ಬೀದಿ ನಾಟಕವೇ ನನ್ನ ಅಸ್ತಿತ್ವ – ಸಹನಾ ಪಿಂಜಾರ್ | ಸಂದರ್ಶನ‌- ರೇಶ್ಮಾ ಗುಳೇದಗುಡ್ಡಾಕರ್

ಸಹನಾ ಮೇಡಂ ಅವರ ಮನೆಗೆ ತಲುಪಿದಾಗ ಮುಂಜಾನೆಯ ತಿಳಿ ಬಿಸಿಲು 10 ಗಂಟೆಯಾದರೂ  ಮೋಡ ಕವಿದ ವಾತಾವರಣದಿಂದ ಹೊಸಪೇಟೆ ಹವಾಮಾನವು ಸ್ವಲ್ಪ ತಂಪೆರೆದಿತ್ತು. ಸಹನಾ ಮೇಡಂ ನಗುಮುಖದಿಂದ ಸ್ವಾಗತಿಸಿದರು. ಜೊತೆಗೆ ಅವರ ಪತಿಯೂ ಇದ್ದರು. ಮೊದಲೇ ಗೊತ್ತು ಮಾಡಿಕೊಂಡ ಭೇಟಿಯಾದುದರಿಂದ ಹೆಚ್ಚಿನ ಪರಿಚಯ ಮಾತುಗಳ ಅಗತ್ಯವಿರದೆ ನಮ್ಮ ಮಾತುಗಳು  ಬಯಲಾಟ, ನಾಟಕ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳತ್ತ ಹೊರಳಿದವು.

ಬೀದಿ ನಾಟಕದಿಂದ ಆರಂಭವಾದ ಅವರ ಬಣ್ಣದ  ಬದುಕು ಮುಂದೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಹಾಗೂ ತದನಂತರದ ಪಯಣದತ್ತ ಹೊರಳಿದ್ದರ  ಕುರಿತು ಕುತೂಹಲಕರ ವಿಚಾರಗಳನ್ನು ಹೇಳುತ್ತಾ ಹೋದಂತೆ ಚರ್ಚೆಯು ಅವರ ಪತಿ ರಿಯಾಜ್  ನೀಡಿದ ರುಚಿಕರವಾದ ಚಹಾದೊಂದಿಗೆ ಮತ್ತಷ್ಟು ಕಂಪನ್ನು ಪಡೆಯಿತು.

ಅವರ ಬದುಕು ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು  ಕಲಾವಿದರ ಬದುಕಿನ ಕುರಿತು ಪ್ರಶ್ನೆಗಳನ್ನು ಮುಂದಿಟ್ಟಾಗ ಎಲ್ಲ ಪ್ರಶ್ನೆಗಳಿಗೂ ಸಮಾಧಾನದಿಂದಲೇ ಉತ್ತರವನ್ನು ನೀಡುತ್ತಾ ನಮಗೊಂದು ಹೊಸ ಜಗತ್ತಿನ ಪರಿಚಯವನ್ನು ಬಿಚ್ಚಿಟ್ಟರು.

ವೇದಿಕೆಯಲ್ಲಿ ಸಹನಾ

1) ನಿಮಗೆ ರಂಗ ಭೂಮಿಯ ಬಗ್ಗೆ ಆಸಕ್ತಿ ಬಂದದ್ದು ಹೇಗೆ?

ಸಹನಾ: ಬಾಲ್ಯದಿಂದ ಮನೆಯಲ್ಲಿ ರಂಗಭೂಮಿಯ ವಾತಾವರಣ ನನಗೆ ದೊರಕಿತು. ಮಾವನವರಾದ ಅಬ್ದುಲ್ಲ ಅವರು ಭಾಗವಹಿಸಲು ಪ್ರೋತ್ಸಾಹ ನೀಡಿದರು. ಹೀಗಾಗಿ ಬಯಲಾಟಗಳಲ್ಲಿ ನಾನು ಬಾಲ್ಯದಿಂದಲೇ ಭಾಗವಹಿಸುತ್ತಾ, ಶಾಲಾ ದಿನಗಳಲ್ಲಿ ಚರ್ಚಾ ಕೂಟದಲ್ಲೂ  ಸಹ ಭಾಗವಹಿಸುತ್ತಿದ್ದೆ. ವೈಚಾರಿಕ ಪುಸ್ತಕಗಳ ಓದು ಹಾಗೂ ಸಾಹಿತಿಗಳ ಒಡನಾಟ, ಕುಟುಂಬದ ಸಹಕಾರದಿಂದ ರಂಗಭೂಮಿಯೇ ನನ್ನ ಜಗತ್ತಾಯಿತು. ನಮ್ಮ ಮನೆಯಲ್ಲಿ ನಟರ ಜೊತೆಗೆ ವಿಮರ್ಶಕರೂ ಇದ್ದಾರೆ. ನಮ್ಮ ಮಾವ ತಾಯಿ, ದೊಡ್ಡಮ್ಮ ಎಲ್ಲರೂ ವಿಮರ್ಶಕರೆ. ನನಗೆ ರಂಗಭೂಮಿ ಬೇರೆ ಮನೆ ಬೇರೆ ಎಂದು ಒಮ್ಮೆಯೂ ಅನಿಸಿಲ್ಲ.

2. ನೀನಾಸಂ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ – ಈ ಬಗ್ಗೆ ಅಲ್ಲಿನ ಅನುಭವ ಹೇಗಿತ್ತು ಹೇಳಿ ?

ಸಹನಾ : ಕೆ.ವಿ ಸುಬ್ಬಣ್ಣನವರು ನಮ್ಮ ಮನೆಗೆ  ಬಂದಾಗ ಅವರ ಬಳಿ  ನಾನು ಮಾತನಾಡಿದ್ದರಿಂದ ನಾನು ಯಾವುದೇ ಸಂದರ್ಶನವನ್ನು ಎದುರಿಸದೆ ನೀನಾಸಂ ಗೆ ನೇರವಾಗಿ ಆಯ್ಕೆಯಾಗಿ ಹೋದೆ. ಅಲ್ಲಿ ಹಲವಾರು  ವಿಚಾರಗಳನ್ನು ಕಲಿತೆ. ಅವು  ನನ್ನನ್ನು ಮತ್ತಷ್ಟು ಚುರುಕು ಗೊಳಿಸಿದವು ಹಾಗೂ ಗಟ್ಟಿಯಾಗಿಸಿದವು.

