮ್, ಬಸವಿಯಾಗಿ ಭಾವನಾ ರಾವ್, ಪೊಲೀಸ್ ಕಾನ್ ಸ್ಟೇಬಲ್ ಭಾಗ್ಯ‌, ದೇವಿಯ ಅಮ್ಮನ ಪಾತ್ರದಲ್ಲಿ ವಾಣಿ ಸತೀಶ್- ಎಲ್ಲ ಪಾತ್ರಗಳು ಗಟ್ಟಿಯಾಗಿ ಮೂಡಿ ಬಂದಿವೆ. ಪ್ರತಿಯೊಬ್ಬರೂ ಪಾತ್ರಗಳೇ ಆಗಿ ನಟಿಸಿದ್ದಾರೆ. ರಚಿತಾ ರಾಮ್ ಅಭಿನಯವಂತೂ ಸೂಪರ್ಬ್.

ಕೊಡಲಿ ರಾಚಯ್ಯನಾಗಿ ನಟ ವಿಜಯ್ ನಟನೆ ಬಗ್ಗೆ ಎರಡು ಮಾತಿಲ್ಲ. ವಿಜಯ್ ಬಿಟ್ಟರೆ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳಲಾರದ ರೀತಿಯಲ್ಲಿ ಅವರು ತಮ್ಮ ನಟನೆಯ ಮೂಲಕ ಜೀವ ತುಂಬಿದ್ದಾರೆ. ಇದಕ್ಕೆ ಸರಿಸಮನಾಗಿ ಪೈಪೋಟಿ ನೀಡಿರುವುದು ರಾಜ್ ಬಿ ಶೆಟ್ಟಿ. ಒಂದು ಹಂತದಲ್ಲಿ ಇವರೇ ಸಿನಿಮಾವನ್ನಿಡೀ ವ್ಯಾಪಿಸಿಕೊಂಡಂತೆ ಭಾಸವಾಗುವಂತೆ ಅಭಿನಯಿಸಿದ್ದಾರೆ. ಶಿಶಿರ್ ಬೈಕಾಡಿ, ಶರತ್ ಲೋಹಿತಾಶ್ವ ಎಲ್ಲರೂ ಮನಸಿನಲ್ಲಿ ಉಳಿಯುವಂತೆ ಅಭಿನಯಿಸಿದ್ದಾರೆ.

ಸಿನಿಮಾದಲ್ಲಿ ಕೊರತೆಗಳಿಲ್ಲ ಎಂದಲ್ಲ. ಊಹಿಸಬಹುದಾದ ಲೀನಿಯಾರ್ ನರೇಶನ್ ತಪ್ಪಿಸಬಹುದಿತ್ತು. ಸಿನಿಮಾದಲ್ಲಿ ಸಂಭಾಷಣೆಗಳು ಮುಖ್ಯ ಪಾತ್ರ ವಹಿಸುತ್ತವೆಯಾದರೂ ಕೇವಲ ಸಂಭಾಷಣೆಗಳಲ್ಲದೆ ಕಲಾತ್ಮಕತೆಯೂ ಮುಖ್ಯ ಎಂಬುದನ್ನು ತಂಡ ಮನವರಿಕೆ ಮಾಡಿಕೊಳ್ಳಬೇಕು. ಇದಕ್ಕೆ ಮರಾಠಿಯ ನಾಗರಾಜ್ ಮಂಜುಳೆ ಸಿನಿಮಾಗಳನ್ನು ಉದಾಹರಣೆಯಾಗಿ ಮಾದರಿಯಾಗಿ ನೋಡಬಹುದು. ಹಿನ್ನೆಲೆ ಸಂಗೀತ ಹಾಗೂ ಹಾಡುಗಳಲ್ಲಿ ಮತ್ತಷ್ಟು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇತ್ತು.

ತಮ್ಮ ಮುಂದಿನ ಪ್ರಯತ್ನಗಳಲ್ಲಿ ಈ ಕೊರತೆಗಳನ್ನು ತಂಡ ಮೀರಿಕೊಳ್ಳಲಿ ಎಂದು ಆಶಿಸೋಣ. ಲ್ಯಾಂಡ್ ಲಾರ್ಡ್ ಸಿನಿಮಾವನ್ನು ಕನ್ನಡಿಗರು ಗೆಲ್ಲಿಸಿದರೆ ಮಾತ್ರ ಇಂತಹ ಸಾಹಸಗಳಿಗೆ ಹಣ ಹೂಡುವವರು ಮನಸು ಮಾಡಲು ಸಾಧ್ಯ.

ಹರ್ಷಕುಮಾರ್‌ ಕುಗ್ವೆ

More articles

Latest article

Most read