Most read

ಮಾಜಿ ಪ್ರಧಾನಿ ಡಾ, ಮನಮೋಹನ್‌ ಸಿಂಗ್‌ 93ನೇ ಜನ್ಮದಿನ: ಆರ್ಥಿಕ ಶಿಲ್ಪಿ ಎಂದು ಬಣ್ಣನೆ

 

 

ನವದೆಹಲಿ: ಮಾಜಿ ಪ್ರಧಾನಮಂತ್ರಿ, ದಿವಂಗತ ಡಾ. ಮನಮೋಹನ್ ಸಿಂಗ್ ಅವರ 93ನೇ ಜನ್ಮದಿನವನ್ನುಇಂದು ಆಚರಿಸಲಾಗುತ್ತಿದೆ. ಕಾಂಗ್ರೆಸ್‌ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಎಐಸಿಸಿ  ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಂಗ್ ಸೇರಿದಂತೆ ಅನೇಕ ಗಣ್ಯರು ಅವರನ್ನು ಸ್ಮರಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರು ಎಕ್ಸ್‌ ನಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಬಲ ಆರ್ಥಿಕತೆಯನ್ನು ನಿರ್ಮಿಸಲು ಭದ್ರ ಬುನಾದಿ ಹಾಕಿಕೊಟ್ಟ ಹಿರಿಮೆ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು. ದೇಶ ಇಂದು ಆರ್ಥಿಕವಾಗಿ ಸದೃಢವಾಗಲಿ ನಿಲ್ಲಲು ಸಿಂಗ್‌ ಅವರ ನೀತಿ ನಿರೂಪಣೆಗಳೇ ಕಾರಣ. ಅದರಲ್ಲೂ ಬಡವರು ಮತ್ತು ತುಳಿತಕ್ಕೊಳಗಾದವರ ಪರವಾಗಿ ಅವರ ಕಾಳಜಿ ಸ್ಮರಣೀಯ ಎಂದಿದ್ದಾರೆ.

ಸುದೀರ್ಘ ಅವಧಿಯ ಸಾರ್ವಜನಿಕ ಜೀವನದಲ್ಲಿ ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಸದಾ ನೆನಪಿನಲ್ಲಿಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಸಿಂಗ್ ಅವರ ಕೊಡುಗೆಯನ್ನು ಭಾರತ ಮರೆಯಲು ಸಾಧ್ಯವೇ ಇಲ್ಲ. ಆರ್ಥಿಕ ಶಿಲ್ಪಿ ಎಂದೇ ಖ್ಯಾತರಾಗಿದ್ದರು. ಆರ್ಥಿಕ ಸುಧಾರಣೆಗಳ ಬಗ್ಗೆ ಅವರ ದೃಷ್ಟಿಕೋನವು ಮಧ್ಯಮ ವರ್ಗದ ಜನರ ಕಲ್ಯಾಣಕ್ಕೆ ನೆರವಾಯಿತು. ಅಸಂಖ್ಯಾತ ಕುಟುಂಬಗಳನ್ನು ಬಡತನದಿಂದ ಹೊರತಂದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಡಾ. ಮನಮೋಹನ್‌ ಸಿಂಗ್ ಅವರು 2004ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದರು. 1991 ಮತ್ತು 1996ರ ನಡುವಿನ ಕಾಂಗ್ರೆಸ್‌ ನ  ಪಿ.ವಿ. ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಇವರು ಹಣಕಾಸು ಸಚಿವರಾಗಿದ್ದರು.

More articles

Latest article