ಅಲ್ಲಿಯ ಕಲಿಕೆಯನ್ನು ಮುಗಿಸಿ ನಂತರ ನಾನು ಮತ್ತೆ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಶಾಲೆಯ ಮಕ್ಕಳಿಗೂ  ನಟನೆಯ ಬಗ್ಗೆ ಪಾಠ ಮಾಡಿದೆ .ಆದರೆ   ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಎಂಬ ಕಡಲು ಸದಾ ನನ್ನ  ಮನದಲ್ಲಿ ಉಕ್ಕುತ್ತಿತ್ತು. ಅಲ್ಲಿಗೆ ಹೋಗಬೇಕೆಂಬ ಕನಸು ಸಹ ಗರಿಗೆದರಿತ್ತು. ಆದರೆ ಅದಕ್ಕೆ ಪದವಿ ಪೂರೈಸ ಬೇಕಾಗಿತ್ತು. ಹೀಗಾಗಿ ಪದವಿಯತ್ತ ಗಮನಹರಿಸಿ ಅದನ್ನು ಮುಗಿಸಿಕೊಂಡು ಹೊರಡುತ್ತೇನೆ ಎಂದಾಗ ಮೊದಲು ಮಾವ, ಮತ್ತು ಕುಟುಂಬದವರು ಬೇಡ ಎಂದರು.

ಕಾರಣ ದೂರದ ಊರು, ಗೊತ್ತಿಲ್ಲದ ಭಾಷೆಯ ನಡುವೆ ನೀನು ಹೇಗಿರುವೆ? ಎಂದು ಆತಂಕ ವ್ಯಕ್ತಪಡಿಸಿದರು. ಅದರೆ  ನಾನು ನನ್ನ  ಕನಸನ್ನು  ಬಿಡಲು ಒಪ್ಪಲಿಲ್ಲ. ಹೋಗಲೇ ಬೇಕೆಂಬ ನನ್ನ ನಿರ್ಧಾರಕ್ಕೆ ಮನ ಬದ್ಧವಾಗಿತ್ತು. ನಾನು ಮೊದಲಿನಿಂದಲೂ ಹೀಗೆ ನನ್ನ ನಿರ್ಧಾರದಂತೆಯೆ ನಡೆಯುವುದು. ಹೀಗಾಗಿ ನಾನು ಯಾರಿಗೂ ಹೇಳದೆ ಬೆಂಗಳೂರಿನಲ್ಲಿ ಸಂದರ್ಶನಕ್ಕೆ ಆಗಮಿಸಿದೆ.

3. ಸಂದರ್ಶನ ಮತ್ತು ನೀವು ಆಯ್ಕೆಯಾದ ನಂತರದ ಬದುಕಿನ ಬಗ್ಗೆ ಹೇಳಿ

ಸಹನಾ : ಎತ್ತರದ ಬಿಳಿ ಬಣ್ಣದ ಚೆಲುವೆಯರನ್ನು  ಸಂದರ್ಶನದ ಅಭ್ಯರ್ಥಿಗಳನ್ನು ನೋಡಿ ಸ್ವಲ್ಪ ಕುಸಿದೆ. ಆದರೆ  ನಾನು ಯಾವ ತಳಕು ಬಳಕು ಇಲ್ಲದೆ ನೇರವಾಗಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಸಂದರ್ಶನವನ್ನು ಎದುರಿಸಿದೆ ಛಲ ಬಿಡದೆ , ಆಯ್ಕೆಯಾದೆ .

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಎಂಬುದು ಒಂದು ಸಾಗರ. ಅಲ್ಲಿ ನಾವೆಲ್ಲ ಪುಟ್ಟ ನಕ್ಷತ್ರಗಳು ಎಂದು ಹೇಳಬಹುದು. ಆದರೆ ಒಂದು ಮಾತನ್ನು ನಾನು ನೇರವಾಗಿ ಹೇಳುವೆ. ಅಲ್ಲಿನ ಅಧ್ಯಕ್ಷರ ನಿಲುವುಗಳ ಮೇಲೆ ಯಾವುದೇ ಒಂದು ನಾಟಕ ಶಾಲೆಯಾಗಲಿ ಅಥವಾ ರಂಗಭೂಮಿಯ ಶಾಲೆಗಳಾಗಲಿ ಅಲ್ಲಿ ವಿನೂತನ ಪ್ರಯೋಗಗಳನ್ನು ಹಾಗೂ ಹೊಸ ಹೊಸ ನಟರನ್ನು ನಾವು ಕಾಣಬಹುದು ಎಂಬುದನ್ನು ನಾನು ಬಲವಾಗಿ ಹೇಳುತ್ತೇನೆ.

4. ಯಾಕೆ ನಿಮಗೆ ಹಾಗೆ ಅನ್ನಿಸುತ್ತದೆ ? ಪ್ರಶ್ನೆ ಕೇಳಬಹುದೇ?

ಸಹನಾ : ಖಂಡಿತಾ …

ಏಕೆಂದರೆ ನೀನಾಸಂಲ್ಲಿ ಸಹ ನನ್ನ ನಂತರ ನನ್ನ ಸಹೋದರರು ಅಲ್ಲಿ ಕಲಿಯಲು ಹೋದಾಗ ಜಾತಿ  ಅವರನ್ನು ಕಾಡಿದೆ. ತದನಂತರ ಇಂದಿನ ಎಲ್ಲಾ ರಂಗ ಶಾಲೆಗಳಾಗಿರಬಹುದು ಹಾಗೂ ರಂಗ ತರಬೇತಿ ಶಿಬಿರಗಳಾಗಿರಬಹುದು ಇಲ್ಲಿಯೂ ಜಾತೀಯತೆ ತಾಂಡವವಾಡುತ್ತಿದೆ. ಹಾಗೂ ಬಹುತ್ವ ಕೇವಲ ಪುಸ್ತಕದಲ್ಲಿರುವ ಮಾತಾಗಿದೆ. ಹೀಗಾದರೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ನಾವು ಕಲಾವಿದರು ಹೇಗೆ ತಿದ್ದುತ್ತೇವೆ?. ಜಾತ್ಯಾತೀತ ನಿಲುವಿನಲ್ಲಿ ರೂಪುಗೊಳ್ಳ ಬೇಕಾದ ಜಾಗವೇ ಇಂದು ಜಾತಿಯ ಕೇಂದ್ರವಾಗಿರುವುದರ ಬಗ್ಗೆ ನನಗೆ ನೋವಿದೆ…..

ಮಕ್ಕಳ ಜತೆಗೆ…

5. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಆವರಣ ನೀವು ಕಂಡಂತೆ ಹೇಳುವಿರಾ.

ಸಹನಾ : ನನ್ನ ಕಪ್ಪು ಬಣ್ಣ, ಕುಳ್ಳು, ಭಾಷೆ ಬರುವುದಿಲ್ಲ ಎಂಬ ಯಾವ ಅಂಶಗಳು ಅಲ್ಲಿ ಹೆಚ್ಚು ಮಹತ್ವವನ್ನು ಪಡೆಯದೆ ನನ್ನ ವೃತ್ತಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ನೆರವಾಗಿತ್ತು ಹಾಗೂ ಅಲ್ಲಿನ  ಅಧ್ಯಾಪಕರಿಂದ ವರ್ಷಕ್ಕೊಮ್ಮೆ  ನಡೆಸುವ ಸಂದರ್ಶನಗಳು ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಲು ಹೆಚ್ಚು ಅನುಕೂಲವಾಗುತ್ತವೆ. ಇದು ನನಗೆ ಪ್ರಮುಖ ಅನಿಸಿತು.  ಈ ಸೌಲಭ್ಯ ಇದುವರೆಗೂ ನಾನು ಎಲ್ಲಿಯೂ ನೋಡಿಲ್ಲ. ಅದನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಮಾತ್ರ ಕಾಣಬಹುದು.

6. ಅಲ್ಲಿ ಭಾಷೆ ಒಂದು ಮುಖ್ಯ ಅಂಶ ಆಗುವುದಿಲ್ಲ ಎಂದು ಹೇಳಿದ್ದೀರಿ ಅದು ಹೇಗೆ ತಿಳಿಸಿ.

ಸಹನಾ : ಖಂಡಿತಾ. ಏಕೆಂದರೆ ಅಲ್ಲಿ ವಿದೇಶಗಳಿಂದ ಬಂದ ವ್ಯಕ್ತಿಗಳು ನಮ್ಮ ಅಭಿನಯ ಅಥವಾ ನಾವು ಮಾಡಿರುವ ಪ್ರಾಜೆಕ್ಟ್ ಬಗ್ಗೆ ಕೇಳಿದಾಗ ನಾವು ಇಂಗ್ಲಿಷ್‌ನಲ್ಲಿ ಉತ್ತರಿಸ ಬೇಕಾಗುತ್ತದೆ. ಆದರೆ ನಾನು ನನ್ನ ಮಾತೃಭಾಷೆಯಲ್ಲಿ ಅದನ್ನು ವಿವರಿಸಿದಾಗ ಆ ಸಂದರ್ಶಕರಿಗೆ ಅದು ಅರ್ಥವಾಯಿತು. ಅವರು ನನ್ನನ್ನು ಭಾಷೆಯಿಂದ ಅರಿತುಕೊಳ್ಳಲಿಲ್ಲ. ನನ್ನ ಭಾವನೆಗಳೇ ಅವರಿಗೆ ಅರ್ಥವಾದವು . ತದನಂತರ ಹಿಂದಿ ಭಾಷೆ ನನಗೆ ಮಾತನಾಡುತ್ತಾ ಮಾತನಾಡುತ್ತಾ ಒಗ್ಗಿತು.

7. ದೇಶದ ಇತರ  ರಾಜ್ಯದಲ್ಲಿ ಹಾಗೂ  ನಮ್ಮ ರಾಜ್ಯಇರುವ  ರಂಗಭೂಮಿಯ ಅವಕಾಶಗಳ  ಬಗ್ಗೆ ಹೇಳುವಿರಾ?

ಸಹನಾ : ಖಂಡಿತ. ನಮ್ಮ ರಾಜ್ಯದಲ್ಲಿ ರಂಗಾಯಣ, ನೀನಾಸಂ ಚಿತ್ರದುರ್ಗ ಜಿಲ್ಲೆಯ ಸಾಣೆ ಹಳ್ಳಿಯ ಶಿವ ಸಂಚಾರ ಇವುಗಳೆಲ್ಲವುಗಳಿಂದ ಪ್ರತಿ ವರ್ಷವೂ ಕಲಾವಿದರು ಹೊರ ಬರುತ್ತಿದ್ದಾರೆ. ಅಲ್ಲದೆ ಬಳ್ಳಾರಿ ಕೃಷ್ಣದೇವರಾಯ ಯುನಿವರ್ಸಿಟಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳಿವೆ  M. A in darama ಮತ್ತು ಮೈಸೂರು ಯುನಿವರ್ಸಿಟಿಯಲ್ಲಿಯು ಸಹಾ M. A in darama.

ಇದೆ .ಇಲ್ಲಿಂದಲೂ ಅನೇಕ ಕಲಾವಿದರು  ಪ್ರತಿ ವರ್ಷ ಹೊರ ಹೊರಬರುತ್ತಾರೆ. ಈ ಎಲ್ಲಾ ಕಲಾವಿದರು ಬದುಕಲು ಸಾಕಷ್ಟು ಅವಕಾಶಗಳಿವೆ. ನೀವು ಯಾವುದೇ ಒಂದು ಶಾಲೆಗೆ ಹೋದರು ವಾರಕ್ಕೆ ಒಂದು ತರಗತಿಯನ್ನು ತೆಗೆದುಕೊಂಡು ಕೆಲಸವನ್ನು ನಿರ್ವಹಿಸಬಹುದು. ಇದರಿಂದ ಕಲಾವಿದರು ನಿಮಗೆ ಸಿಗುತ್ತಾರೆ ಹಾಗೂ ಸಂಪರ್ಕವು ಹೆಚ್ಚುತ್ತದೆ ಅಥವಾ ನೀನಾಸಂ ಪಾಸ್ ಔಟ್ ಆಗಿ ಬಂದವರು ಬಹಳಷ್ಟು ಜನ ತಮ್ಮದೇ ಆದ ರಂಗ ತಂಡಗಳನ್ನು ನಿರ್ಮಿಸಿಕೊಳ್ಳುತ್ತಾರೆ ಇಂಥವರಿಗೆ ಕಲಾವಿದರ ಅವಶ್ಯಕತೆ ಇರುತ್ತದೆ.ಅವರು ಸಹ ಕಲಾವಿದರಿಗೆ ಸೂಕ್ತವಾದ ಸಂಭಾವನೆಯನ್ನು ನೀಡುತ್ತಾರೆ. ಇಲ್ಲಿ ಕಲಾವಿದರು ವರ್ಷಕ್ಕೆ ಮೂರು ನಾಟಕಗಳನ್ನು ಮಾಡಿ ಸೂಕ್ತ ಸಂಭಾವನೆಗಳನ್ನು ಪಡೆದುಕೊಳ್ಳಬಹುದು.

