ಮಾಲೂರು ಕ್ಷೇತ್ರ: ನ.11ರಂದು ಮತಗಳ ಮರುಎಣಿಕೆ: ಗೆಲುವು ಯಾರ ಮಡಿಲಿಗೆ?

Most read

ಕೋಲಾರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ನ.11ರಂದು ನಡೆಯಲಿದೆ. ಕರ್ನಾಟಕ ಚುನಾವಣಾ ಆಯೋಗವು, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚನೆ ನೀಡಿದೆ.

ಈ ಪತ್ರದ ಬೆನ್ನಲ್ಲೇ ಮರುಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೋಲಾರ ನಗರ ಹೊರವಲಯದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮರುಎಣಿಕೆ ನಡೆಸಬಹುದೇ ಎಂದು ಪರಿಶೀಲನೆ ನಡೆಸಿದೆ. ಇತರೆ ಶಾಲಾ ಕಾಲೇಜುಗಳನ್ನೂ  ಶೋಧನೆ ಮಾಡುತ್ತಿದೆ.

ಮರುಎಣಿಕೆಗೆ ಆಗ್ರಹಿಸಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಕೋರ್ಟ್‌ ಮೆಟಿಲೇರಿದ್ದರು.  

2023ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಕೆವೈ ನಂಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದರೆ ಮತಗಳ ಎಣಿಕೆ ಸರಿಯಾಗಿ ನಡೆದಿಲ್ಲ. ಹೀಗಾಗಿ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಮಂಜುನಾಥ್ ಗೌಡ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿ ಮರುಎಣಿಕೆಗೆ ಆದೇಶಿಸಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿ ಮರುಎಣಿಕೆಗೆ ಸುಪ್ರೀಂಕೋರ್ಟ್​ ಸಹ ಆದೇಶ ಹೊರಡಿಸಿತ್ತು.

More articles

Latest article