ದೆಹಲಿ ಸ್ಫೋಟ: ಆತಂಕದಲ್ಲಿ ಸಾರ್ವಜನಿಕರು; ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್‌ ಆಗ್ರಹ

Most read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಹತ್ತಿರ ಸಂಭವಿಸಿರುವ ಸ್ಫೋಟದಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಪಡಿಸಿದೆ.

ಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್‌ ಒತ್ತಾಯಿಸಿದ್ದು, ದೇಶದ ರಾಜಧಾನಿ ಯಲ್ಲಿ ಇಂತಹ ಘಟನೆ ನಡೆದಿರುವುದರಿಂದ ಜನರಲ್ಲಿ ಭಯ ಉಂಟಾಗಿದೆ ಎಂದು ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಇಂದು ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಮಾತನಾಡಿ, ಸ್ಫೋಟ ಸಂಭವಿಸಿ 18 ಗಂಟೆಗಳು ಕಳೆದಿದ್ದರೂ ಇದುವರೆಗೂ ಇದು ಭಯೋತ್ಪಾದಕರ ದಾಳಿಯೇ ಅಲ್ಲವೇ ಎನ್ನುವುದೇ ತಿಳಿದಿಲ್ಲ. ಆದ್ದರಿಂದ ಸಾರ್ವಜನಿಕರು ಗೊಂದಲದಲ್ಲಿದ್ದು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕ್ಷಣದವರೆಗೂ ಸರ್ಕಾರವಾಗಲೀ, ಗೃಹ ಸಚಿವಾಲಯವಾಗಲೀ ಅಥವಾ ಪೊಲೀಸರಾಗಲೀ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ದೇಶದ ರಾಜಧಾನಿಯಲ್ಲಿಯೇ ಇಂತಹ ಘಟನೆ ಸಂಭವಿಸಿರುವುದರಿಂದ ಇಡೀ ದೇಶದ ಜನತೆ ಸಹಜವಾಗಿಯೇ ಭಯ ಮತ್ತು ಆತಂಕಕ್ಕೆ ಒಳಗಾಗುವುದು ಸಹಜ ಎಂದಿದ್ದಾರೆ.

ಭದ್ರತಾ ಕಾರಣಗಳಿಗಾಗಿ ಎಲ್ಲಾ ಮಾಹಿತಿಗಳನ್ನು ಬಹಿರಂಗಪಡಿಸಬಾರದು ಎನ್ನುವುದು ನಮಗೂ ತಿಳಿದಿದೆ. ಹಾಗೆಂದು ಒದೊಂದು ಇಲಾಖೆ ಒಂದೊಂದು ರೀತಿಯ ಮಾಹಿತಿ ನೀಡುತ್ತಿದ್ದರೆ ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು, ಪೊಲೀಸರು ಸುದ್ದಿಗೋಷ್ಠಿ ನಡೆಸಿ ಸಂಶಯ ನಿವಾರಣೆ ಮಾಡಬೇಕು ಎಂದು ತಿಳಿಸಿದರು.

More articles

Latest article