ಈ ರಂಗ ತಂಡಗಳು ನೇರವಾಗಿ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ funding ಮಾಡುತ್ತಾರೆ. ಕನ್ನಡ ಸಂಸ್ಕೃತಿ ಇಲಾಖೆ ಈ ರೀತಿಯಾಗಿ ಕಲಾವಿದರಿಗೆ ಸಹಾಯ ಮಾಡುತ್ತದೆ. ಮತ್ತೊಂದು ಅವಕಾಶ ಏನೆಂದರೆ ನಮ್ಮಲ್ಲಿ ಸಮ್ಮರ್ ಕ್ಯಾಂಪ್‌ಗಳು ನಡೆಯುತ್ತವೆ. ಈಗ ಅವುಗಳ ಪ್ರಾಮುಖ್ಯತೆ ಹೆಚ್ಚಾಗಿದೆ. ಈ ರಂಗಾಯಣ ಇರಬಹುದು ನೀನಾಸಂ ಇರಬಹುದು ಎಲ್ಲಾ ಕಡೆ ಸಮ್ಮರ್ ಕ್ಯಾಂಪುಗಳಲ್ಲಿ ಕಲಾವಿದರಿಗೆ ಹೆಚ್ಚು ಅವಕಾಶವಿದೆ. ನಟನೆಗಲ್ಲದೆ ಸೆಟ್ಟುಗಳನ್ನು  ಮಾಡುವುದು, ಮಾಸ್ಕ್ ಗಳನ್ನು ತಯಾರು ಮಾಡುವುದು ಹೀಗೆ ಸಾಕಷ್ಟು ರಂಗ ಚಟುವಟಿಕೆಗಳಲ್ಲಿ ಇವರು ತೊಡಗಿಸಿಕೊಂಡು ಉದ್ಯೋಗವನ್ನು ಪಡೆಯಬಹುದು. ಈ ಎಲ್ಲ ಸಾಧ್ಯತೆಗಳನ್ನು ಹಾಗೂ ನಮ್ಮ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದಂತೆ ಇತರ ರಾಜ್ಯಗಳಲ್ಲಿ ಇದೆ ಎಂದು ಹೇಳಲು ಆಗುವುದಿಲ್ಲ.

ವಸ್ತ್ರ ವಿನ್ಯಾಸದಲ್ಲಿ ನಿರತರಾಗಿರುವ ಸಹನಾ

8. ರಂಗಭೂಮಿಯ ಅವಕಾಶಗಳು ಮತ್ತು ರಂಗ ಕಲಾವಿದರಾಗಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿರುವ ಅಭ್ಯರ್ಥಿಗಳಿಗೆ ನಿಮ್ಮ ಮಾತು

ಸಹನಾ : ರಂಗ ಶಿಕ್ಷಣವನ್ನು ಮುಗಿಸಿ ಬಂದ ಎಲ್ಲರೂ ಮುಂಬೈಗೆ ಹೋಗುವುದು ಅಥವಾ ಬೆಂಗಳೂರಿಗೆ ಹೋಗಿ ಅಲ್ಲಿ ಅವಕಾಶಕ್ಕಾಗಿ ಅಲೆಯುತ್ತಿರುತ್ತಾರೆ. ನಿಜಕ್ಕೂ ರಂಗ ಕಲಾವಿದರಿಗೆ ಬಹಳಷ್ಟು ಅವಕಾಶಗಳಿವೆ. ಕರ್ನಾಟಕ ಸಂಸ್ಕೃತಿ ಇಲಾಖೆಯಿಂದ ಅವರಿಗೆ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಅವಕಾಶಗಳಿವೆ. ಇವುಗಳನ್ನು ಬಳಸಿಕೊಂಡು ಅವರು  ತಾವು ಇದ್ದ ಜಾಗದಲ್ಲಿ ಬೆಳೆಯುವ ಹಲವಾರು ಅವಕಾಶಗಳಿದ್ದರೂ ಯುವಜನತೆ ಈ ಕುರಿತು ಯೋಚಿಸುತ್ತಿಲ್ಲ….

ವಯಸ್ಸಿರುವವರೆಗೆ ಮಾತ್ರ ನೀವು ಸಿನಿಮಾ ಅಥವಾ ಕಿರುತೆರೆಯಲ್ಲಿ ವೃತ್ತಿ ನಿರ್ವಹಿಸಬಹುದು ಆದ್ರೆ  ವಯಸ್ಸು ಇಳಿದ ಮೇಲೆ ಅಲ್ಲಿ ಅವಕಾಶಗಳು ಬಹಳಷ್ಟು ಕಡಿತವಾಗುತ್ತವೆ. ಹಾಗೂ ದೂರದ ಊರಿನಲ್ಲಿ ಗೊತ್ತಿಲ್ಲದ ಜಾಗದಲ್ಲಿ ಬೆಳೆಯುವ, ಬದುಕುವ, ಹಾಗೂ  ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸಾಹಸ. ಇದು ಯುವಕ-ಯುವತಿಯರನ್ನು ಬಹಳಷ್ಟು ಕಠಿಣ ಪರೀಕ್ಷೆಗೆ ಒಳಪಡಿಸುತ್ತದೆ. ಇದರಿಂದಲೇ ಅವರು  ಮನೋವ್ಯಾಕುಲಕ್ಕೆ ತುತ್ತಾಗಿ ದುಷ್ಟ ಚಟಗಳಿಗೆ ಅಂಟಿಕೊಳ್ಳುತ್ತಾರೆ. ಕಲಾವಿದರಿಗೆ ಆತನ ದೇಹವೇ ಒಂದು ದೇಗುಲ. ಆ ದೇಗುಲ ಶಿಥಿಲವಾದರೆ, ಅಥವಾ ನಾಶವಾದರೆ ಕಲಾವಿದ ಎಲ್ಲಿ ಉಳಿಯುತ್ತಾನೆ?. ಇಂದು ನಾನು ಹಲವಾರು ಹಿರಿಯ ಕಲಾವಿದರ ಬದುಕಿನ ಅರಣ್ಯ ರೋಧನವನ್ನು ಹತ್ತಿರದಿಂದ ಕಂಡಿರುವೆ, ಕಾಣುತ್ತಲೂ ಇರುವೆ .

