ಬೆಂಗಳೂರು: ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡೆಯಬೇಕು ಎಂದರೆ ಒಂದೋ ಪುಡಿ ರೌಡಿಗಳಾಗಿರಬೇಕು, ಇಲ್ಲ ರೇಪಿಸ್ಟ್ ಆಗಿರಬೇಕು, ಕನಿಷ್ಟ ಪಕ್ಷ ಎರಡು ಮೂರು ಬಾರಿ ಜೈಲಿಗಾದರೂ ಹೋಗಿ ಬಂದಿರಬೇಕು. ಅಂತವರಿಗಾಗಿಯೇ ಪ್ರತ್ಯೇಕ ಸೆಲ್ ಮಾಡಿಕೊಂಡಿರುವ BJP Karnataka ಪವಿತ್ರ ಖಾದಿ ಬಟ್ಟೆ ಬಗ್ಗೆ ಮಾತಾಡುವುದು ಹಾಸ್ಯಸ್ಪದವಲ್ಲ, ಯಾವ ನೈತಿಕತೆಯೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಅವರು ಎಕ್ಸ್ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಅಧ್ಯಕ್ಷನೇ ಚೆಕ್ ಮೂಲಕ ಲಂಚ ಪಡೆದು ಹುದ್ದೆ ಗಿಟ್ಟಿಸಿಕೊಂಡಿರುವಾಗ, ಕೇಂದ್ರದ ಗೃಹ ಸಚಿವರನ್ನೇ ಕೋರ್ಟ್ ಗಡಿಪಾರು ಮಾಡಿರುವಾಗ, ರಾಜಧರ್ಮ ಪಾಲಿಸದ ಪ್ರಧಾನ ಮಂತ್ರಿಯೇ ಇರುವಾಗ ಉಳಿದವರದ್ದು ಯತಾ ರಾಜಾ, ತಥಾ ಪಟಾಲಂ ಅಲ್ವೇ.
ಆರ್.ಎಸ್‌ಎಸ್ ಬೆಳಕಿನ ಸಾಮ್ರಾಜ್ಯವೋ, ದೇಶಕ್ಕೆ ಅಂಟಿದ ಕಗ್ಗತ್ತಲೆಯ ಕಾರ್ಮೋಡವೋ ಎಂಬುದು ದೇಶದ ಜನರಿಗೆ ಗೊತ್ತಿದೆ. ಆರ್.ಎಸ್.ಎಸ್ ಅಂತರಂಗಗಳು ನರಕದ ಗರ್ಭಗುಡಿಯೊಳಗೆ ಬಚ್ಚಿಟ್ಟಿದ್ದಕ್ಕಿಂತ, ಹೂತಿಟ್ಟಿದ್ದೇ ಹೆಚ್ಚು. ಇಂತಹ ಪಾತಕಿತನಗಳನ್ನು ಬಯಲು ಮಾಡುತ್ತಲೇ ಇರುತ್ತೇನೆ. ಎರಡು ರೂಪಾಯಿಯ ಗತಿಗೇಡಿ ಭಕ್ತರ ಅಪಪ್ರಚಾರಕ್ಕೆ ಕಿವಿಗೊಡುವ ಪ್ರಶ್ನೆಯೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ.