ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಡೀಪ್-ಟೆಕ್ ವಲದಲ್ಲಿ 16,000 ಕೋಟಿ ರೂ ಹೂಡಿಕೆ; 6000 ಉದ್ಯೋಗ ಸೃಷ್ಟಿ; ಪ್ರಿಯಾಂಕ್‌ ಖರ್ಗೆ ಮಾಹಿತಿ

Most read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಭೆಯಲ್ಲಿ, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಕ್ಲೀನ್ ಮೊಬಿಲಿಟಿ ಮತ್ತು ಡೀಪ್-ಟೆಕ್ ವಲಯಗಳಲ್ಲಿ ಆರು ಪ್ರಮುಖ ತಂತ್ರಜ್ಞಾನ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. ಯಾವ ಯಾವ ಕಂಪನಿ ಎಷ್ಟು ಹಣ ಹೂಡಿಕೆ ಮಾಡಲಿದೆ ಮತ್ತು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕರ್ನಾಟಕವು ತಂತ್ರಜ್ಞಾನ ಹೂಡಿಕೆಗಳಿಗೆ ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ಭವಿಷ್ಯದ ತಾಣವಾಗಿ ಹೊರಹೊಮ್ಮಿದೆ. ಇದು ನಮ್ಮ ನೀತಿಯ ಸ್ಪಷ್ಟತೆ, ಆಳವಾದ ಪ್ರತಿಭೆಯ ನೆಲೆ ಮತ್ತು ಉದ್ಯಮದ ವೇಗಕ್ಕೆ ಸಾಕ್ಷಿಯಾಗಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

▪️ತೇಜಸ್ ನೆಟ್‌ ವರ್ಕ್ಸ್ ಲಿಮಿಟೆಡ್ : ಬೆಂಗಳೂರಿನಲ್ಲಿ ಸುಧಾರಿತ ದೂರಸಂಪರ್ಕ ಮತ್ತು ರಕ್ಷಣಾ ಸಂವಹನ ಉತ್ಪನ್ನಗಳಿಗಾಗಿ ತನ್ನ ವಿನ್ಯಾಸ ಮತ್ತು ಉತ್ಪಾದನಾ ಕಾರ್ಯಾಚರಣೆಯನ್ನು ವಿಸ್ತರಿಸಲಿದ್ದು, ₹542 ಕೋಟಿ ಹೂಡಿಕೆಯೊಂದಿಗೆ 1,312 ಉದ್ಯೋಗಗಳನ್ನು ಸೃಷ್ಟಿಸಲಿದೆ.

▪️ವಾಯು ಅಸೆಟ್ಸ್ ಪ್ರೈ. ಲಿಮಿಟೆಡ್ : ಚಾಮರಾಜನಗರದಲ್ಲಿ ₹1,251 ಕೋಟಿ ಹೂಡಿಕೆಯೊಂದಿಗೆ ಪ್ರಿಂಟ್ ಸರ್ಕ್ಯೂಟ್ ಬೋರ್ಡ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದ್ದು, 1,912 ಉದ್ಯೋಗಗಳನ್ನು ಸೃಷ್ಟಿಸಲಿದೆ.

▪️ಲ್ಯಾಮ್ ರಿಸರ್ಚ್ ಅಂಗಸಂಸ್ಥೆಯಾದ ಸಿಲ್ಫೆಕ್ಸ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈ. ಲಿಮಿಟೆಡ್ ಬೆಂಗಳೂರು ಗ್ರಾಮೀಣದಲ್ಲಿ ಸೆಮಿಕಂಡಕ್ಟರ್ ಉತ್ಪನ್ನಗಳಿಗಾಗಿ ಸಿಲಿಕಾನ್ ಘಟಕ ಸೌಲಭ್ಯವನ್ನು ಸ್ಥಾಪಿಸಲಿದ್ದು, ₹9,298 ಕೋಟಿ ಹೂಡಿಕೆ ಮಾಡಲಿದೆ ಮತ್ತು 806 ಉದ್ಯೋಗಗಳನ್ನು ಸೃಷ್ಟಿಸಲಿದೆ.

▪️ಸ್ಕ್ನೈಡರ್ ಎಲೆಕ್ಟ್ರಿಕ್ ಐಟಿ ಬ್ಯುಸಿನೆಸ್ ಇಂಡಿಯಾ ಪ್ರೈ. ಲಿಮಿಟೆಡ್ : ಸ್ಮಾರ್ಟ್ ಎನರ್ಜಿ ಸಿಸ್ಟಮ್ಸ್, ಬ್ಯಾಟರಿ ನಿರ್ವಹಣೆ ಮತ್ತು ಡೇಟಾ ಮೂಲಸೌಕರ್ಯ ಪರಿಹಾರಗಳನ್ನು ವಿಸ್ತರಿಸಲು ₹1,520 ಕೋಟಿ ಹೂಡಿಕೆ ಮಾಡಲಿದ್ದು, ಬೆಂಗಳೂರಿನಲ್ಲಿ 550 ಉದ್ಯೋಗಗಳನ್ನು ಸೃಷ್ಟಿಸಲಿದೆ.

▪️ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ. ಲಿಮಿಟೆಡ್ : ಬೆಂಗಳೂರಿನ ಜಿಗಣಿ ಸೌಲಭ್ಯದಲ್ಲಿ ಗ್ಯಾಸೋಲಿನ್ ಮತ್ತು ಹೈಬ್ರಿಡ್ ಎಂಜಿನ್‌ಗಳನ್ನು ತಯಾರಿಸಲು ₹1,330 ಕೋಟಿ ಹೂಡಿಕೆ ಮಾಡಲಿದೆ, ಇದು 550 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಸಂಚಾರ ವ್ಯವಸ್ಥೆಗೆ ಬೆಂಬಲ ನೀಡಲಿದೆ.

▪️QPIAI ಇಂಡಿಯಾ ಪ್ರೈ. ಲಿಮಿಟೆಡ್ : ಬೆಂಗಳೂರು ಗ್ರಾಮೀಣದಲ್ಲಿ ₹1,136 ಕೋಟಿ ಹೂಡಿಕೆಯೊಂದಿಗೆ ಡೇಟಾ ಸಂಸ್ಕರಣೆ ಮತ್ತು ಹೋಸ್ಟಿಂಗ್‌ಗಾಗಿ ಕ್ವಾಂಟಮ್ ಸುಪ್ರಿಮಸಿ ಕೇಂದ್ರವನ್ನು ಸ್ಥಾಪಿಸಲಿದೆ, ಇದು 200 ಉನ್ನತ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

More articles

Latest article