ಈ  ಕಾರಣದಿಂದ ನಾನು ಕಲಾವಿದರು ತಮ್ಮ ಬದುಕಿನ ಸಾಧ್ಯತೆ ಮತ್ತು ಅಸಾಧ್ಯತೆ ಬಗ್ಗೆ ತಾವೇ ಖುದ್ದಾಗಿ ಯೋಚಿಸುವುದು ಅಗತ್ಯವಿದೆ ಮತ್ತು ಅನಿವಾರ್ಯವಿದೆ  ಎಂದು ಹೇಳಲು ಬಯಸುತ್ತೇನೆ. ಇದು ಸಲಹೆ. ನಾನು ಇದನ್ನು ಯಾರಿಗೂ ಹೇರಿಕೆ ಮಾಡುವುದಿಲ್ಲ. ಈ ಮಾತು ಎಲ್ಲರಿಗೂ ಅಲ್ಲ, ಇದು ನನ್ನ ಅನುಭವದ ಕಥನ..

9. ನೀನಾಸಂ ಕುರಿತು..

ಕೆ.ವಿ ಸುಬ್ಬಣ್ಣನವರು ಅಂದು ಇಡೀ ಕರ್ನಾಟಕವನ್ನು ಸುತ್ತಿ ನೀನಾಸಂನ್ನು ಕಟ್ಟದಿದ್ದರೆ ಇಂದು ಪ್ರತಿ ಊರಿನಲ್ಲಿ ಕಲಾವಿದರು ನಮಗೆ ಸಿಗುತ್ತಿರಲಿಲ್ಲ. ಅಲ್ಲದೆ ನೀನಾಸಂ ಒಂದು  ರಂಗ ಶಾಲೆ. ಅಲ್ಲಿ ಒಬ್ಬ ಕಲಾವಿದರಿಗೆ ಬೇಕಾದ ಎಲ್ಲ ತರಬೇತಿಯನ್ನು ಅದು ನೀಡುತ್ತದೆ.

ಇಲ್ಲಿ ಕಂಪನಿ ನಾಟಕ, ಜಾನಪದ ನಾಟಕ, ಆಧುನಿಕ ನಾಟಕಗಳ ಸ್ಪರ್ಶ ಕಲಾವಿದನಿಗೆ ಸಿಗುತ್ತದೆ. ಜೊತೆಗೆ ಇಲ್ಲಿ hipson ನಾಟಕ, ಷೇಕ್ಸ್‌ಪಿಯರ್ ನಾಟಕಗಳ ಪರಿಚಯವಾಗುತ್ತದೆ .ಜೊತೆಗೆ ವಿದ್ಯಾರ್ಥಿಗಳನ್ನು ಇಲ್ಲಿ ಓದಿಗೆ ಮಾತ್ರ ಸೀಮಿತ ಮಾಡದೆ, ಎಲ್ಲ ರೀತಿಯಿಂದಲೂ ತಮ್ಮ ರಂಗ ಶಾಲೆಯಲ್ಲಿ ತರಬೇತಿಯನ್ನು ನೀಡಿ ಕಲಾವಿದರನ್ನಾಗಿ ಮಾಡಿ ಹೊರ ಕಳಿಸುತ್ತದೆ. ಆಗ ಅಲ್ಲಿಂದ ಬಂದವರು ರಂಗ ತಂಡಗಳನ್ನು ಕಟ್ಟಿಕೊಂಡು ಅಥವಾ ಮತ್ಯಾವುದೋ ರಂಗ ತಂಡಗಳಲ್ಲಿ ಸೇರಿಕೊಂಡು ತಮ್ಮ ಕಾರ್ಯಗಳನ್ನು ನಿರ್ವಹಿಸಿಕೊಳ್ಳುತ್ತಾರೆ . ಅಲ್ಲದೆ ಒಬ್ಬ ಕಲಾವಿದರಲ್ಲಿ ಆಸಕ್ತಿಯನ್ನು ಮೂಡಿಸುವುದು ಸಹ ಒಂದು ಮಹತ್ವದ ವಿಚಾರ. ಇದನ್ನು ಸಹ ನೀನಾಸಂ  ಸಾಧಿಸಿ ಕೊಡುತ್ತದೆ. ಇಂಥ ಒಂದು ಸಾಧ್ಯತೆಯನ್ನು ಇಡೀ ಕರ್ನಾಟಕದ ಜನತೆಗೆ ನೀನಾಸಂ ನೀಡಿದೆ. ಇದರ ಹಿಂದೆ  ಸುಬ್ಬಣ್ಣನವರ ಅಪಾರ ಪರಿಶ್ರಮವಿದೆ ಎಂದು ನಾನು ಹೇಳುತ್ತೇನೆ. ನೀನಾಸಂ  ಏನು ಮಾಡುತ್ತದೆ ಎನ್ನುವುದಕ್ಕಿಂತ ಅದು ರಂಗ ಕಲಾವಿದರನ್ನು ಹುಟ್ಟುಹಾಕುತ್ತದೆ ಎಂಬುದನ್ನು ಇಲ್ಲಿ ಗಮನಾರ್ಹವಾಗಿ ನಾವು ನೋಡಬೇಕಾಗಿದೆ.

10. ಕಲಾವಿದರು ಎಂದರೆ ನಿಮ್ಮ ಪ್ರಕಾರ ಯಾರು? ರಂಗಭೂಮಿ ಕಲಾವಿದರಾಗಿರಲಿ ಅಥವಾ ಸಿನಿಮಾ ಆಗಿರಲಿ ಸಮಾಜ ಅವರನ್ನು ಬಹಳ ವಿಶೇಷವಾಗಿ ಗೌರವಿಸುತ್ತದೆ . ನಿಮ್ಮ ಅಭಿಪ್ರಾಯವೇನು. ?

ಸಹನಾ : ಯಾರೇ ಕಲಾವಿದರಾಗಲಿ ನಾವು ನಮ್ಮ ಬದುಕಿಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಅದನ್ನು ಕೇವಲ ಅಭಿನಯಕ್ಕಾಗಿ ಮಾಡಿದರೆ ಅದು ಜನರಿಗೆ ಮುಟ್ಟುವುದಿಲ್ಲ. ನಾನು ಬಾಲ್ಯದಿಂದಲೂ ಕುಡಿತ ತಪ್ಪು ಎಂದು ಬೀದಿ ನಾಟಕಗಳಲ್ಲಿ ಅಭಿನಯ ಮಾಡುತ್ತಾ ಅವುಗಳ ಭಿತ್ತಿ ಪತ್ರಗಳನ್ನು ಹಿಡಿದು ಹೇಳುತ್ತಿದ್ದೆ. ಆದರೆ ರಂಗ ತರಬೇತಿ ಮತ್ತು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾನು ಕಂಡ ಹಾಗೂ ಇಂದಿನ ಕಲಾವಿದರಲ್ಲಿ ಕಾಣುತ್ತಿರುವ ಅಂಶವೇನೆಂದರೆ ಕುಡಿತದ ಚಟಕ್ಕೆ ಒಳಗಾಗಿರುವುದು. ಅಲ್ಲದೆ ಕಲಾವಿದರು ಬೇರೆ ಬೇರೆ ಒತ್ತಡಗಳಿಂದ ಬೇರೆ ಬೇರೆ ಚಟಗಳನ್ನು ಬೆಳೆಸಿಕೊಂಡು ಬಳಲುತ್ತಾ,  ನಾನು ಅಭಿನಯದಿಂದ ಸಮಾಜವನ್ನು ಬದಲು ಮಾಡುತ್ತೇನೆ ಅಥವಾ ಜನರನ್ನು ತಟ್ಟುತ್ತೇನೆ ಎಂದರೆ  ಜನರಿಗೆ ಅದು ಮುಟ್ಟುವುದಿಲ್ಲ. ಕಲಾವಿದನಿಗೆ ದೇಹವೇ ದೇಗುಲ. ಆ ದೇಗುಲ ಸುಸಜ್ಜಿತವಾಗಿರಬೇಕು ಎಂದರೆ ನಮ್ಮ ಮನಸ್ಸು ಮತ್ತು ಆರೋಗ್ಯ ಎರಡು ಬಹಳ ಮುಖ್ಯ ಅಲ್ಲವೇ.

ಮಕ್ಕಳೊಂದಿಗೆ ಸಹನಾ

11. ಪುರುಷ ಪ್ರಧಾನತೆ ಅಥವಾ male domination ಕುರಿತು ನಿಮ್ಮ ರಂಗಭೂಮಿಯ ಅನುಭವ ಹೇಳುವಿರಾ

ಸಹನಾ : ಈ  male domination ಗಿಂತ ನನಗೆ ಹೆಚ್ಚು ಪರಿಚಯವಾಗಿರುವುದು ಜಾತಿ ತಾರತಮ್ಯ. ನಾನು ಕಲಿಯುವಾಗ ಅದು ನನ್ನ ಅನುಭವಕ್ಕೆ ಬಂದಿಲ್ಲ. ಆದರೆ ಬೇರೆಯವರು ಅನುಭವಕ್ಕೆ ಬಂದವರು ಹೇಳಿದ್ದಾರೆ ಅಂತೆ. ಈಗ ದೆಹಲಿಯ ಎನ್ಎಸ್ ಡಿ ಸಹ ಇದೇ ವಾತವರಣದಿಂದ ಕೊಡಿದೆ . ಮುಸ್ಲಿಮರು ಎಂದ ತಕ್ಷಣ ಅವರಿಗೆ ಈ ಪಾತ್ರಗಳನ್ನು ಕೊಡಬೇಕು, ಇಂಥ ಪಾತ್ರಗಳನ್ನು ಕೊಡಬಾರದು ಎಂದು  ನಿರ್ಧರಿಸುತ್ತಾರೆ. ಇದನ್ನು ನೋಡಿದಾಗ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಉಂಟಾಗಿದೆ. ಹಾಗೂ ನೀನಾಸಂ ಇರಬಹುದು ದೇಶದ ಬೇರೆ ಬೇರೆ ರಂಗ ತರಬೇತಿಗಳಿರಬಹುದು ಅಲ್ಲಿನ ಮುಖ್ಯಸ್ಥರ ನಿರ್ಧಾರದಂತೆ ಉತ್ತಮ ವಾತಾವರಣವನ್ನು ನಾವು ಕಾಣಬಹುದು. ಇದಕ್ಕೆ ಅಲ್ಲಿ ಹೇಗೆ ಯಾರು ನಡೆಸುತ್ತಾರೆ ಎಂಬುದು ಸಹ ಕಾರಣವಾಗುತ್ತದೆ. ಅದರೆ ಅಂದಿನ ನನ್ನ ಓದಿನ  ಅನುಭವವೇ ಬೇರೆ ಇತ್ತು ಅದನ್ನು ಮರೆಯಲು ಸಾಧ್ಯವೇ ಇಲ್ಲ.

12. ಈ ಬಗ್ಗೆ ಸ್ವಲ್ಪ ವಿವರಿಸುವಿರಾ.

ಸಹನಾ : ಖಂಡಿತ. ಅಲ್ಲಿನ ಅಧ್ಯಕ್ಷರು ಅಥವಾ ಮುಖ್ಯಸ್ಥರ ನಿರ್ಧಾರಗಳು ಒಂದು ಸಂಸ್ಥೆಯನ್ನು ಬೆಳೆಸುವಲ್ಲಿ ಹಾಗೂ ಉಳಿಸುವಲ್ಲಿ ಸಹಕಾರಿಯಾಗುತ್ತವೆ. ನಮ್ಮ ಈ ಕ್ಷೇತ್ರದಲ್ಲಿ ಪಾಠವನ್ನು ಕೇಳುವುದಲ್ಲ. ರಂಗಭೂಮಿ ಶಿಕ್ಷಣ ಎಂದರೆ ಅದನ್ನು ಅನುಭವಿಸಬೇಕು, ನಟನೆ ಮಾಡಬೇಕು, ಹಲವಾರು ಪ್ರಯೋಗಗಳಿಗೆ ನಟರನ್ನು ಒಳಪಡಿಸಬೇಕು. ಹೀಗೆ ಇರುವಾಗ ಅಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದ  ಮಕ್ಕಳು ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡು ಹೊಸ ಹೊಸ ವಿಚಾರಗಳನ್ನು ತಿಳಿದು ವಿಕಾಸವಾಗುತ್ತಾರೆ. ಆದರೆ ಅಲ್ಲಿ ನಾವು ಇದ್ದ ವಾತಾವರಣದಲ್ಲಿ ಕಂಡ ತಾರತಮ್ಯ, ಜಾತಿ ಭೇದ, ಇವುಗಳನ್ನೆಲ್ಲ ಮತ್ತೆ ರಂಗತರಬೇತಿಯಲ್ಲಿ ಕಂಡಾಗ ಕಲಾವಿದರು ವಿಕಾಸಹೊಂದಲು ಸಾಧ್ಯವಿಲ್ಲ. ಹೊಸ ಪ್ರಯೋಗಗಳನ್ನು ಮಾಡಲು ಅಥವಾ ಸಮಾಜದಲ್ಲಿನ ಸೂಕ್ಷ್ಮತೆಯನ್ನು ಅರಿತು  ಕೆಲಸ ಮಾಡುವ ಮನೋಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ.

ನನ್ನ ಎನ್. ಎಸ್ .ಡಿ ತರಬೇತಿಯಲ್ಲಿ  ಕಲಿಕೆಗೆ  ಮುಕ್ತ ಅವಕಾಶವಿತ್ತು. ಅಲ್ಲಿ ನಟನೆ, ಕಲಿಕೆ ಹೊರತು  ಬೇರೆ ಚರ್ಚೆ ಇರುತ್ತಿರಲಿಲ್ಲ. ಬೇರೆ ವಿದೇಶಗಳಿಂದ ನಟರು ಆಗಮಿಸುತ್ತಿದ್ದರು. ಹಿಂದಿಯ ಚಲನಚಿತ್ರ ರಂಗದಿಂದಲೂ ನಟರು ಆಗಮಿಸುತ್ತಿದ್ದರು ಹಾಗೂ ದೇಶದ ನಾನಾ ಭಾಗಗಳಿಂದ ನಟರು, ನಿರ್ದೇಶಕರು ಆಗಮಿಸಿ ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲಿನ ಪ್ರಯೋಗಗಳು ಹಾಗೂ ನಮ್ಮ ಚಿಂತನೆಗಳು ಇಂದು ಸಹ ನನ್ನ ಬದುಕನ್ನು ನಾನು ವಿಸ್ತರಿಸಿಕೊಳ್ಳಲು ಸಹಾಯಕವಾಗಿವೆ ಎಂದು ನಾನು ಹೇಳುತ್ತೇನೆ.

13. ನಿಮ್ಮ ಮಾತುಗಳನ್ನು ಕೇಳಿದಾಗ ಮತ್ತೊಂದು ಪ್ರಶ್ನೆ ಕೇಳಬೇಕು ಎನಿಸಿದೆ, ಹೆಣ್ಣಿನ ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಹಾಗೂ ಆ ನಿರ್ಧಾರವನ್ನು ಸಾಕಾರ ಗೊಳಿಸಿಕೊಳ್ಳುವುದರ  ಮಹತ್ವವೇನು?

ಸಹನಾ : ಸತ್ಯ . ಅದರೆ ಮಹತ್ವ ಎನ್ನುವುದಕ್ಕಿಂತ  ಅವಶ್ಯಕ ಮತ್ತು ಅನಿವಾರ್ಯ ಎನಿಸುತ್ತದೆ… ಯಾಕೆಂದರೆ ನನ್ನ ಬದುಕಿನ ನಿರ್ಧಾರಗಳನ್ನು ಎಂದಿಗೂ ನಾನೇ ಯೋಚಿಸಿ ತೆಗೆದುಕೊಂಡೆ. ಇದಕ್ಕೆ ನನ್ನ ಕುಟುಂಬದ ಬೆಂಬಲ ಸದಾ ಇದ್ದೆ ಇದೆ.

ಬಹುಷಃ ಇದು ಎಲ್ಲ  ಹೆಣ್ಣು ಮಕ್ಕಳ ಬದುಕಿಗೂ ಸಾಧ್ಯವಾಗುವುದಿಲ್ಲ….ಬದುಕಿನ ಹಲವು ತಿರುವುಗಳಲ್ಲಿ ನಮ್ಮ ದೃಢ ನಿರ್ಧಾರ ಹಾಗೊ ಏಳು ಬೀಳುಗಳಿಗೆ ನಾವೇ ಹೊಣೆಗಾರಿಕೆ ತೆಗೆದು ಕೊಳ್ಳಬೇಕು. ಏಕೆಂದರೆ ಓದು  ಮುಗಿದ ನಂತರ ಪಿ ಎಚ್ ಡಿ ಮಾಡಬೇಕೆಂಬ ನಿರ್ಧಾರವು ನನ್ನದೇ ಆಗಿತ್ತು. ಕುಟುಂಬ ಹಾಗೂ ಸ್ನೇಹಿತರು ಎಲ್ಲರೂ ನಾನು ಪಿ ಎಚ್ ಡಿ ಮಾಡುವುದು ಬೇಡ ಎಂದು ಹೇಳಿದ್ದರು. ಆದರೆ ನಾನು ನನ್ನ ನಿರ್ಧಾರ ದಿಂದ ಹಿಂದೆ ಸರಿಯಲಿಲ್ಲ

ಪಿ ಎಚ್ ಡಿ ಗೆ ಯಾವ ವಿಷಯವನ್ನು ತೆಗೆದುಕೊಳ್ಳಬೇಕು?  ಮುಂದಿನ ದಾರಿಯೇನು? ಎಂಬೆಲ್ಲಾ ನಿರ್ಧಾರಗಳು ಯೋಚನೆಗಳು ನನ್ನದೇ ಆಗಿವೆ . ಮೊದಲು ನಮ್ಮ ನಿರ್ಧಾರಗಳು ಅಥವಾ ನಮ್ಮ ಯೋಚನೆಗಳು ನಮಗೆ ಖಚಿತವಾಗದ ಹೊರತು ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲ. ಇತರರ ನಿರ್ಧಾರಗಳ ಮೇಲೆ ನಮ್ಮ ಬದುಕನ್ನು ನಾವು ವಿಸ್ತರಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವ, ಆಯ್ಕೆಯ ಸ್ವಾತಂತ್ರ್ಯವನ್ನು ಮೊದಲು ಕುಟುಂಬವೆ ಅವಳಿಗೆ ನೀಡಬೇಕು. ಆಗ ಮಾತ್ರ  ಹೆಣ್ಣಿನ ಬದುಕಲ್ಲಿ  ಬದಲಾವಣೆ ಸಾಧ್ಯ.

14. ನೀವು ಯಾವುದನ್ನು ನಿಮ್ಮ ಅಸ್ತಿತ್ವ ಎಂದು ವ್ಯಾಖ್ಯಾನಿಸುತ್ತೀರಿ?.

ಖಂಡಿತವಾಗಿಯೂ ಬೀದಿ ನಾಟಕವೇ ನನ್ನ ಅಸ್ತಿತ್ವ. ನಾನು ಬೆಳೆದು ಬಂದದ್ದೇ ಅದರಿಂದ. ನನ್ನ ಇತರ ನಾಟಕ, ಹಾಗೂ ಅಭಿನಯದ ಕಲ್ಪನೆಗಳು  ರೂಪಗೊಂಡಿದ್ದೆ ಆ ನನ್ನ ಬಾಲ್ಯದ ಬೀದಿ ನಾಟಕದಿಂದ. ಬಹಳಷ್ಟು ಜನ ನಾನು ಎನ್ ಎಸ್ ಡಿ ಯನ್ನು ಮುಗಿಸಿಕೊಂಡು ಒಂದು ಬೀದಿ ನಾಟಕದಲ್ಲಿ ಭಾಗವಹಿಸಿದಾಗ ಅಚ್ಚರಿ ಎನ್ನುವಂತೆ ನೋಡಿದರು. ಹಾಗೂ ಬೀದಿ ನಾಟಕವನ್ನು ಈಗಲೂ ನಿಕೃಷ್ಟವಾಗಿ ಕಾಣುತ್ತಾರೆ. ಯಾಕೆ ಹಾಗೆ ಎಂಬುದು ನನಗೆ ಗೊತ್ತಿಲ್ಲ. ಬೀದಿ ನಾಟಕದ ಇತಿಹಾಸವನ್ನು ನನಗೆ ನನ್ನ ಮಾವನವರು ಹೇಳಿದ್ದಾರೆ.  ಅದೇನೆಂದರೆ ದೆಹಲಿಯಲ್ಲಿ ಜನ್ನಾಟಂ ಎನ್ನುವ  ಸಂಘದ ಬೀದಿನಾಟಕ ಒಂದನ್ನು ಸರ್ಕಾರ ನಿಲ್ಲಿಸಬೇಕೆಂಬ ಪ್ರಯತ್ನ ಮಾಡಿ ಆ ದಿನ ನಾಟಕವನ್ನು ಆಡುತ್ತಿದ್ದ ಕಲಾವಿದ ಸಫ್ದಾರ್ ಹಶ್ಮಿ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು. ಆದರೆ ಮಾರನೇ ದಿನ ಅದೇ ವೇದಿಕೆಯಲ್ಲಿ ಅದೇ ನಾಟಕವನ್ನು ಅವರ ಪತ್ನಿ ಮೊಲೊಯ್ಶ್ರೀ ಹಶ್ಮಿಯವರು ಅವರು ನಡೆಸಿಕೊಡುತ್ತಾರೆ.

ಒಂದು ಬೀದಿ ನಾಟಕದ ಬಗ್ಗೆ ಭಯವಿದ್ದರಿಂದ ತಾನೇ ನಟನನ್ನು ಕೊಲ್ಲಿಸಿದ್ದು? ಹಾಗಾದರೆ ಬೀದಿ ನಾಟಕಕ್ಕೆ ಇರುವ ಶಕ್ತಿ ಎಂತದ್ದು? ಇಂದು ಅದೇ ಬೀದಿ ನಾಟಕ ಆ ಪತಿ ಇಲ್ಲದ ಹೆಣ್ಣನ್ನು ಶಕ್ತಿಯುತವಾಗಿ ಬೆಳಸಿ ನಿಂತಿದೆ. ನನಗೆ ತಿಳಿದಿರುವಂತೆ ಆಂಧ್ರಪ್ರದೇಶದಲ್ಲೂ ಪ್ರಜಾನಾಟ್ಯ ಮಂಡಳಿ ಇದೆ. ಇದನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ಇದರಿಂದ ಬೇಕಾದಷ್ಟು ಜನಜಾಗೃತಿಯನ್ನು ಅವರು ಮೂಡಿಸುತ್ತಿದ್ದಾರೆ ಹಾಗೂ ಇತರ ಕಲಾವಿದರಿಗೆ ಕೆಲಸ ನೀಡಿದ್ದಾರೆ. ಇದರಿಂದ ಕುಟುಂಬಗಳು ಬದುಕಿವೆ. ಇದೆ ನನ್ನ ಬೀದಿ ನಾಟಕದ ಶಕ್ತಿ. ಹೀಗಿರುವಾಗ ಬೀದಿ ನಾಟಕದ ಬಗ್ಗೆ ನನಗೆ ಹೆಮ್ಮೆ ಇದೆ .

ನಿಮ್ಮ ಎಲ್ಲ ಕನಸುಗಳು ನನಸಾಗಲಿ, ಧನ್ಯವಾದಗಳು ಮೇಡಂ

ಸಹನಾ : ನಿಮಗೂ ಸಹ ಧನ್ಯವಾದಗಳು.

ಈ ಎಲ್ಲ ಮಾತುಗಳು ಮುಗಿಯುವ  ಹೊತ್ತಿಗೆ ಮತ್ತೆ ಸಂಜೆಯಾಯಿತು. ಮೋಡ ಮುಚ್ಚಿದ ವಾತಾವರಣ ಮುಂದುವರಿಯುತ್ತಿತ್ತು. ಮತ್ತೆ ರಿಯಾಜ್ ಸರ್ ಅವರ ರುಚಿಕರವಾದ ಚಹಾ ಸವಿದು ದಂಪತಿಗಳಿಗೆ  ಧನ್ಯವಾದಗಳನ್ನು ಹೇಳಿ ಹೊರಬಂದೆವು.

ರೇಶ್ಮಾ ಗುಳೇದಗುಡ್ಡಾಕರ್

ಯುವ ಬರಹಗಾರ್ತಿ

ಇದನ್ನೂ ಓದಿ-ದರ್ಗಾಕ್ಕೆ ಬಾಣ ಬಿಟ್ಟ ಸನ್ನೆ; ಮೆರೆದ ಮತಾಂಧತೆ

More articles

Latest article

Most read